Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕಲೆ, ಸಾಹಿತ್ಯ, ಸಂಗೀತ, ಜಾನಪದವನ್ನು ಆಧುನಿಕತೆಗೆ ತಕ್ಕಂತೆ ಉಳಿಸಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ : ಡಾ.ಜೆ.ಕರಿಯಪ್ಪ ಮಾಳಿಗೆ

Facebook
Twitter
Telegram
WhatsApp

ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್

ಚಿತ್ರದುರ್ಗ : ಜಾನಪದ ಎಂದರೆ ಕೇವಲ ಹಾಡುವುದಲ್ಲ. ಸಮಾಜಕ್ಕೆ ಮೌಲ್ಯ, ನೀತಿ ಸಂದೇಶವನ್ನು ನೀಡುತ್ತದೆ ಎಂದು ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಾ.ಜೆ.ಕರಿಯಪ್ಪ ಮಾಳಿಗೆ ತಿಳಿಸಿದರು.

ಮದಕರಿ ಯುವಕ ಸಂಘ ಚಿತ್ರದುರ್ಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಕರ್ನಾಟಕ ಜಾನಪದ ಪರಿಷತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವುಗಳ ಸಹಯೋಗದೊಂದಿಗೆ ತ.ರಾ.ಸು.ರಂಗಮಂದಿರದಲ್ಲಿ ಮಂಗಳವಾರ ನಡೆದ ಜಾನಪದ ನೃತ್ಯ ಸಂಗೀತೋತ್ಸವವನ್ನು ತಬಲ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ವೈವಿದ್ಯಮಯ ಬದುಕಿನ ಮೇಲೆ ಆಧುನಿಕತೆ ಪ್ರಭಾವ ಬೀರಿದೆ. ಕಲೆ, ಸಾಹಿತ್ಯ, ಸಂಗೀತ, ಜಾನಪದವನ್ನು ಆಧುನಿಕತೆಗೆ ತಕ್ಕಂತೆ ಉಳಿಸಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಹೇಳಿದರು.

ಎಲ್ಲಾ ಕಲೆಗೆ ತಾಯಿ ಬೇರಿನಂತಿರುವ ಜಾನಪದ ಕಲೆಯನ್ನು ಉಳಿಸಿಕೊಂಡಾಗ ಮಾತ್ರ ಕಲಾವಿದರು ಹಾಗೂ ಪರಂಪರೆ ಉಳಿಯುತ್ತದೆ. ಜನಪದ ಕಲೆಯಲ್ಲಿ ಬದುಕಿನ ಸತ್ವ, ತತ್ವ ಅಡಗಿದೆ. ಹಾಗಾಗಿ ಜಾನಪದ ಕಲೆಗೆ ಹೊಸ ರೂಪ ಕೊಡಬೇಕಿದೆ. ವಾದ್ಯ, ವೇಷಗಳು ಆಕರ್ಷಣೀಯವಾಗಬೇಕು. ಹಳ್ಳಿಗಾಡಿನಿಂದ ಸಹಜವಾಗಿ ಬಂದಿರುವ ಜಾನಪದ ಕಲೆ ಅದ್ಬುತವಾದುದು.

