ಮುಂಬಯಿ : ಕತ್ರೀನಾ ಕೈಫ್ ಮದುವೆ ಎಲ್ಲರ ಕಣ್ಣುಗಳು ಅರಳಿದವು. ಫ್ಯಾನ್ಸ್ ಫುಲ್ ಖುಷಿ ಪಟ್ಟರು. ಈಗ ಮದುವೆ ಡೇಟ್ ಕೂಡ ಫಿಕ್ಸ್ ಆಗಿದೆ. ಸ್ಥಳ ಕೂಡ ನಿಗಧಿಯಾಗಿದೆ. ಗೆಸ್ಟ್ ಲಿಸ್ಟ್ ಕೂಡ ರೆಡಿಯಾಗಿದೆ. ಆದ್ರೆ ಇದು ಒಂಥರ ಸೀಕ್ರೇಟ್ ಮ್ಯಾರೇಜ್ ರೀತಿ ಮದುವೆಯಾಗುತ್ತಿದ್ದಾರೆ. ಹೇಗೆ ಅಂದ್ರೆ ಮದುವೆಗೆ ಬಂದವರು ಯಾರು ಮದುವೆ ದೃಶ್ಯವನ್ನ ಮೊಬೈಲ್ ನಲ್ಲಿ ಕ್ಯಾಪ್ಚರ್ ಮಾಡುವಾಗಿಲ್ಲ ಎಂಬ ನಿಯಮವನ್ನ ಗೆಸ್ಟ್ ಗಳಿಗೆ ತಿಳಿಸಿದ್ದಾರೆ. ಹೀಗಾಗಿ ಅಭಿಮಾನಿಗಳು ಒಂದಷ್ಟು ಕ್ಯೂರಿಯಾಸಿಟಿ ಬಿಲ್ಡ್ ಆಗಿದೆ. ಇದೇ ಕ್ಯೂರಿಯಾಸಿಟಿಯನ್ನ ಓಟಿಟಿ ಫ್ಲಾಟ್ ಫಾರ್ಮ್ ಬಂಡವಾಳ ಮಾಡಿಕೊಳ್ಳಲು ಹೊರಟಿದ್ದು, 100 ಕೋಟಿ ಆಫರ್ ಮಾಡಿದೆ.
ಕತ್ರಿನಾ ಕೈಫ್ ಹಾಗೂ ವಿಕ್ಕಿ ಮದುವೆ ರಾಜಸ್ತಾನದ ಮಾಧಪುರದ ಸಿಕ್ಸ್ ಸೆನ್ಸ್ ಹೊಟೇಲ್ ನಲ್ಲಿ ನಡೆಯಲಿದೆ. ಅಭಿಮಾನಿಗಳ ಆಸೆಗೂ ಓಟಿಟಿ ವೇದಿಕೆಯಾಗಲು ಬಯಸಿದೆ. ಹೀಗಾಗಿಯೇ ಕತ್ರಿನಾ ಹಾಗೂ ವಿಕ್ಕಿ ಬಳಿ ಅವರ ಮದುವೆ ದೃಶ್ಯ ಸೆರೆ ಹಿಡಿಯಲು ಒಟಿಟಿ ಫ್ಲಾಟ್ ಫಾರ್ಮ್ ಅನುಮತಿ ಕೇಳಿದೆ ಎನ್ನಲಾಗಿದೆ.
ಆ ದೃಶ್ಯಗಳನ್ನೆಲ್ಲಾ ಒಟಿಟಿ ಫ್ಲಾಟ್ ಫಾರ್ಮ್ ನಲ್ಲೇ ರಿಲೀಸ್ ಮಾಡಲು ನಿರ್ಧರಿಸಿದ್ದಾರಂತೆ. ಈಗಾಗಲೇ ವಿಕ್ಕಿ ಹಾಗೂ ಕತ್ರಿನಾ ಜೊತೆ ಮಾತನಾಡಿದ್ದು, ಮದುವೆಯ ದೃಶ್ಯಗಳಿಗೆ 100 ಕೋಟಿ ಆಫರ್ ಮಾಡಿದೆಯಂತೆ ಓಟಿಟಿ ಫ್ಲಾಟ್ ಫಾರ್ಮ್. ಯಾರಿಗುಂಟು ಯಾರಿಗಿಲ್ಲ. ಕತ್ರಿನಾ ಸಿನಿಮಾಗಳಿಗಿಂತ ಅವರ ಮದುವೆಗೆನೆ ಡಿಮ್ಯಾಂಡ್ ಹೆಚ್ಚಾಗಿದೆ. ಇದು ಬಾಲಿವುಡ್ ಅಂಗಳದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ.