ಚಿಕ್ಕಬಳ್ಳಾಪುರ : ಕಳೆದ ಕೆಲವು ದಿನಗಳ ಹಿಂದೆ ಜಿಲ್ಲೆಯಲ್ಲಿ ಎರಡು ಬಾರಿ ಭೂಕಂಪನವಾಗಿ ಗ್ರಾಮದ ಜನ ಭಯಭೀತರಾಗಿದ್ದಾರೆ. ಇದಕ್ಕೆಲ್ಲ ಗಣಿಗಾರಿಕೆಯೇ ಕಾರಣ ಗಣಿಗಾರಿಕೆ ಎಂದೇ ಹೇಳಲಾಗುತ್ತಿದೆ. ಹೀಗಾಗಿ ಸಚಿವ ಸುಧಾಕರ್ ಈ ಕ್ಷಣದಿಂದಲೇ ಗಣಿಗಾರಿಕೆ ನಿಲ್ಲಿಸಲು ರೆಡಿ ಎಂದಿದ್ದಾರೆ.
ಈಗಾಗಲೇ ಭೂಕಂಪನಕ್ಕೆ ಕಾರಣ ಏನೆಂಬುದನ್ನು ಅಧಿಕಾರಿಗಳು ಹುಡುಕುತ್ತಿದ್ದಾರೆ. ಈ ಬೆನ್ನಲ್ಲೇ ಗ್ರಾಮಸ್ಥರು ಇಲ್ಲಿನ ಗಣಿಗಾರಿಕೆಯಿಂದಲೇ ಈ ರೀತಿಯ ತೊಂದರೆ ಆಗುತ್ತಿರುವುದು ಎಂದಿದ್ದಾರೆ. ಗ್ರಾಮಸ್ಥರ ಮಾತನ್ನ ಆಲಿಸಿದ ಸಚಿವ ಸುಧಾಕರ್, ಗಣಿಗಾರಿಕೆಯಿಂದಲೇ ಈ ರೀತಿಯ ತೊಂದರೆಯಾಗುತ್ತೆ ಎನ್ನುವುದಾದರೇ ನಾನು ಈ ಕ್ಷಣದಿಂದಲೇ ಗಣಿಗಾರಿಕೆ ನಿಲ್ಲಿಸಲು ಸಿದ್ಧನಿದ್ದೇನೆ.
ಈ ಬಗ್ಗೆ ವಿಜ್ಞಾನಿಗಳು ಮಾಹಿತಿ ನೀಡಬೇಕು. ಯಾರು ಕಂಟ್ರೋಲ್ ಬ್ಲಾಸ್ಟಿಂಗ್ ಮಾಡದಿದ್ದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ. ಇನ್ನು ಕಳೆದ ಒಂದು ತಿಂಗಳಲ್ಲಿ ಬಂಡಹಳ್ಳಿ, ಪಿಲ್ಲಗುಂಡ್ಲಹಳ್ಳಿ ಹಾಗೂ ಶೆಟ್ಟಿಗೆರೆ ಗ್ರಾಮಗಳಲ್ಲಿ ಪದೇ ಪದೇ ಭೂಮಿ ಕಂಪಿಸುತ್ತಿದೆ. ರಿಕ್ಟರ್ ಮಾಪನದಲ್ಲೂ, 3 ಬಾರಿ ಭೂಕಂಪನದ ತೀವ್ರತೆಯ ಪ್ರಮಾಣವೂ ದಾಖಲಾಗಿತ್ತು. ಇದರಿಂದ ನೂರಾರು ಮನೆಯ ಗೋಡೆಗಳು ಬಿರುಕುಬಿಟ್ಟಿದೆ.