ಭವಿಷ್ಯದಲ್ಲಿ ಒಳ್ಳೆಯ ಪೋಷಕ ನಟಿಯಾಗುವ ಎಲ್ಲಾ ಲಕ್ಷಣವನ್ನು ಹೊತ್ತುಕೊಂಡಿದ್ದವರು ಪವಿತ್ರಾ ಜಯರಾಂ. ಅದರಲ್ಲೂ ಸೀರಿಯಲ್ ನ ಖಳನಟಿಗೆ ಹೇಳಿ ಮಾಡಿಸಿದಂತಿದ್ದರು. ತ್ರಿಯನಿ ಧಾರಾವಾಹಿಯಲ್ಲಿ ಖಳನಟಿಯಾಗಿ ಎಲ್ಲರ ಮನಸ್ಸು ಗೆದ್ದಿದ್ದರು. ಆದರೆ ಅವರು ಕಾರು ಅಪಘಾತದಿಂದ ಸಾವನ್ನಪ್ಪಿದ್ದು, ನಿನ್ನೆ ಮಂಡ್ಯದಲ್ಲಿ ಅಂತ್ಯಕ್ರಿಯೆ ನೆರವೇರಿದೆ.
ಅಂತ್ಯಕ್ರಿಯೆ ಬಳಿಕ ಮಾತನಾಡಿದ ಪತಿ, ಕಾರು ಅಪಘಾತದಿಂದಾಗಿ ಪವಿತ್ರಾ ಸಾಯಲಿಲ್ಲ. ನಾವೂ ಮೂರು ಜನ ಬೆಂಗಳೂರಿನಿಂದ ಹೈದ್ರಬಾದ್ ಗೆ ಹೊರಟಿದ್ದೆವು. ಬೆಂಗಳೂರಿನಲ್ಲಿ ಜೋರು ಮಳೆಯಿದ್ದ ಕಾರಣ ಮೆಹಬೂಬ ನಗರ ತಲುಪುವಷ್ಟರಲ್ಲಿ ರಾತ್ರಿ 12.30 ಆಗಿತ್ತು. ಅಪಘಾತ ಆಗಿದ್ದು ನಿಜ ಆದರೆ ಯಾರಿಗೂ ದೊಡ್ಡಮಟ್ಟಕ್ಕೆ ಗಾಯಗಳಾಗುವಷ್ಟು ಅಪಘಾತವಾಗಿರಲಿಲ್ಲ. ನನಗೆ ಕೊಂಚ ತಲೆಗೆ, ಕೈಗೆ ಪೆಟ್ಟಾಗಿತ್ತು. ರಕ್ತ ಬರುತ್ತಿತ್ತು. ಪವಿತ್ರಾ ಅದನ್ನು ನೋಡಿ ಶಾಕ್ ಆಗಿದ್ದರು. ಆ ಕ್ಷಣದಲ್ಲಿ ಅವರಿಗೆ ಸ್ಟ್ರೋಕ್ ಆಗಿದೆ. ಅದರಿಂದಾನೇ ಸಾವನ್ನಪ್ಪಿದ್ದು. ವೈದ್ಯರು ಕೂಡ ಅದನ್ನೇ ಹೇಳಿದ್ದಾರೆ. ಸಡನ್ ಸ್ಟ್ರೋಕ್ ಆಗಿದ್ದರಿಂದ ಸಾವನ್ನಪ್ಪಿದ್ದಾರೆ ಎಂದಜ.
