ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಜೈಲು ಸೇರಿದ್ದ ದರ್ಶನ್ ಅನಾರೋಗ್ಯದ ಕಾರಣದಿಂದ ಮಧ್ಯಂತರ ಜಾಮೀನು ಪಡೆದು ಆಸ್ಪತ್ರೆಗೆ ಅಡ್ಮಿಟ್ ಆಗಿದ್ದರು. ಆದರೆ ಕೊಲೆ ಕೇಸಲ್ಲಿ ಕಳೆದ ವಾರವಷ್ಟೇ ರೆಗ್ಯುಲರ್ ಬೇಲ್ ಸಿಕ್ಕಿದೆ. ಇದೀಗ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದು, ನೇರವಾಗಿ ಕೋರ್ಟ್ ಗೆ ತೆರಳುವ ಸಾಧ್ಯತೆ ಇದೆ. ರೆಗ್ಯುಲರ್ ಬೇಲ್ ಸಿಕ್ಕ ಕಾರಣ ಜಾಮೀನು ನಿಯಮಗಳಿಗೆ ಸಹಿ ಹಾಕಬೇಕಿದೆ. ಹೀಗಾಗಿ ಕೋರ್ಟ್ ಗೆ ತೆರಳಲಿದ್ದಾರೆ ಎನ್ನಲಾಗಿದೆ.
ಬೆನ್ನು ನೋವಿಗೆ ಸರ್ಜರಿ ಮಾಡಿಸಿಕೊಳ್ಳುತ್ತಾರೆ ಎಂದು ಹೇಳಲಾಗಿತ್ತು. ಮಧ್ಯಂತರ ಜಾಮೀನು ಮುಗಿಯುವುದಕ್ಕೂ ಮುನ್ನವೇ ಸರ್ಜರಿಗೂ ಎಲ್ಲಾ ರೀತಿಯ ಪ್ಲ್ಯಾನ್ ಮಾಡಿಕೊಂಡಿದ್ದರು. ಆದರೆ ರೆಗ್ಯುಲರ್ ಬೇಲ್ ಸಿಕ್ಕ ಬಳಿಕ ದರ್ಶನ್ ಅವರು ಡಿಸ್ಚಾರ್ಜ್ ಆಗಿದ್ದು, ನೇರವಾಗಿ ಮನೆಗೆ ತೆರಳುತ್ತಿದ್ದಾರೆ. ಪತ್ನಿ ವಿಜಯಲಕ್ಷ್ಮಿ ಅವರ ಅಪಾರ್ಟ್ಮೆಂಟ್ ಗೆ ತೆರಳಲಿದ್ದಾರೆ ಎನ್ನಲಾಗಿದೆ. ಆದರೆ ಸರ್ಜರಿ ಮಾಡಿಸಿಕೊಳ್ಳದೆ ಡಿಸ್ಚಾರ್ಜ್ ಆಗ್ತಾ ಇರೋದು ಆಶ್ಚರ್ಯವಾಗಿದೆ.
ಇನ್ನು ದರ್ಶನ್ ಜೊತೆಗೆ ಮೊದಲಿನಿಂದಲೂ ಇದ್ದಂತ ಧನ್ವಿಉರ್ ಅವರೇ ಇಂದು ಕೂಡ ಜೊತೆಯಾಗಿಯೇ ಇದ್ದಾರೆ. ಈಗಾಗಲೇ ದರ್ಶನ್ ಅಭಿಮಾನಿಗಳು ಆರ್ ಆರ್ ನಗರದ ಮನೆಯ ಬಳಿ ತೆರಳಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ನಮ್ಮ ಬಾಸ್ ಮನೆಗೆ ಬರ್ತಿದ್ದಾರೆ ಎಂದು ಕುಣಿದು ಕುಪ್ಪಳಿಸುತ್ತಿದ್ದಾರೆ. ಸುಮಾರು ಒಂದೂವರೆ ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿಯೇ ಇದ್ದಂತ ದರ್ಶನ್ ಅವರು ಇಂದು ಬಿಜಿಎಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ದರ್ಶನ್ ಜೊತೆಗೆ ಇನ್ನು ಏಳು ಜನರಿಗೂ ರೆಗ್ಯುಲ್ ಬೇಲ್ ಸಿಕ್ಕಿದೆ. ಪವಿತ್ರ ಗೌಡ ಕೂಡ ಇಂದು ರಿಲೀಸ್ ಆಗುವ ಸಾಧ್ಯತೆ ಇದೆ.