Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಹೇಮರಡ್ಡಿ ಮಲ್ಲಮ್ಮ ಹೆಸರಿನಲ್ಲಿ ವಿಶ್ವವಿದ್ಯಾನಿಲಯ ಮತ್ತು ಸಂಶೋಧನಾ ಕೇಂದ್ರಕ್ಕೆ ಒತ್ತಾಯ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, (ಮೇ.29) : ಮಹಾಸಾದ್ವಿ, ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸಂಶೋಧನೆ ಕಡಿಮೆಯಾಗಿರುವುದರಿಂದ ಹೇಮರಡ್ಡಿ ಮಲ್ಲಮ್ಮ ಹೆಸರಿನಲ್ಲಿ ವಿಶ್ವವಿದ್ಯಾನಿಲಯ ತೆರೆದು ಸಂಶೋಧನೆ ಆರಂಭಿಸುವಂತೆ ಸರ್ಕಾರಕ್ಕೆ ಒತ್ತಾಯಿಸಬೇಕಿದೆ ಎಂದು ಬೆಂಗಳೂರಿನ ರಾಮಯ್ಯ ವಿಶ್ವವಿದ್ಯಾನಿಲಯದ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಸಂಶೋಧನೆ ವಿಭಾಗದ ಅಸೋಸಿಯೇಟ್ ಡೀನ್ ಡಾ.ಟಿ.ಎನ್. ನಿರಂಜನಪ್ರಭು ಸಲಹೆ ನೀಡಿದರು.

