ಬೆಂಗಳೂರು: ಕಳೆದ ಕೆಲವು ದಿನಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಈ ಬೆನ್ನಲ್ಲೆ ರಾಜ್ಯದಲ್ಲಿ ಲಾಕ್ಡೌನ್ ಮಾಡ್ತಾರೆ ಸುದ್ದಿ ಹರಿದಾಡುತ್ತಿದೆ. ಆದ್ರೆ ಲಾಕ್ಡೌನ್ ಆದ್ರೆ ಜನರ ಜೀವನದ ಪ್ರಶ್ನೆ ಏನು ಅನ್ನೋದೆ ಎಲ್ಲರಿಗೂ ಹುಟ್ಟಿರುವ ಆತಂಕ.
ಈ ಬಗ್ಗೆ ಸಿಎಂ ಏನ್ ಹೇಳ್ತಾರೆ ಅನ್ನೋದು ಎಲ್ಲರ ಗಮನವಾಗಿತ್ತು. ಇದೀಗ ಆ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಮಾತನಾಡಿದ್ದು, ನಮ್ಗೆ ಜನರ ಜೀವನ, ಜೀವ ಎರಡು ಮುಖ್ಯ ಎಂದಿದ್ದಾರೆ.
ಸಿಎಂ ಇಂದು ಸಭೆ ನಡೆಸಿದ್ದು, ಆ ಬಗ್ಗೆ ನಿರ್ಧಾತ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಜೀವದ ಜೊತೆಗೆ ಜೀವನ ಮುಖ್ಯ ಅನ್ನೋ ಸೂತ್ರದಡಿ ಸರ್ಕಾರ ನಿರ್ಧಾರ ಮಾಡಲಿದೆ. ಲಾಕ್ಡೌನ್ ಮಾಡುವ ಬದಲು ಟಫ್ ರೂಲ್ಸ್ ಹಾಕಲು ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.
ಸೋಂಕಿಗೆ ಕಡಿವಾಣ ಹಾಕಬೇಕು. ಜನರ ಜೀವನಕ್ಕೆ ತೊಂದರೆಯಾಗದಂತೆ ಎಚ್ಚರವಹಿಸಬೇಕು. ಆರ್ಥಿಕ ಚಟುವಟಿಕೆಗಳ ಮೇಲೆ ಪೆಟ್ಟು ಬೀಳಬಾರದು. ಸೋಂಕು ಕೂಡ ಹೆಚ್ಚಿನ ಪ್ರಮಾಣದಲ್ಲಿ ಹರಡಬಾರದು. ಟಫ್ ರೂಲ್ಸ್ ಮಾತ್ರ ಜಾರಿಗೆ ತರೋಣಾ. ಲಾಕ್ಡೌನ್ ಮಾಡಿ ಜನರ ಜೀವನಲ್ಕೆ ಸಂಕಷ್ಟ ತಂದೊಡ್ಡುವುದು ಬೇಡ ಎಂದಿದ್ದಾರೆ.