ಬೆಂಗಳೂರು: ಮಹೇಂದ್ರ ಸಿಂಗ್ ಧೋನಿ ಲವ್ ವಿಚಾರ ನಮ್ಗೆ ನಿಮ್ಗೆಲ್ಲಾ ಗೊತ್ತೆ ಇದೆ. ಅದು ಸಾಕ್ಷಿ ಜೊತೆ ಅನ್ನೋದು. ಆದ್ರೆ ಅದಕ್ಕೂ ಮುಂಷೆ ಸ್ಯಾಂಡಲ್ ವುಡ್ ಖ್ಯಾತ ನಟಿಯನ್ನ ಪ್ರೀತಿ ಮಾಡ್ತಾ ಇದ್ರು ಅನ್ನೋ ವಿಚಾರ ಕೊಂಚ ಹಳೆಯದ್ದಾದ್ರೂ, ಈಗ ವೈರಲ್ ಆಗ್ತಾ ಇದೆ.
ಹೌದು, ಸ್ಯಾಂಡಲ್ ವುಡ್ ನಲ್ಲಿ ಒಂದು ಕಾಲದಲ್ಲಿ ಮಿಂಚಿದ್ದ ಲಕ್ಷ್ಮೀ ರೈ ಜೊತೆಗೆ ಧೋನಿ ಡೇಟಿಂಗ್ ಮಾಡಿದ್ದರಂತೆ. ಆ ಬಳಿಕ ಅವರಿಬ್ಬರ ನಡುವೆ ಬ್ರೇಕಪ್ ಕೂಡ ಆಗಿತ್ತು. ಅದಾದ ಮೇಲೆ ಧೋನಿ ಸಾಕ್ಷಿ ಅವರನ್ನ ಪ್ರೀತಿಸಿಮದುವೆಯಾಗಿದ್ದರು. ಈಗ ಅವರಿಬ್ಬರಿಗೆ ಜೀವಾ ಎಂಬ ಮುದ್ದಾದ ಮಗಳಿದ್ದಾಳೆ.
ಧೋನಿ ಹಾಗೂ ಲಕ್ಷ್ಮೀ ರೈ ನಡುವಿನ ಸಂಬಂಧದ ಬಗ್ಗೆ ಸ್ವತಃ ಲಕ್ಷ್ಮೀ ರೈ ಅವರೇ ಮಾತಾಡಿದ್ದರು. ಅದೇ ವಿಡಿಯೋ ಈಗ ವೈರಲ್ ಆಗಿದೆ. ಧೋನಿ ಹೊರತುಪಡಿಸಿ ಮಿಕ್ಕ ಯಾರೊಂದಿಗಿನ ಜೊತೆಗೆ ತಮ್ಮ ರೊಮ್ಯಾಂಟಿಕ್ ಸಂಬಂಧ ಅಷ್ಟಾಗಿ ಸುದ್ದಿ ಮಾಡಲಿಲ್ಲ ಎಂದು ಹೇಳಿಕೊಂಡಿರುವ ಲಕ್ಷ್ಮೀ ಬ್ರೇಕ್ ಅಪ್ ಆದ ಬಳಿಕವೂ ತಮ್ಮಿಬ್ಬರ ನಡುವೆ ಪರಸ್ಪರ ಗೌರವವಿದೆ ಎಂಬ ಮಾತುಗಳನ್ನು ಆಡಿದ್ದಾರೆ. ಧೋನಿ ಒಬ್ಬ ಒಳ್ಳೆಯ ವ್ಯಕ್ತಿ. ಯಾವುದೇ ಹುಡುಗಿ ಮದುವೆ ಮಾಡಿಕೊಳ್ಳಲು ಇಷ್ಟ ಪಡುವಂಥ ವ್ಯಕ್ತಿಯಾದ ಧೋನಿ ಒಬ್ಬ ಕರುಣಾಮಯಿ ಹಾಗೂ ಸಮತೋಲಿತ ವ್ಯಕ್ತಿ ಎಂದು ಹೇಳಿದ್ದಾರೆ.
ಧೋನಿ ಜೊತೆಗೆ ನನ್ನ ಸಂಬಂಧ ಒಂದು ರೀತಿ ಬ್ಲಾಕ್ ಮಾರ್ಕ್ ಇದ್ದಂತೆ ಹಾಗೂ ಅದು ಬಹು ಕಾಲದವರೆಗೂ ಮಾಸುವುದಿಲ್ಲ ಎಂದು ನಂಬಿದ್ದೇನೆ. ನಾವು ಬೇರೆಯಾಗಿ ಐದು ವರ್ಷಗಳಾದರೂ ಸಹ ಜನ ಈ ಬಗ್ಗೆ ಮಾತನಾಡುತ್ತಿರುತ್ತಾರೆ ಎಂಬ ವಿಡಿಯೋ ಈಗ ವೈರಲ್ ಆಗುತ್ತಿದೆ.