ದಿನೇ ದಿನೇ ಕನ್ನಡಿಗರ ಮೇಲಿನ ದೌರ್ಜನ್ಯ ಜಾಸ್ತಿಯಾಗ್ತಾನೆ ಇದೆ. ಇದಕ್ಕೆ ಕಡಿವಾಣ ಯಾವಾಗ ಅನ್ನೋದು ಎಲ್ಲರ ಪ್ರಶ್ನೆಯಾಗಿದೆ. ಇದೊಇಗ ಮಹಾರಾಷ್ಟ್ರದಲ್ಲಿ ಕನ್ನಡಪರ ಸಂಘಟನೆಯ ಸದಸ್ಯನ ಮೇಲೆ ಮರಾಠಿಗರು ಹಲ್ಲೆ ಮಾಡಿದ್ದಾರೆ.
ಕನ್ನಡಪರ ಸಂಘಟನೆ ಸದಸ್ಯ ಸಿಎಂ ಶಿವಕುಮಾರ್ ನಾಯ್ಕ್ ಮೇಲೆ ಹಲ್ಲೆ ನಡೆದಿದೆ. ಒಂದು ವಾರದ ಹಿಂದಷ್ಟೇ ಈ ಸದಸ್ಯರು ಮಹಾರಾಷ್ಟ್ರಕ್ಕೆ ತೆರಳಿದ್ದರು. ನಿನ್ನೆ ಮಧ್ಯರಾತ್ರಿ ಈ ಘಟನೆ ನಡೆದಿದೆ. ಹತ್ತಾರು ಮರಾಠಿಗರು ಇವರಿದ್ದ ಲಾಡ್ಜ್ ಗೆ ತೆರಳಿ ಮನಬಂದಂತೆ ಥಳಿಸಿದ್ದಾರೆ.
ಬೆಳಗಾವಿಯಲ್ಲಿ ಎಂಇಎಸ್ ಪುಂಡರ ಪುಂಡಾಟಿಕೆಗೆ ಕನ್ನಡಪರ ಸಂಘಟನೆಯವರು ಬೇಸತ್ತಿದ್ದು, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವ್ರ ನಿವಾಸದೆದುರು ಪ್ರತಿಭಟನೆ ಮಾಡಲು ತೀರ್ಮಾನಿಸಿದ್ದರಂತೆ. ಇವರ ಚಲನವಲನ ಗಮನಿಸಿದ್ದ ಮರಾಠಿಗರು ಈ ಕೃತ್ಯ ಎಸಗಿದ್ದಾರೆ.