ಬೆಂಗಳೂರು: ಅಪಾರ್ಟ್ಮೆಂಟ್ ನ ಮಹಡಿಯಿಂದ ಬಿದ್ದು ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಆನೇಕಲ್ ನಲ್ಲಿ ನಡೆದಿದೆ. 9ನೇ ತರಗತಿ ವಿದ್ಯಾರ್ಥಿನಿ ವೈಷ್ಣವಿ ಮೃತ ದುರ್ದೈವಿ.
ವಿರೇಂದ್ರ ಕುಮಾರ್ ಹಾಗೂ ಸುಮನ್ ದಂಪತಿಯ ಮಗಳು ವೈಷ್ಣವಿ. ಈ ದಂಪತಿ ಮೂಲತಃ ಉತ್ತರ ಪ್ರದೇಶದವರು. ಕಳೆದ 20 ವರ್ಷಗಳಿಂದ ಬೆಂಗಳೂರಿನಲ್ಲಿಯೇ ವಾಸವಿದ್ದರು. ವೈಷ್ಣವಿ ಖಾಸಗಿ ಶಾಲೆಯೊಂದರಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಆದ್ರೆ ಇದೀಗ ದಿಢೀರನೇ ಹೀಗೆ ಆತ್ಮಹತ್ಯೆಗೆ ಶರಣಾಗಿರುವುದು ಪೋಷಕರಿಗೆ ಆಘಾತವಾಗಿದೆ.
ವೈಷ್ಣವಿ ಆತ್ಮಹತ್ಯೆ ಮಾಡಿಕೊಂಡಳೋ ಅಥವಾ ಆಯ ತಪ್ಪಿ ಬಿದ್ದಳೋ ಎಂಬ ಬಗ್ಗೆ ಇನ್ನು ಮಾಹಿತಿ ಸಿಕ್ಕಿಲ್ಲ. ರಾತ್ರಿಮನೆಯವರ ಜೊತೆಯಲ್ಲೇ ಊಟ ಮುಗಿಸಿ, ಬಾಲ್ಕನಿಯಲ್ಲಿ ಆಟವಾಡುತ್ತಿದ್ದಾಗ ಈ ಘಟನೆ ನಡೆದಿದೆಯಂತೆ. ಏನೋ ಜೋರು ಶಬ್ದವಾಗಿದ್ದನ್ನ ಗಮನಿಸಿ ಬಾಲ್ಕಿನಿಗೆ ಬಂದು ನೋಡಿದಾಗ ವೈಷ್ಣವಿ ಬಿದ್ದಿರುವುದು ಗಮನಕ್ಕೆ ಬಂದಿದೆ. ತಲೆಗೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವವಾದ ಕಾರಣ ವೈಷ್ಣವಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.