ಬೀದರ್: ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಬಿಜೆಪಿ ಅಭ್ಯರ್ಥಿ ಪ್ರಕಾಶ್ ಖಂಡ್ರೆ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಸೋಲು ಖಾತರಿಯಾದ ಮೇಲೆ ಹೇಗಾದರೂ ಮಾಡಿ ಗಲಾಟೆ ಮಾಡಬೇಕು ಎಂದುಕೊಂಡಿದದ್ದರು. ಅದಕ್ಕೆ ನನ್ನನ್ನ ಹಿಂಬಾಲಿಸಿದ್ದರು ಎಂದಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಬ್ಬ ಶಾಸಕ, ಕಾಂಗ್ರೆಸ್ ಕಾರ್ಯಾಧ್ಯಕ್ಷನಿಗೆ ರಕ್ಷಣೆ ಇಲ್ಲ ಎಂದರೆ ಹೇಗೆ. ಇನ್ನು ಜನಸಾಮಾನ್ಯರಿಗೆ ಸರ್ಕಾರ ಇನ್ಯಾವ ರೀತಿಯ ರಕ್ಷಣೆ ನೀಡಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಮಾಜಘಾತುಕ ಶಕ್ತಿಗಳನ್ನ ಬಳಸಿಕೊಂಡು, ನನ್ನ ಕಾರು ಅಡ್ಡಗಟ್ಟಿ ಏನಾದರೂ ಅಪಾಯ ಮಾಡಲು ಸಂಚು ರೂಪಿಸಿದ್ದರು ಎಂದು ಬಿಜೆಪಿ ಅಭ್ಯರ್ಥಿ ಪ್ರಕಾಶ್ ಖಂಡ್ರೆ ವಿರುದ್ಧ ಕಿಡಿಕಾರಿದ್ದಾರೆ.
ಅಷ್ಟೆ ಅಲ್ಲ ಕಾನೂನು ಉಲ್ಲಂಘನೆ, ಶಾಂತಿ ಕದಡುವ ಹಾಗೂ ಹಲ್ಲೆ ನಡೆಸುವ ಷಡ್ಯಂತ್ರ ಹೂಡಿರುವವರ ವಿರುದ್ಧ ತನಿಖೆಯಾಗಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಒಂದು ವೇಳೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದೆ ಹೋದಲ್ಲಿ ಮುಂದಿನ ಅನಾಹುತಗಳಿಗೆ ಸರ್ಕಾರವೆ ಹೊಣೆ ಎಂದಿದ್ದಾರೆ.