ನಗರದ ಜಿಲ್ಲಾ ವೀರಶೈವ ಲಿಂಗಾಯಿತ ಹೇಮರಡ್ಡಿ ಮಲ್ಲಮ್ಮ ಸಮಾಜದ ವತಿಯಿಂದ ತ.ರಾ.ಸು.ರಂಗಮಂದಿರದಲ್ಲಿ ಸೋಮವಾರ ನಡೆದ ಹೇಮರಡ್ಡಿ ಮಲ್ಲಮ್ಮ ಜಯಂತಿ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಉಪನ್ಯಾಸ ನೀಡಿದ ಅವರು ವಿಶ್ವವಿದ್ಯಾನಿಲಯಗಳಲ್ಲಿ ಸಂಶೋಧನೆ ಆಗಬೇಕಿದೆ. ಹದಿನೈದನೆ ಶತಮಾನದಲ್ಲಿ ಆಂಧ್ರದ ರಾಮಾಪುರದಲ್ಲಿ ಜನಿಸಿದ ಶಿವಶರಣೆ ಹೇಮರಡ್ಡಿ ಮಲ್ಲಮ್ಮನ ಚರಿತ್ರೆ ಬೇರೆಯವರಿಗೆ ಮಾದರಿಯಾಗಬೇಕು. ಗಂಡನ ಮನೆಯಲ್ಲಿ ಅತ್ತೆ, ನಾದಿನಿ ನೀಡುವ ಎಲ್ಲಾ ಬಗೆಯ ಕಷ್ಟಗಳನ್ನು ಸಹಿಸಿಕೊಂಡು ಮಲ್ಲಿಕಾರ್ಜುನನ ಭಕ್ತೆಯಾದಳು. ಅವರಲ್ಲಿದ್ದ ಗುಣ ವಿಶೇಷತೆಗಳನ್ನು ಪ್ರತಿಯೊಬ್ಬರು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಮಹಿಳೆ ಕೂಡ ಶಿವಶರಣೆ ಆಗಬಲ್ಲಳು ಎನ್ನುವುದನ್ನು ತೋರಿಸಿಕೊಟ್ಟ ಹೇಮರಡ್ಡಿ ಮಲ್ಲಮ್ಮ ಸಂಸಾರದಲ್ಲಿದ್ದುಕೊಂಡು ಶಿವಶರಣೆಯಾಗುತ್ತಾಳೆ. ಇತಿಹಾಸದಿಂದ ಕಲಿಯುವ ಪಾಠ ಸಾಕಷ್ಟಿದೆ. ಮಹಿಳೆಯ ಸಮಾನತೆಗೆ 600 ವರ್ಷಗಳ ಹಿಂದೆಯೇ ಒತ್ತು ಕೊಟ್ಟಳು. ಎಲ್ಲರ ಬದುಕಿನಲ್ಲಿಯೂ ಒಂದೊಂದು ರೀತಿಯ ಸಮಸ್ಯೆ ಸವಾಲು ಕಷ್ಟಗಳು ಇರುತ್ತದೆ. ಹಾಗಂತ ಕುಗ್ಗಬಾರದು. ಗುರಿಗಳನ್ನು ಕಟ್ಟಿಕೊಳ್ಳಿ. ಅಕ್ಕಮಹಾದೇವಿ, ರಾಣಿಚೆನ್ನಮ್ಮನ ವಿಶ್ವವಿದ್ಯಾನಿಲಯವಿದೆ. ಅದೇ ರೀತಿ ಹೇಮರಡ್ಡಿ ಮಲ್ಲಮ್ಮ ಹೆಸರಿನಲ್ಲಿ ವಿಶ್ವವಿದ್ಯಾನಿಲಯ ತೆರೆದು ಹೆಚ್ಚಿನ ಸಂಶೋಧನೆ ನಡೆಸುವಂತೆ ಸರ್ಕಾರಕ್ಕೆ ಮನವಿ ಕೊಡಿ ಎಂದು ಜಿಲ್ಲಾ ವೀರಶೈವ ಲಿಂಗಾಯಿತ ಹೇಮರೆಡ್ಡಿ ಮಲ್ಲಮ್ಮ ಸಮಾಜಕ್ಕೆ ಡಾ.ಟಿ.ಎನ್.ನಿರಂಜನ ಪ್ರಭು ಕರೆ ನೀಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹೆಚ್.ಟಿ.ನಾಗಿರೆಡ್ಡಿ ಮಾತನಾಡಿ ವೀರಶೈವ ಲಿಂಗಾಯಿತ ಹೇಮರಡ್ಡಿ ಮಲ್ಲಮ್ಮ ಸಮಾಜ ಮೊದಲು ಮುಂಚೂಣಿಗೆ ಬರುತ್ತಿರಲಿಲ್ಲ. ಈಗೀಗ ಪ್ರತಿ ವರ್ಷ ಹೇಮರಡ್ಡಿ ಮಲ್ಲಮ್ಮ ಜಯಂತಿಯನ್ನು ಆಚರಿಸಿಕೊಂಡು ಬರುತ್ತಿದೆ. ವೀರಶೈವ ಲಿಂಗಾಯಿತರು ಎಲ್ಲರೂ ಒಂದೆ ಎಂದುಕೊಂಡಿದ್ದೆವು. ಹತ್ತಾರು ಮಠಾಧೀಶರುಗಳು ಹುಟ್ಟಿಕೊಂಡಿರುವುದರಿಂದ ಒಂದೊಂದು ಒಳ ಪಂಗಡಗಳಾಗಿವೆ. ಸಮಾಜವನ್ನು ಸದೃಢವಾಗಿ ಕಟ್ಟಿ ಪೀಳಿಗೆಯನ್ನು ಮುಂದೆ ತರಬೇಕೆಂದರು.

