ಗಂಡ ಸತ್ತ ಮೇಲೆ ಖಿನ್ನತೆಗೆ ಒಳಗಾದ ಹೆಂಡತಿ 13 ವರ್ಷದ ಮಗನನ್ನು ಸಾಯಿಸಿ, ತಾನೂ ಆತ್ಮಹತ್ಯೆ : ಬೆಂಗಳೂರಲ್ಲೊಂದು ಹೃದಯ ವಿದ್ರಾವಕ ಘಟನೆ..!

 

ಬೆಂಗಳೂರು: ಯಲಹಂಕದ RNZ ಅಪಾರ್ಟ್ಮೆಂಟ್ ನಲ್ಲಿ ತನ್ನ 13 ವರ್ಷದ ಮಗನನ್ನು ಕೊಂದು ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 13 ವರ್ಷದ ಭಾರ್ಗವ್ ಪುಲಿವರ್ತ ಹಾಗೂ 40 ವರ್ಷದ ರಮ್ಯಾ ಮೃತರು. 19 ವರ್ಷದ ಮಗಳು ಪಿಜಿ ಯಲ್ಲಿದ್ದು ಓದುತ್ತಿದ್ದಾಳೆ.

ರಮ್ಯಾ, ಶ್ರೀದರ್ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರದ್ದು ಅಂತರ್ಜಾತಿ ವಿವಾಹವಾಗಿತ್ತು. ದಂಪತಿಗೆ ಇಬ್ಬರು ಮಕ್ಕಳಿದ್ದರು. ಆದರೆ ಕಳೆದ ಮೂರು‌ ತಿಂಗಳ ಹಿಂದೆ ಶ್ರೀದರ್ ನಿಧನರಾಗಿದ್ದರು. ಇದಾದ ಮೇಲೆ ಎಲ್ಲಾ ಜವಾಬ್ದಾರಿ ರಮ್ಯಾ ಮೇಲೆ ಬಿತ್ತು. ಇವರಿದ್ದ ಪ್ಲ್ಯಾಟ್ ಬಾಡಿಗೆ 45 ಸಾವಿರ, ಮಕ್ಕಳ ಶಿಕ್ಷಣ ಹೀಗೆ ಮನೆ ಖರ್ಚೆಲ್ಲಾ ರಮ್ಯಾಗೆ ನಿಭಾಯಿಸುವುದಕ್ಕೆ ಕಷ್ಟವಾಯಿತು. ಗಂಡನ ಸಾವಿನ ಬಳಿಕ ರಮ್ಯಾ ಅವರು ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಎಷ್ಟೋ ಸಲ ನಾನೂ ಸಾಯಿತ್ತೀನಿ ಎಂದೆಲ್ಲಾ ಹೇಳಿದ್ದರಂತೆ.

ಇದೀಗ ಮಗನನ್ನು ಕೊಂದು, ತಾನೂ ನೇಣಿಗೆ ಶರಣಾಗಿದ್ದಾರೆ. ಮೊದಲಿಗೆ ಮಗನಿಗೆ ನೇಣು ಬಿಗಿದು ಕೊಲ್ಲಲಾಗಿದೆ. ಬಳಿಕ ಆತನನ್ನು ಹಾಸಿಗೆ ಮೇಲೆ ಮಲಗಿಸಿ, ರಮ್ಯಾ ಅವರು ನೇಣಿ ಬಿಗಿದುಕೊಂಡು ಸಾವನ್ನಪ್ಪಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ರಮ್ಯಾ ಅವರು ಈ ಸಂಬಂಧ ಪೊಲೀಸರು, ಡಾಕ್ಟರ್ ಹಾಗೂ ಮಗಳಿಗೆ ಪತ್ರ ಬರೆದಿಟ್ಟಿದ್ದಾರೆ. ಮಗಳು ಇನ್ನು ಓದುತ್ತಿದ್ದಾಳೆ. 19 ವರ್ಷ. ಈಗ ಮಗಳಿಗೂ ಯಾರು ದಿಕ್ಕು ಎಂಬ ಚಿಂತೆ ಕಾಡುತ್ತಿದೆ. ಅಮ್ಮ, ತಮ್ಮನನ್ನು ಕಳೆದುಕೊಂಡ ಆ ಯುವತಿ ಈಗ ಕಣ್ಣೀರಿಡುತ್ತಿದ್ದಾಳೆ.

