ಬೆಂಗಳೂರು: ಲಸಿಕೆ ಪಡೆದಿದ್ದೇವೆ ಅಂತ ಅದೆಷ್ಟೋ ಜನ ಮೈ ಮರೆತು ಓಡಾಡುತ್ತಿದ್ದಾರೆ. ಇನ್ನು ಕೊರೊನಾವೇ ಬರಲ್ಲ ಅನ್ನೋ ಉಡಾಫೆ ಕೆಲವರಲ್ಲಿ ಕಾಣ್ತಿದೆ. ಲಸಿಕೆ ಹಾಕಿಸಿಕೊಂಡರೆ ಪ್ರಾಣಕ್ಕೆ ತುತ್ತು ಬರುವ ಪರಿಸ್ಥಿತಿಯನ್ನ ತಡೆಯಬಹುದಷ್ಟೇ. ಆದ್ರೆ ಕೊರಿನಾ ನಿಯಮ ಪಾಲಿಸದೇ ಹೋದರೆ ಒಮಿಕ್ರಾನ್ ಅಟ್ಟಾಡಿಸಿಕೊಂಡು ಬಂದು ನಿಮ್ಮ ದೇಹ ಸೇರೋದು ಗ್ಯಾರಂಟಿ. ಡೋಸ್ ಹಾಕಿಸಿಕೊಂಡಿದ್ದೀವಿ ಅಂತ ನಿಯಮ ಮೀರುವವರ ಗಮನಕ್ಕೆ ಇಲ್ಲೊಂದು ಸುದ್ದಿ ಇದೆ.
ಸಿಲಿಕಾನ್ ಸಿಟಿಯಲ್ಲಿ ವೈದ್ಯರೊಬ್ಬರು ಎರಡು ಡೋಸ್ ಲಸಿಕೆ ಪಡೆದಿದ್ದರು. ಆದ್ರೆ ಇತ್ತೀಚೆಗೆ ಅವರಲ್ಲಿ ಒಮಿಕ್ರಾನ್ ರೂಪಾಂತರಿ ವೈರಸ್ ಕಾಣಿಸಿಕೊಂಡಿತ್ತು. ಬಳಿಕ ಅವರ ಆಸ್ಪತ್ರೆಯಲ್ಲಿರಿಸಿ ಚಿಕಿತ್ಸೆ ನೀಡಲಾಗಿದೆ. ಆ ಬಳಿಕ ಸೋಂಕಿನಿಂದ ಚೇತರಿಸಿಕೊಂಡಿದ್ದರು. ಆದ್ರೆ ಮತ್ತೆ ಟೆಸ್ಟ್ ಮಾಡಿದಾಗ ಮತ್ತೆ ಕೊರೊನಾ ಪಾಸಿ ಬಂದಿದೆ.
ಆರ್ಟಿಪಿಆರ್ ಟೆಸ್ಟ್ ನಲ್ಲಿ ಒಮ್ಮೆ ನೆಗೆಟಿವ್ ಬಂದಿತ್ತು. ಆಮೇಲೂ ವೈದ್ಯರ ನಿಗಾದಲ್ಲೇ ಇದ್ದ ವ್ಯಕ್ತಿಗೆ ಮತ್ತೆ ಆರ್ಟಿಪಿಆರ್ ಟೆಸ್ಟ್ ಮಾಡಿಸಿದಾಗ ಮತ್ತೆ ಪಾಸಿಟಿವ್ ಬಂದಿದೆ ಅಂತ ಆರೋಗ್ಯ ಇಲಾಖೆ ತಿಳಿಸಿದೆ.
ಕರ್ನಾಟಕದಲ್ಲಿ ಮೊದಲ ಎರಡು ಓಮಿಕ್ರಾನ್ ಪತ್ತೆಯಾಗಿ ಆತಂಕ ಸೃಷ್ಟಿಸಿತ್ತು. ಅವರ ಸಂಪರ್ಕದಲ್ಲಿದ್ದವರಿಗೂ ಟೆಸ್ಟ್ ಮಾಡಿಸಿದಾಗ ಅವರಿಗೂ ಪಾಸಿಟಿವ್ ಆಗಿತ್ತು. ಇದೀಗ ಮತ್ತೆ ಅವರದ್ದೇ ವರದಿ ಪಾಸಿಟಿವ್ ಆಗಿದೆ.