ಬಿಗ್ ಬಾಸ್ ಆಗಾವ ಮನೆ ಮಂದಿಗೆ ತಮ್ಮನ್ನು ತಾವೂ ಗುರುತಿಸಿಕೊಳ್ಳುವಂತಹ, ತಾವೇನು ತಪ್ಪು ಮಾಡುತ್ತಾ ಇದ್ದೀವಿ ಎಂಬುದರ ಅರಿವು ಮೂಡಿಸುವಂತಹ ಟಾಸ್ಕ್ ಗಳನ್ನ ನೀಡುತ್ತಾ ಇರುತ್ತಾರೆ. ಇದೀಗ ಇಂದು ಕೂಡ ಬಿಗದ ಬಾಸ್ ಹೊಸ ಟಾಸ್ಕ್ ಒಂದನ್ನ ನೀಡಿದ್ದು, ಎಚ್ಚೆತ್ತುಕೊಳ್ಳಿ ಎಂದು ಹೇಳಿದೆ. ಕುದಿಯುತ್ತಿರುವ ಮನಸ್ಸಿನ ಬೇಗೆಯನ್ನು ತಣ್ಣಗಾಗಿರುವ ಟೀ ಎರಚಿ ಎಚ್ಚೆತ್ತುಕೊಳ್ಳುವಂತ ಟಾಸ್ಕ್ ನೀಡಿದೆ.
ಗೌತಮಿಗೋಸ್ಕರ ಮಂಜು ಏನು ಬೇಕಾದರೂ ಮಾಡುತ್ತಾರೆ. ಅಷ್ಟರಮಟ್ಟಿಗೆ ಅವರನ್ನ ಸೇಫ್ ಮಾಡುತ್ತಿದ್ದಾರೆ. ಅವರೊಟ್ಟಿಗೆ ಇರುತ್ತಾರೆ. ಕಿಚ್ಚ ಸುದೀಪ್ ಕೂಡ ಆಗಾಗ ಆ ಬಗ್ಗೆ ಮಾತಾಡುತ್ತಲೇ ಇರುತ್ತಾರೆ. ಇಂದು ತನ್ನ ಗೆಳೆಯನ ಮುಖಕ್ಕೆ ಗೌತಮಿ ಟೀ ಎರಚಿದ್ದಾರೆ. ಇನ್ನಾದರೂ ಮಂಜು ಎಚ್ಚೆತ್ತುಕೊಳ್ಳುತ್ತಾರಾ ನೋಡಬೇಕಿದೆ. ‘ಗೌತಮಿ ಇದ್ದಾಗ ಮಂಜು ಮಾತಾಡಲ್ಲ.. ಗೌತಮಿಗೆ ಹೆದರುತ್ತಾರೆ.. ಎಚ್ಚೆತ್ತುಕೊಳ್ಳಿ’ ಎಂದು ಟೀ ಎರಚಿದ್ದಾರೆ.
ಐಶ್ವರ್ಯಾ ಹಾಗೂ ಭವ್ಯಾ ನಡುವೆ ಕೋಲ್ಡ್ ವಾರ್ ನಡೆಯುತ್ತಲೆ ಇರುತ್ತದೆ. ಇಬ್ಬರ ನಡುವಿನ ಮನಸ್ತಾಪ ಎಂದಿಗೂ ಸರಿ ಆಗಲ್ಲ ಎಂಬಂತೆ ಕಾಣಿಸುತ್ತಿದೆ. ನಾಮಿನೇಷನ್ ಅಂತ ಬಂದಾಗ ಭವ್ಯಾ – ಐಶ್ವರ್ಯಾ ಅವರ ಹೆಸರನ್ನೇ ತೆಗೆದುಕೊಳ್ಳುತ್ತಾರೆ. ಈಗ ಎಚ್ಚೆತ್ತುಕೊಳ್ಳಿ ಟಾಸ್ಕ್ ನಲ್ಲೂ ಐಶ್ವರ್ಯಾ ಅವರ ಹೆಸರನ್ನೇ ತೆಗೆದುಕೊಂಡಿದ್ದು, ಅವರ ಮುಖಕ್ಕೆ ಟೀ ಎರಚಿದ್ದಾರೆ. ಹಾಗೇ ಗೌತಮಿ, ಹನುಮಂತು, ಚೈತ್ರಾ, ಮೋಕ್ಷಿತಾಗೆ ಟೀ ಎರಚುತ್ತಿರುವುದು ಇಂದಿನ ಪ್ರೋಮೋದಲ್ಲಿ ಕಾಣಿಸಿದೆ. ಟೀ ಎರಚಿ ಎಚ್ಚೆತ್ತುಕೊಳ್ಳಿ ಎಂದವರು ಎಚ್ಚೆತ್ತುಕೊಳ್ಳುತ್ತಾರಾ ನೋಡಬೇಕಿದೆ. ಬಿಗ್ ಬಾಸ್ ಈಗಾಗಲೇ 14ನೇ ವಾರದತ್ತ ಸಾಗುತ್ತಿದೆ. ಇನ್ಮುಂದೆ ಸ್ಪರ್ಧೆಯೂ ಜೋರಾಗಲಿದೆ. ಕಪ್ ಗಾಗಿ ಯುದ್ಧವೇ ಶುರುವಾಗಲಿದೆ.