ಸದ್ಯ ಎಲ್ಲೆಡೆ ಕೊರೊನಾ ಮತ್ತೆ ಹೆಚ್ಚಳವಾಗುತ್ತಿದ್ದು, ಇದು ಕ್ರಿಕೆಟ್ ಆಟದ ಮೇಲೂ ಪರಿಣಾಮ ಬೀರುತ್ತಿದೆ. ಈಗಾಗಲೇ ಎಲ್ಲಾ ರಾಜ್ಯ ಕ್ರಿಕೆಟ್ ಮಂಡಳಿಗೆ ಬಿಸಿಸಿಐ ಸೂಚನೆ ನೀಡಿದೆ. ಕೊರೊನಾ ನಿಯಂತ್ರಣಕ್ಕೆ ಬಂದ ಬಳಿಕ ದೇಶಿ ಕ್ರಿಕೆಟ್ ಪಂದ್ಯಾವಳಿಯನ್ನ ಆಯೋಜಿಸಲಾಗುವುದು ಎಂದಿದೆ. ಈ ಬೆನ್ನಲ್ಲೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕಳೆದ ಬಾರಿಯಂತೆ ಈ ಬಾರಿ ಕೂಟವನ್ನ ಎದ್ದುಗೊಳಿಸಲ್ಲ ಎಂದು ಭರವಸೆಯನ್ನು ನೀಡಿದ್ದಾರೆ.
ಕೊರಿನಾ ಹೆಚ್ಚಳದ ಹಿನ್ನೆಲೆ ಸದ್ಯದ ಮಟ್ಟಿಗೆ ರಣಜಿ ಕೂಟವನ್ನ ಮುಂದುವರೆಸಿದ್ದಾರೆ. ಇದು ಆಟಗಾರರ ಆರೋಗ್ಯದ ದೃಷ್ಟಿಯಿಂದ ಎಂಬುದನ್ನು ಈಗಾಗಲೇ ತಿಳಿಸಲಾಗಿದೆ. ಆದ್ರೆ ಕ್ರಿಕೆಟ್ ಅಭಿಮಾನಿಗಳಿಗೆಲ್ಲಾ ಮತ್ತೆ ಇನ್ನೆಲ್ಲಿ ರಣಜಿ ಕೂಟ ಈ ಬಾರಿಯೂ ರದ್ದಾಗುತ್ತೋ ಅನ್ನೋ ಬೇಸರವಿತ್ತು. ಆದ್ರೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನೀಡಿರುವ ಭರವಸೆ ಎಲ್ಲರಿಗೂ ಸಂತಸ ತಂದಿದೆ.
ದೇಶದಲ್ಲಿ ಕೋವಿಡ್ ನಿಯಂತ್ರಣಕ್ಕೆ ಬಂದ ಬಳಿಕ ಖಂಡಿತ ಕೂಟವನ್ನು ನಡೆಸುತ್ತೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂಬ ಭರವಸೆಯನ್ನ ನೀಡಿದ್ದಾರೆ.