ಚಿತ್ರದುರ್ಗ, (ಜ.03) : ಲಸಿಕೆ ಪಡೆಯುವ ಮೂಲಕ ಕರೋನಾ ಮೂರನೇ ಅಲೆಯ ಅಪಾಯಕ್ಕೆ ಸಿಲಕದಂತೆ ಎಲ್ಲಾ ವಿದ್ಯಾರ್ಥಿಗಳು ಸಜ್ಜಾಗುವಂತೆ ಪ್ರಾಂಶುಪಾಲರಾದ ರಮೇಶ್ ಕರೆ ನೀಡಿದರು.
ತಾಲ್ಲೂಕಿನ ಕ್ಯಾಸಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು
ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆ, ಬೊಮ್ಮೇನಹಳ್ಳಿ ಇವರ ಸಹಯೋಗದೊಂದಿಗೆ
ಹದಿನೈದು ವರ್ಷ ಮೇಲ್ಪಟ್ಟ ನೂರು ವಿದ್ಯಾರ್ಥಿಗಳಿಗೆ ಕೋವಾಕ್ಸಿನ್ ಲಸಿಕಾಕರಣ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಮತ್ತು ಆರೋಗ್ಯ ಇಲಾಖೆಯ ಆರೋಗ್ಯ ನಿರೀಕ್ಷರಾದ ವೀರೇಶ್, ಆರೋಗ್ಯ ಸುರಕ್ಷಾಧಿಕಾರಿ ಝಾನ್ಸಿ ಮತ್ತು ಆಶಾ ಕಾರ್ಯಕರ್ತೆಯರಾದ ಲಕ್ಷ್ಮೀದೇವಿ, ಲಕ್ಷ್ಮೀಬಾಯಿ ಇತರರು ಹಾಜರಿದ್ದರು.