suddionenews

Recent Posts

16ನೇ ಬಜೆಟ್ ಮಂಡನೆಗೆ ಸಿಎಂ ಸಿದ್ಧತೆ : ಅಷ್ಟು ಸಮಯ ನಿಂತುಕೊಳ್ಳಲು ಸಾಧ್ಯವಾ ಈ ಬಾರಿ..?

ಬೆಂಗಳೂರು: ರಾಜ್ಯ ಬಜೆಟ್ ಮಂಡನೆಗೆ ದಿನಗಣನೆ ಶುರುವಾಗಿದೆ. ಗ್ಯಾರಂಟಿ ಯೋಜನೆಗಳ ನಡುವೆ ಇನ್ನು ಏನೆಲ್ಲಾ ಕೊಡಬಹುದು ಎಂಬ ನಿರೀಕ್ಷೆಗಳು ಜನ…

6 hours ago

ಭೀಮಸಮುದ್ರದಲ್ಲಿ ಮೈನ್ಸ್ ಲಾರಿಗಳನ್ನು ತಡೆದು ಪ್ರತಿಭಟನೆ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ಫೆ. 20…

8 hours ago

ಸರ್ವಜ್ಞನ ತಿಪದಿಗಳಲ್ಲಿನ ಮೌಲ್ಯಗಳನ್ನು ಅಳವಡಿಸಿಕೊಳ್ಳೋಣ : ಶಾಸಕ ಟಿ ರಘುಮೂರ್ತಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳೆಗೆರೆ, ಚಳ್ಳಕೆರೆ, ಮೊ : 84314 13188 ಸುದ್ದಿಒನ್, ಚಳ್ಳಕೆರೆ, ಫೆಬ್ರವರಿ. 20…

8 hours ago

ಕರ್ನಾಟಕದ ಮುಂದಿನ ಸಿಎಂ ಲಕ್ಷ್ಮೀ ಹೆಬ್ಬಾಳ್ಕರ್ : ನಿಜವಾಗುತ್ತಾ ಪ್ರಶಾಂತ್ ಕಿಣಿ ಭವಿಷ್ಯ..?

      ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾವಣೆಯ ಚರ್ಚೆ ಜೋರಾಗಿದೆ. ಸಿದ್ದರಾಮಯ್ಯನವರು ಖುರ್ಚಿ ಬಿಟ್ಟುಕೊಟ್ಟರೆ ಕೂರೋದಕ್ಕೆ ಹಲವರು ಇದ್ದಾರೆ.…

9 hours ago

ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆ ಬಗ್ಗೆ ಅರಿವು ಮೂಡಿಸಿ : ನ್ಯಾಯಾಧೀಶರಾದ ಆರ್.ಸಹನಾ

    ಚಿತ್ರದುರ್ಗ. ಫೆ.20: “ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆ” ಕುರಿತು ಮಹಿಳೆಯರಿಗೆ ಹೆಚ್ಚಿನ ಅರಿವು ಮೂಡಿಸಬೇಕು ಎಂದು ಜಿಲ್ಲಾ…

9 hours ago

ಕರ್ನಾಟಕಕ್ಕೆ ಪರ್ಯಾಯ ರಾಜಕಾರಣ ವ್ಯವಸ್ಥೆಯ ಅವಶ್ಯಕತೆ ಇದೆ : ನಟ ಚೇತನ್

ಹಿರಿಯೂರು, ಫೆಬ್ರವರಿ. 20: ರಾಜ್ಯದಲ್ಲಿ ಸಮಸಮಾಜ ನಿರ್ಮಾಣ ಮಾಡಲು ನಾವೆಲ್ಲರೂ ಒಂದಾಗಬೇಕು ಎಂದು ಸಾಮಾಜಿಕ ಹೋರಾಟಗಾರ ಹಾಗೂ ನಟ ಚೇತನ್…

10 hours ago