ಶೈವ ಪಥದಲ್ಲಿ ಜನಿಸಿದ ಹೇಮರಡ್ಡಿ ಮಲ್ಲಮ್ಮ ಸಂಸಾರದಲ್ಲಿ ಅನೇಕ ಕಷ್ಟಗಳನ್ನು ಎದುರಿಸಿದರೂ ಎಲ್ಲಿಯೂ ತನ್ನ ನೋವನ್ನು ಹೇಳಿಕೊಳ್ಳಲಿಲ್ಲ. ಮಲ್ಲಿಕಾರ್ಜುನನ ಪರಮ ಭಕ್ತಳಾಗಿದ್ದಳು. ಹಾಗಾಗಿ ಮಲ್ಲಮ್ಮನ ಜೀವನ ಚರಿತ್ರೆಯನ್ನು ಎಲ್ಲರೂ ಓದಬೇಕು ಎಂದು ತಿಳಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ರವಿಶಂರ್‍ರೆಡ್ಡಿ ಮಾತನಾಡಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮನ ಆದರ್ಶಗಳಂತೆ ಎಲ್ಲರೂ ನಡೆದಾಗ ನಿಜವಾಗಿಯೂ ಅವರ ಜಯಂತಿಗೆ ಅರ್ಥ ಬರುತ್ತದೆ. ಕೋವಿಡ್ ಸಂದರ್ಭದಲ್ಲಿ ನಮ್ಮ ಜಿಲ್ಲೆಯ ಶಿಕ್ಷಕರುಗಳು ದೃತಿಗೆಡದೆ ಮಕ್ಕಳಿಗೆ ಪಾಠ ಹೇಳಿದ್ದಾರೆ.

ಹೇಮರಡ್ಡಿ ಮಲ್ಲಮ್ಮ ಕಾಯಕದಲ್ಲಿ ದೇವರನ್ನು ಕಂಡುಕೊಂಡವಳು. ಈ ಬಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಇಡಿ ರಾಜ್ಯಕ್ಕೆ ಚಿತ್ರದುರ್ಗ ಮೊದಲನೇ ಸ್ಥಾನ ಗಳಿಸಿರುವುದರ ಹಿಂದೆ ಅನೇಕ ವರ್ಷಗಳ ಕಠಿಣ ಪರಿಶ್ರಮವಿದೆ. ಮಕ್ಕಳು ಒಳ್ಳೆಯ ಕನಸು ಕಾಣಿ. ಕನಸು ನನಸಾಗಬೇಕಾದರೆ ಪರಿಶ್ರಮ ಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಸಮಾಜದಲ್ಲಿ ಮೌಲ್ಯಗಳು ಮಾಯವಾಗುತ್ತಿರುವುದು ನೋವಿನ ಸಂಗತಿ. ಇದು ಸ್ಪರ್ಧಾತ್ಮಕ ಯುಗ. ಗುರಿ ದೊಡ್ಡದಾಗಿದ್ದರೆ ಸಾಧನೆ ದೊಡ್ಡದಾಗಿರುತ್ತದೆ. ಶಿಕ್ಷಣದ ಜೊತೆ ಪ್ರಜಾಪ್ರಭುತ್ವದಲ್ಲಿ ಬದುಕಿಗೆ ಬೇಕಾದ ಕೌಶಲ್ಯವನ್ನು ಕಲಿಯಿರಿ. ಓದುವ ಹವ್ಯಾಸ, ಸ್ಪರ್ಧೆಯಲ್ಲಿ ಭಾಗವಹಿಸುವ ಧೈರ್ಯ ಬೆಳೆಸಿಕೊಳ್ಳಿ. ಮಕ್ಕಳಿಗೆ ಆತ್ಮವಿಶ್ವಾಸ ತುಂಬುವ ಶಿಕ್ಷಣ ಕೊಡಬೇಕಿದೆ ಎಂದರು.