ಪವಿತ್ರಾಗೆ ನಟ ದರ್ಶನ್ ಸಿನಿಮಾದಲ್ಲಿ ನಟಿಸುವ ಅವಕಾಶವಿತ್ತು. ಹೀಗಾಗಿ ಸಹಿ ಮಾಡಲು ಬೆಂಗಳೂರಿಗೆ ಬಂದಿದ್ದೆವು. 25, 26ಕ್ಕೆ ಚಿತ್ರೀಕರಣಕ್ಕೆ ಬರಬೇಕಿತ್ತು. ಅದೇ ಸಮಯಕ್ಕೆ ತೆಲುಗಿನ ಜೆಮಿನಿ ವಾಹಿನಿ ಕಾರ್ಯಕ್ರಮದ ಒಪ್ಪಂದಕ್ಕೂ ಸಹಿ ಹಾಕಬೇಕಿತ್ತು. ಹೋಗಿ ಸಹಿ ಹಾಕಿ ಬಂದು ಬಿಡೋಣಾ ಎಂದು ಹೊರಟೆವು. ಅಪಘಾತ ನಡೆದಾಗ ಆಕೆ ಇನ್ನು ಉಸಿರಾಡುತ್ತಲೇ ಇದ್ದಳು. ಆದರೆ ಆಂಬುಲೆನ್ಸ್ ತಡವಾಗಿದ್ದಕ್ಕೆ ಜೀವ ಹೋಗಿದೆ. ನನಗೆ ಹೀಗೆ ಆಯ್ತಲ್ಲ ಎಂಬ ಭಯಕ್ಕೆ ಅವಳು ಪ್ರಜ್ಞೆ ತಪ್ಪಿದ್ದಳು’ ಎಂದಿದ್ದಾರೆ.
ಇಂದಿನಿಂದ ಬಜೆಟ್ ಅಧಿವೇಶನ ಆರಂಭವಾಗಲಿದೆ. ಬೆಳಗ್ಗೆ 11 ಗಂಟೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮಾ ಅವರು ಜಂಟಿ ಅಧಿವೇಶನ ಉದ್ದೇಶಿಸಿ…
ಸುದ್ದಿಒನ್ :ಮಕ್ಕಳಿಗೆ ಟೀ ಮತ್ತು ಕಾಫಿ ಕೊಡುವ ಮೊದಲು ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳಿವೆ. ಚಿಕ್ಕ ವಯಸ್ಸಿನಲ್ಲಿ ಚಹಾ ಅಥವಾ ಕಾಫಿ…
ಈ ರಾಶಿಯ ದಂಪತಿಗಳಿಗೆ ಅತಿಯಾದ ಕಿರುಕುಳದಿಂದ ಜಿಗುಪ್ಸೆ, ಶುಕ್ರವಾರದ ರಾಶಿ ಭವಿಷ್ಯ 31 ಜನವರಿ 2025 - ಸೂರ್ಯೋದಯ -…
ದಾವಣಗೆರೆ: ಇತ್ತೀಚೆಗೆ ಮೈಕ್ರೋ ಫೈನಾನ್ಸ್ ಕಾಟಕ್ಕೆ ರಾಜ್ಯದಲ್ಲಿ ಜೀವ ಕಳೆದುಕೊಂಡವರು ಅದೆಷ್ಟೋ. ಇದಕ್ಕೆ ಕಡಿವಾಣ ಹಾಕುವುದಕ್ಕೆ ಸರ್ಕಾರ ಕೂಡ ಸಭೆಗಳನ್ನ…
ಚಿತ್ರದುರ್ಗ. ಜ.30: ಮಹಾತ್ಮಾ ಗಾಂಧೀಜಿಯವರು ಹುತಾತ್ಮರಾದ ದಿನವಾದ ಜ. 30 ರಂದು ಸರ್ವೋದಯ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಈ ನಿಮಿತ್ತ ಅಪರ…
ಚಿತ್ರದುರ್ಗ. ಜ.30: ಚಿತ್ರದುರ್ಗ ತಾಲ್ಲೂಕಿನ ಕಾಲ್ಗೆರೆ ಹಾಗೂ ಇಸ್ಸಾಮುದ್ರ ಗ್ರಾಮ ಪಂಚಾಯಿತಿಗಳಿಗೆ ಗುರುವಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ…