ಬೆಂಗಳೂರು: 5 ನಗರಸಭೆ, 19 ಪುರಸಭೆ ಮತ್ತು 34 ಪಟ್ಟಣ ಪಂಚಾಯ್ತಿ ಚುನಾವಣೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಚುನಾವಣೆಯಲ್ಲಿ ಬಿಜೆಪಿಗೆ ಶಾಕ್ ಆಗುವಂತರ ಕಾಂಗ್ರೆಸ್ ಜಯಭೇರಿ ಬಾರಿಸಿದೆ.
ನಗರಸಭೆಯಲ್ಲಿ ಬಿಜೆಪಿ 5 ಕ್ಷೇತ್ರಗಳ ಹೆಚ್ಚಿನ ಗೆಲುವು ಸಾಧಿಸಿದ್ರೆ, ಪುರಸಭೆ, ಪಟ್ಟಣ ಪಂಚಾಯತಿಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಒಟ್ಟು 582 ಸ್ಥಾನಗಳಿಗೆ ಚುನಾವಣೆ ನಡೆದಿದೆ. ಅದರಲ್ಲಿ ಕಾಂಗ್ರೆಸ್ 238 ಸ್ಥಾನ ತನ್ನದಾಗಿಸಿಕೊಂಡಿದೆ. ಬಿಜೆಪಿ 194 ಸ್ಥಾನಕ್ಕೆ ನಿಂತಿದೆ. ಜೆಡಿಎಸ್ 12 ಸ್ಥಾನಗಳಲ್ಲಿ ಜಯ ಸಾಧಿಸಿದೆ.
ಇನ್ನು ನಗರಸಭೆಯಲ್ಲಿ 167 ಸ್ಥಾನಗಳಲ್ಲಿ ಬಿಜೆಪಿ 67, ಕಾಂಗ್ರೆಸ್ 61, ಜೆಡಿಎಸ್ 12, ಇತರೆ ಅಭ್ಯರ್ಥಿಗಳು 26 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದ್ದಾರೆ. ಪುರಸಭೆಯಲ್ಲಿ 436 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಕಾಂಗ್ರೆಸ್ 200, ಬಿಜೆಪಿ 176, ಜೆಡಿಎಸ್ 21 ಇತರೆ ಅಭ್ಯರ್ಥಿಗಳು 41 ಸ್ಥಾನಗಳಲ್ಲಿ ಗೆಲು ಸಾಧಿಸಿದ್ದಾರೆ.