ಸುದ್ದಿಒನ್, ಚಿತ್ರದುರ್ಗ, ನವಂಬರ್.06 :ಹಿರಿಯ ಲೇಖಕ, ನಾಡೋಜ ಹಂಪನಾ ವಿರಚಿತ ದೇಸೀ ಕಾವ್ಯದ ರಂಗರೂಪ ‘ಚಾರುವಸಂತ’ ನಾಟಕದ ಪ್ರದರ್ಶನ ನವೆಂಬರ್ 8 ರಂದು ಬುಧವಾರ ತರಾಸು ರಂಗಮಂದಿರದಲ್ಲಿ ಜರುಗಲಿದೆ.
ದಕ್ಷಿಣ ಕನ್ನಡ ಜಿಲ್ಲೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 40 ಕ್ಕೂ ಹೆಚ್ಚು ನುರಿತ ಕಲಾವಿದರ ತಂಡ ಪ್ರದರ್ಶನ ನೀಡಲಿದೆ. ಡಾ. ನಾ. ದಾಮೋದರ ಶೆಟ್ಟಿ ರಂಗರೂಪ ನೀಡಿದ್ದಾರೆ. ಡಾ.ಜೀವನ್ ರಾಂ ಸುಳ್ಯ ನಿರ್ದೇಶಿಸಿದ್ದಾರೆ.
ಸಭಾ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರ ಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೆಶಕ ಎಸ್.ಕೆ.ಮಲ್ಲಿಕಾರ್ಜುನ, ಕಸಾಪ ಅಧ್ಯಕ್ಷ ಕೆ.ಎಂ. ಶಿವಸ್ವಾಮಿ, ಕಾರ್ಯದರ್ಶಿಗಳಾದ ಕೆ.ಪಿ.ಎಂ.ಗಣೇಶ್, ವಿ.ಶ್ರೀನಿವಾಸ್ ಮಳಲಿ ಭಾಗವಹಿಲಿದ್ದಾರೆ.
ಚಿತ್ರದುರ್ಗ ನಗರದಲ್ಲಿ ಒಂದೇ ಪ್ರದರ್ಶನ ಮಾತ್ರ ನಿಗದಿಯಾಗಿದೆ. ಸಂಜೆ 6 ಗಂಟೆಗೆ ಆರಂಭವಾಗುವ ನಾಟಕ ಪ್ರದರ್ಶನಕ್ಕೆ ಹದಿನೈದು ನಿಮಿಷ ಮುಂಚಿತವಾಗಿ ಆಗಮಿಸಿಲು ಕೋರಲಾಗಿದೆ. ನಾಟಕ ಪ್ರದರ್ಶನ ಉಚಿತವಾಗಿದ್ದು, ಸಾಹಿತ್ಯ ಹಾಗೂ ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲು ಜಿಲ್ಲಾ ಕಸಾಪ ಅಧ್ಯಕ್ಷ
ಕೆ.ಎಂ. ಶಿವಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.