ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 15 : ನಗರದ ಖ್ಯಾತ ವಕೀಲರಾದ ಕೆ ಚಂದ್ರಶೇಖರಪ್ಪ, (74 ವರ್ಷ) ಶನಿವಾರ ರಾತ್ರಿ ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ 11:00 ಗಂಟೆಗೆ ನಿಧನರಾದರು.
ಮೃತರು ಪತ್ನಿ, ಇಬ್ಬರು ಪುತ್ರಿಯರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿರುತ್ತಾರೆ. ಅಂತಿಮ ದರ್ಶನಕ್ಕಾಗಿ ದಾವಣಗೆರೆಯ ಸ್ವಗೃಹ ಎಸ್. ಎಸ್. ಸಮೃದ್ಧಿ ಅಪಾರ್ಟ್ಮೆಂಟ್ 7ನೇ ಮುಖ್ಯರಸ್ತೆ, ಎಂ.ಸಿ.ಸಿ. ಬಿ ಬ್ಲಾಕ್ ನಲ್ಲಿ 12 ಗಂಟೆಯವರೆಗೆ ವ್ಯವಸ್ಥೆ ಕಲ್ಪಿಸಲಾಗುವುದು.
ಮೃತರ ಅಂತ್ಯಕ್ರಿಯೆ ಇಂದು (ಭಾನುವಾರ) ಮಧ್ಯಾಹ್ನ 2 ಗಂಟೆಗೆ ತಾಲ್ಲೂಕಿನ ಮುತ್ತಗದೂರಿನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.