ಮೈಸೂರು: ಕೋವಿಡ್ ನಿಂದ ಮೃತಪಟ್ಟವರಿಂದ ಸಾಲ ವಸುಲಾತಿಗೆ ಬ್ಯಾಂಕ್ ಗಳು ನೋಟೀಸ್ ಕೊಡಬಾರದೆಂದು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಮಾತನಾಡಿದ ಎಸ್ ಸೋಮಶೇಖರ್, ದಾವಣಗೆರೆಯ ಸುದ್ದಿ ನೋಡಿದ್ದೆ. ಸಹಕಾರ ಬ್ಯಾಂಕ್ ಒಂದು ಕೋವಿಡ್ ನಿಂದ ಮೃತ ಪಟ್ಟ ಕುಟುಂಬಕ್ಕೆ ನೋಟೀಸ್ ನೀಡಿದೆ ಅಂತ. ಆದ್ರೆ ಬ್ಯಾಂಕ್ ನವರನ್ನ ಕೇಳಿದ್ರೆ ಇಲ್ಲ ಅಂತಾರೆ. ಆದ್ರೆ ಆ ಬಗ್ಗೆ ಬೆಂಗಳೂರಿಗೆ ಹೋಗಿ ಅಧಿಕಾರಿಗಲಕ ಜೊತೆ ಸಭೆ ನಡೆಸಿ ವಿಚಾರ ತಿಳಿದುಕೊಳ್ಳುತ್ತೇನೆ.
ಆದ್ರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಗಳಲ್ಲಿ ಸಾಲ ಪಡೆದು, ಅವರೇನಾದರೂ ಕೋವಿಡ್ ನಿಂದ ಮೃತಪಟ್ಟಿದ್ದರೆ ಅವರಿಗೆ ಬ್ಯಾಂಕ್ ಗಳು ಯಾವುದೇ ಕಾರಣಕ್ಕೂ ನೋಟೀಸ್ ನೀಡಬಾರದು. ಕೋವೀಡ್ ನಿಂದ ಮೃತಪಟ್ಟವರ ಎಲ್ಲಾ ಸಾಲವನ್ನು ಮನ್ನಾ ಮಾಡಲಾಗಿದೆ. ಇದನ್ನು ಮೀರಿಯೂ ಯಾವುದಾದರೂ ಬ್ಯಾಂಕ್ ನವರು ಮೃತರ ಮನೆಗೆ ನೋಟೀಸ್ ನೀಡಿದ್ರೆ ಅಂತ ಬ್ಯಾಂಕ್ ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.