ಭದ್ರಾಮೇಲ್ದಂಡೆ ಯೋಜನೆ ಕಾರ್ಯಪಾಲಕ ಇಂಜಿನಿಯರ್ ಆರ್.ಚಂದ್ರಮೌಳಿ ಮಾತನಾಡಿ ಹದಿನಾಲ್ಕು ದೇಶಗಳನ್ನು ತಿರುಗುವ ಅವಕಾಶ ನನಗೆ ಸಿಕ್ಕಿತು. 2001 ರಲ್ಲಿ ಡೆಹರಾಡೂನ್‍ಗೆ ಹೋಗಿದ್ದೆ. ಆಗ ಅಲ್ಲಿನ ಒಬ್ಬ ಟ್ಯಾಕ್ಸಿ ಚಾಲಕ ತನ್ನ ದೇಶದ ಬಗ್ಗೆ ತೋರಿದ ಕಾಳಜಿ ನನಗೆ ತುಂಬಾ ಹಿಡಿಸಿತು. ಭಾರತದಲ್ಲಿ ದೇಶಪ್ರೇಮವಿರುವವರು ತುಂಬಾ ವಿರಳ. ಎಲ್ಲಿಯವರೆಗೂ ದೇಶಭಕ್ತಿ ಬೆಳೆಸಿಕೊಳ್ಳುವುದಿಲ್ಲವೋ ಅಲ್ಲಿಯತನಕ ಉದ್ದಾರವಾಗುವುದು ಕಷ್ಟ. ಪ್ರತಿಭಾವಂತ ಮಕ್ಕಳು ದೇಶಕ್ಕೆ ಆಸ್ತಿಯಾಗಬೇಕೆಂದು ಹಾರೈಸಿದರು.

ಜಿಲ್ಲಾ ವೀರಶೈವ ಲಿಂಗಾಯಿತ ಹೇಮರಡ್ಡಿ ಮಲ್ಲಮ್ಮ ಸಮಾಜದ ಅಧ್ಯಕ್ಷ ಜಿ.ಚಿದಾನಂದಪ್ಪ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯದರ್ಶಿ ಡಿ.ಟಿ.ಶಿವಾನಂದಪ್ಪ, ಮಹೇಶ್ ವೇದಿಕೆಯಲ್ಲಿದ್ದರು.

ಕು.ಶುಭಂ ಪ್ರಾರ್ಥಿಸಿದರು. ಸತೀಶ್ ಪಿ.ಆರ್.ಸ್ವಾಗತಿಸಿದರು. ನಾಗರಾಜ್ ಸಂಗಂ ನಿರೂಪಿಸಿದರು.

ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ.ಯಲ್ಲಿ ಹೆಚ್ಚು ಅಂಕಗಳನ್ನು ಪಡೆದಿರುವ ವೀರಶೈವ ಲಿಂಗಾಯಿತ ಹೇಮರಡ್ಡಿ ಮಲ್ಲಮ್ಮ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕರಿಸಲಾಯಿತು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಕಾಮಾಲೆ (ಜಾಂಡೀಸ್) ರೋಗ ಎಂದರೇನು ? ಇಲ್ಲಿದೆ ಉಪಯುಕ್ತ ಮಾಹಿತಿ….!

ಕಾಮಾಲೆ ಅಥವಾ ಜಾಂಡೀಸ್ ಎನ್ನುವುದು ಹತ್ತು ಹಲವು ರೋಗಗಳಲ್ಲಿ ಕಂಡು ಬರುವ ದೇಹ ಸ್ಥಿತಿಯಾಗಿರುತ್ತದೆ. ಹಲವಾರು ಕಾರಣಗಳಿಂದ ಕಾಮಾಲೆ ರೋಗ ಬರುವ ಸಾಧ್ಯತೆ ಇರುತ್ತದೆ. ಕಾಮಾಲೆ ಎಂಬ ಪದವು ಕಾಮ ಮತ್ತು ಲಾ ಎಂಬ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ: ಈ ರಾಶಿಯ ಕುಟುಂಬದಲ್ಲಿ ಕಲಹಗಳು ಆಗಲು ದಾಯಾದಿಗಳೇ ಕಾರಣ : ಈ ರಾಶಿಯ ಗಂಡ ಹೆಂಡತಿ ದೂರವಾಗಲು ಹಿತೈಷಿಗಳೇ ಕಾರಣ : ಶನಿವಾರ-ರಾಶಿ ಭವಿಷ್ಯ

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

error: Content is protected !!