ಲಕ್ನೋ: ಈಗ ಐದು ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಅನೌನ್ಸ್ ಆಗಿದೆ. ಈಗ ಎಲ್ಲಾ ಪಕ್ಷಗಳಿಗೂ ಗೆಲುವಿನ ಮೇಲೆ ಚಿತ್ತ ನೆಟ್ಟಿದೆ. ಆದ್ರೆ ಭರ್ಜರಿ ಪ್ರಚಾರಕ್ಕೆ ಚುನಾವಣಾ ಆಯೋಗವೆ ಬ್ರೇಕ್ ಹಾಕಿರುವುದು ಪಕ್ಷಗಳಿಗೆ ಕೊಂಚ ಕಷ್ಟವಾದಂತಾಗಿದೆ. ಆದರೂ ಗೆಲ್ಲಲೇಬೇಕೆಂಬುದು ಎಲ್ಲಾ ಪಕ್ಷಗಳಿಗೂ ಪ್ರತಿಷ್ಠೆಯಾಗಿದೆ.
ಉತ್ತರ ಪ್ರದೇಶದಲ್ಲೂ ವಿಧಾನಸಭಾ ಚುನಾವಣೆ ಅನೌನ್ಸ್ ಆಗಿದ್ದು, ಬಹುಜನ ಸಮಾಜಪಕ್ಷದ ಮುಖ್ಯಸ್ಥೆ ಮಾಯಾವತಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಸರ್ಕಾರಿ ಯಂತ್ರಗಳು ಮತ್ತು ಮತಯಂತ್ರಗಳನ್ನ ದುರುಪಯೋಗಪಡಿಸಿಕೊಳ್ಳದೇ ಇದ್ದರೆ ಬಿಜೆಪಿ ಖಂಡಿತ ಸೋಲು ಅನುಭವಿಸುತ್ತೆ ಎಂದಿದ್ದಾರೆ.
ಚುನಾವಣಾ ಆಯೋಗವು ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ಚುನಾವಣೆಯನ್ನು ಖಾತ್ರಿಪಡಿಸಬೇಕು. ಐದು ರಾಜ್ಯಗಳ ವಿಧಾನಸಭಾ ಚುನಾವಣೆಯು ಶಾಂತಿಯುತವಾಗಿ ನಡೆಯಬೇಕು. ಪೊಲೀಸರು ಕೂಡ ಪಕ್ಷಪಾತವಿಲ್ಲದೆ ಕಾರ್ಯನಿರ್ವಹಿಸಬೇಕು. ಫೆಬ್ರವರಿ 10 ರಿಂದ ಚುನಾವಣೆ ನಡೆಯಲಿದೆ ಎಂದಿದ್ದಾರೆ.
ಇನ್ನು ಉತ್ತರಪ್ರದೇಶದ ಅಭಿವೃದ್ಧಿಗಾಗಿ ಜನ ನಮ್ಮ ಪಕ್ಷಕ್ಕೆ ಮತ ನೀಡಬೇಕು. ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ನಮ್ಮ ಪಕ್ಷವೂ ಚುನಾವಣಾ ಆಯೋಗ ನೀಡುವ ಎಲ್ಲಾ ನಿಯಮಗಳನ್ನು ಪಾಲಿಸುತ್ತದೆ ಎಂದು ಮಾಯಾವತಿ ತಿಳಿಸಿದ್ದಾರೆ.