ಬೆಳಗಾವಿ: ಅತ್ತ ಬೆಳಗಾವಿಯಲ್ಲಿ ಎಂಇಎಸ್ ಪುಂಡರು ತಮಗಿಷ್ಟ ಬಂದಂಗೆ ಮೆರೆಯುತ್ತಿದ್ದಾರೆ. ಇತ್ತ ಕರವೇ ಪ್ರತಿಭಟನೆಗೆ ಪೊಲೀಸರು ಅವಕಾಶ ನೀಡುತ್ತಿಲ್ಲ. ಎಂಇಎಸ್ ಪುಂಡರ ಅಟ್ಟಹಾಸಕ್ಕೆ ಆಕ್ರೋಶಗೊಂಡ ಕರವೇ ಕಾರ್ಯಕರ್ತರು ಬೆಳಗಾವಿಗೆ ತೆರಳಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ತಡೆದು, ಕರವೇ ಕಾರ್ಯಕರ್ತರನ್ನ ವಶಕ್ಕೆ ಪಡೆದಿದ್ದಾರೆ.
ವಶಕ್ಕೆ ಪಡೆದ ಕರವೇ ಹೋರಾಟಗಾರರನ್ನ ಕರೆದೊಯ್ಯುವಾಗ, ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ತಳ್ಳಾಟ ನೂಕಾಟ ನಡೆದಿದೆ. ಹೀರೇಬಾಗೇವಾಡಿ ಟೋಲ್ ಬಳಿ ಈ ಘಟನೆ ನಡೆದಿದೆ . ಕರವೇ ಅಧ್ಯಕ್ಷ ನಾರಾಯಣಗೌಡ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ಯಪಡಿಸಿರುವ ನಾರಾಯಣಗೌಡ, ಪೊಲೀಸರನ್ನು ಮುಂದಿಟ್ಟುಕೊಂಡು ಹೋರಾಟವನ್ನ ಹತ್ತಿಕ್ಕುತ್ತಿದ್ದಾರೆ. ಸುವರ್ಣ ಸೌಧದಲ್ಲಿ ಮುಟ್ಟಾಳರು ಕುಳಿತಿದ್ದಾರೆ. ಎಂಇಎಸ್ ವಿರುದ್ಧ ಮಾತನಾಡದವರು ರಣಹೇಡಿಗಳು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಕರವೇ ಮಹಿಳಾ ಕಾರ್ಯಕರ್ತೆಯರು, ಪೊಲೀಸ್ ವಾಹನವೇರಿ ಪ್ರತಿಭಟನೆ ನಡೆಸಿದ್ದಾರೆ. ಮಹಾರಾಷ್ಟ್ರದ ಲಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಾರಿ ಮೇಲತ್ತಿ ಕರವೇ ಕಾರ್ಯಕರ್ತೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.