ಬೆಂಗಳೂರು: ಇದೇ ಜನವರಿ 9ರಿಂದ ಮೇಕೆದಾಟು ಯೋಜನೆಗೆ ಆಗ್ರಹಿಸಿ, ಪಾದಯಾತ್ರೆ ಮಾಡಲು ಸಜ್ಜಾಗಿದ್ದರು. ಆದ್ರೆ ಕೊರೊನಾ ಟಫ್ ರೂಲ್ಸ್ ನಿಂದಾಗಿ ಪಾದಯಾತ್ರೆ ಕೈ ಬಿಟ್ಟು ನೀರಿಗಾಗಿ ನಡಿಗೆ ಎಂಬ ವಾಕ್ಯದೊಂದಿಗೆ ಹೆಜ್ಜೆ ಹಾಕಲು ನಿರ್ಧರಿಸಿದ್ದಾರೆ. ಕಾಂಗ್ರೆಸ್ ನವರ ನೀರಿಗಾಗಿ ನಡಿಗೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಚಂದ್ರು ಕೈಜೋಡಿಸ್ತಾರಾ ಎಂಬ ಪ್ರಶ್ನೆಗೆ ಸ್ವತಃ ಅವರೇ ಉತ್ತರ ನೀಡಿದ್ದಾರೆ.
ಕಾಂಗ್ರೆಸ್ ನವರ ನೀರಿಗಾಗಿ ನಡಿಗೆ ಕಾರ್ಯಕ್ರಮಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಸಾಧ್ಯವಾದಷ್ಟರ ಮಟ್ಟಿಗೆ ನಾನು ಇದರಲ್ಲಿ ಭಾಗವಹಿಸುತ್ತೇನೆ. ನನಗೆ ವಯಸ್ಸಾಗಿದೆ. ಹೀಗಾಗಿ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಬೇಕು.
ಮೇಕೆದಾಟು ಪಾದಯಾತ್ರೆಯಲ್ಲಿ ಸಂಪೂರ್ಣವಾಗಿ ಹೋಗ್ತೇವೆ ಅಂತ ಹೇಳೋಕಾಗಲ್ಲ. ನಾವೂ ಸಿನಿಮಾ ನಟರು. ಜಾಸ್ತಿ ಜನ ಸೇರಿದ್ರೆ ನಮ್ಮ ಜೊತೆಗಿನ ಫೋಟೊಗಾಗಿ ಜನ ಮುಗಿಬೀಳ್ತಾರೆ. ಹೀಗಾಗಿ ಅದೆಲ್ಲವನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳಬೇಕಾಗುತ್ತೆ. ಆದ್ರೆ ಈ ಮೇಕೆದಾಟು ಪಾದಯಾತ್ರೆಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು.