ಚಾಮರಾಜನಗರ: ಪಂಜಾಬ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಭದ್ರತಾ ಲೋಪವಾಗಿದ್ದು, ಪಂಜಾಬ್ ಸರ್ಕಾರವನ್ನೇ ರದ್ದು ಮಾಡಬೇಕೆಂದು ಕರ್ನಾಟಕದಲ್ಲಿ ಸಿಎಂ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶದ ಪ್ರಧಾನಿಗೆ ಗೌರವ ಕೊಡಬೇಕಾದದ್ದು ಎಲ್ಲಾ ರಾಜ್ಯ ಸರ್ಕಾರಗಳ ಕರ್ತವ್ಯ. ಭದ್ರತಾ ಲೋಪದ ಬಗ್ಗೆ ತನಿಖೆ ನಡೆಸಬೇಕು. ತಪ್ಪಿತಸ್ಥರಿಗೆ ಉಗ್ರ ಶಿಕ್ಷೆಯಾಗಬೇಕು. ಪ್ರಧಾನ ಮಂತ್ರಿಗೆ ಮುಕ್ತವಾಗಿ ಸಂಚರಿಸಲು ಅವಕಾಶ ನೀಡದೆ ಇರುವುದು ಖಂಡನೀಯ. ಭದ್ರತೆ ನೀಡುವಲ್ಲಿ ವಿಫಲವಾದ ಪಂಜಾಬ್ ಸರ್ಕಾರ ಇರುವುದಕ್ಕೆ ಯೋಗ್ಯವಲ್ಲ. ಇಂತಹ ಸರ್ಕಾರವನ್ನು ಬರ್ಕಾಸ್ತ್ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಇಂದು ಪ್ರಧಾನಿ ಮೋದಿ ಬಿಜೆಪಿಯ ರ್ಯಾಲಿಯಲ್ಲಿ ಪಾಲ್ಗೊಳ್ಳಲು ಪಂಜಾಬ್ ಗೆ ತೆರಳಿದ್ದರು. ಬಟಿಂಡಾಗೆ ಹೆಲಿಕಾಪ್ಟರ್ ನಲ್ಲಿ ತೆರಳಿದ್ದ ಅವರು, ನಂತರ ಬೆಂಗಾವಲು ವಾಹನದಲ್ಲಿ ತೆರಳುತ್ತಿದ್ದರು. ಆದ್ರೆ ಪಂಜಾಬ್ ಫ್ಲೈ ಓವರ್ ಮೇಲೆ ಪ್ರತಿಭಟನಾಕಾರರು ಪ್ರತಿಭಟನೆ ಮಾಡುತ್ತಿದ್ದ ಕಾರಣ ಸುಮಾರು 20 ನಿಮಿಷಗಳ ಕಾಲ ಅಲ್ಲೆ ಉಳಿದರು. ಈ ಹಿನ್ನೆಲೆ ಪಂಜಾಬ್ ಸರ್ಕಾರ ಭದ್ರತೆಯನ್ನ ಒದಗಿಸಲ್ಲ ಎಂದು ಆರೋಪಿಸಲಾಗಿದೆ.