ಬೆಂಗಳೂರು: ಪಂಜಾಬ್ ಗೆ ಪ್ರಧಾನಿ ಮೋದಿ ಭೇಟಿ ನೀಡಿದಾಗ ಭದ್ರತಾ ವೈಫಲ್ಯದ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಂಜಾಬ್ ಸರ್ಕಾರ ಕಾನೂನು ಕಾಪಾಡಲು ವಿಫಲ ಆಗಿದೆ. ಪ್ರಧಾನಿಗಳ ಭದ್ರತೆಯಲ್ಲಿ ಲೋಪ ಎಸಗಿರುವ ಸರ್ಕಾರ ವನ್ನು ವಜಾ ಮಾಡುವಂತೆ ರಾಜ್ಯಪಾಲರ ಬಳಿ ಮನವಿ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ರಾಜ್ಯಪಾಲರನ್ನು ಥಾವರ್ ಚಂದ್ ಗೆಹ್ಲೋಟ್ ರನ್ನು ಭೇಟಿಯಾದ ನಳೀನ್ ಕುಮಾರ್ ಕಟೀಲ್ ಆ ಬಳಿಕ ಮಾತನಾಡಿದ್ದಾರೆ. ಪಂಜಾಬ್ ಸರ್ಕಾರವನ್ನು ವಜಾ ಮಾಡುವಂತೆ ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ದೇವೆ. ಅಧಿಕಾರ ಇಲ್ಲದಿದ್ದಾಗ ಕಾಂಗ್ರೆಸ್ ಇಂತಹ ಅರಾಜಕತೆ ಸೃಷ್ಟಿ ಮಾಡುತ್ತದೆ. ದೇಶದಲ್ಲಿ ಪ್ರಧಾನಿ ಹುದ್ದೆ ಪಕ್ಷಕ್ಕೆ ಸೀಮಿತ ಅಲ್ಲ. ಪಂಜಾಬ್ ಸರ್ಕಾರ ವಿಫಲವಾಗಿದೆ ಹಾಗಾಗಿ ವಜಾ ಮಾಡಬೇಕು. ಸುಪ್ರೀಂ ಕೋರ್ಟ್ ನಿಂದ ತನಿಖೆಗೆ ಆದೇಶ ಆಗಿದೆ ಎಂದಿದ್ದಾರೆ.
ಇದೆ ವೇಳೆ ಕಾಂಗ್ರೆಸ್ ನಿಂದ ಪಾದಯಾತ್ರೆ ವಿಚಾರವಾಗಿ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಹೋರಾಟಕ್ಕೆ ಅಡ್ಡಿ ಇಲ್ಲ. ಆದರೆ ಮೇಕೆದಾಟು ಯೋಜನೆ ಗೆ ಅವರ ಸರ್ಕಾರದ ಕೊಡುಗೆ ಏನು ಅಂತಾ ಹೇಳಬೇಕು. ಸಿದ್ದರಾಮಣ್ಣನ ಸರ್ಕಾರದಲ್ಲಿ ಯೋಜನೆ ಜಾರಿ ಮಾಡಲಿಲ್ಲ. ಆದರೆ ನಮ್ಮ ಸರ್ಕಾರ ಯೋಜನೆ ಜಾರಿ ಮಾಡಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡ್ತಿದೆ ಎಂದಿದ್ದಾರೆ.