ಕನ್ನಡ ಜನಪದಕ್ಕೂ ಕರ್ನಾಟಕಕ್ಕೂ ಸಂಬಂಧವಿದೆ. ಹಳ್ಳಿಯ ಕನ್ನಡವೇ ನಿಜವಾದ ಜನಪದ ಸತ್ವ. ಜನಪದ ಕಲಾವಿದರು ಬದುಕನ್ನು ತುಂಬಾ ಚೆನ್ನಾಗಿ ಕಟ್ಟಿಕೊಂಡಿರುತ್ತಾರೆ. ಬಡತನವಿರಬಹುದು. ಆದರೆ ಆರೋಗ್ಯವಾಗಿರುತ್ತಾರೆ. ಪ್ರತಿಯೊಂದು ಜನಪದ ಕಲೆಗಳು ಬದುಕಿನ ಪ್ರತಿಬಿಂಬ. ಹಿಂದೆ ಜನಪದ ಹಾಡು ಬಾಯಿಂದ ಬಾಯಿಗೆ ಹರಡುತ್ತಿತ್ತು. ಈಗ ಊರಿಂದ ಊರಿಗೆ ಸಮುದಾಯಕ್ಕೆ ಪ್ರಸಾರವಾಗಿ ಕಲೆಗಳನ್ನು ಪ್ರದರ್ಶಿಸಲು ಸರಿಯಾದ ವೇದಿಕೆ ಬೇಕಿದೆ.
ಈ ನಿಟ್ಟಿನಲ್ಲಿ ಮದಕರಿ ಯುವಕ ಸಂಘ ನಿರಂತರವಾಗಿ ಜನಪದ ಕಲಾವಿದರನ್ನು ಗುರುತಿಸುವ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಧನಂಜಯಪ್ಪ ಮಾತನಾಡಿ ಕಲೆಗೆ ಅದರದೆ ಆದ ಮಹತ್ವ, ಮೌಲ್ಯವಿದೆ. ಕಲೆ ಎನ್ನುವುದು ಜೀವನದ ಒಂದು ಭಾಗ. ಸಂಪದ್ಬರಿತ ಮಾನವ ಸಂಪನ್ಮೂಲವೂ ಹೌದು. ಕಲಾವಿದರಿಗೆ ಹಣ, ಆರೋಗ್ಯದ ಜೊತೆ ಕಲೆಯೂ ಇರಬೇಕು. ಜಾಗತಿಕ ಯುಗದಲ್ಲಿ ಕಲೆ ನಶಿಸುತ್ತಿದೆ. ಎಲ್ಲಾ ಮಾಧ್ಯಮಗಳನ್ನು ಮೀರಿಸುವ ಮಾಧ್ಯಮ ಯಾವುದಾದರೂ ಇದ್ದರೆ ಅದು ಜನಪದ ಕಲೆ ಎಂದು ಹೇಳಿದರು.

ಸರ್ಕಾರದ ಯೋಜನೆಗಳನ್ನು ಮಾಧ್ಯಮಗಳ ಮೂಲಕ ಜನರಿಗೆ ಪ್ರದರ್ಶಿಸುತ್ತೇವೆ. ಪ್ರಬಲ ಮಾಧ್ಯಮ ಜಾನಪದ ಕಲೆಯನ್ನು ಪೋಷಣೆ ಮಾಡಿದಾಗ ಮಾತ್ರ ಕಲಾವಿದರು ಉಳಿಯಲು ಸಾಧ್ಯ ಎಂದರು.

ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಗೂ ಹಿರಿಯ ಕಲಾವಿದ ಹಿರಿಯೂರಿನ ವಿದ್ವಾನ್ ತಿಪ್ಪೇಸ್ವಾಮಿ, ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕ ಎ.ನಾಗರಾಜ್, ವದ್ದಿಕೆರೆ ಗುರುಕರಿಬಸವೇಶ್ವರಸ್ವಾಮಿ ಮಠದ ವದ್ದಿಕೆರೆ ಕಾಂತರಾಜ್, ಮದಕರಿ ಯುವಕ ಸಂಘದ ಅಧ್ಯಕ್ಷ ಕೆ.ಸೋಮಶೇಖರ್ ವೇದಿಕೆಯಲ್ಲಿದ್ದರು.
ಶಾಸ್ತ್ರೀಯ ಸಂಗೀತ, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಜಾನಪದ ಸಂಗೀತ, ತತ್ವ ಪದಗಳು, ಭರತನಾಟ್ಯ, ರಂಗ ಗೀತೆಗಳು, ಗೊರವರ ಕುಣಿತ, ಭಜನೆ, ಜೋಗಿ ಕುಣಿತ, ಕೋಲಾಟ ಪ್ರದರ್ಶನಗೊಂಡಿತು. ನೂರಕ್ಕೂ ಹೆಚ್ಚು ಕಲಾವಿದರು ಜಾನಪದ ನೃತ್ಯ ಸಂಗೀತೋತ್ಸವದಲ್ಲಿ ಪಾಲ್ಗೊಂಡಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಕಾಮಾಲೆ (ಜಾಂಡೀಸ್) ರೋಗ ಎಂದರೇನು ? ಇಲ್ಲಿದೆ ಉಪಯುಕ್ತ ಮಾಹಿತಿ….!

ಕಾಮಾಲೆ ಅಥವಾ ಜಾಂಡೀಸ್ ಎನ್ನುವುದು ಹತ್ತು ಹಲವು ರೋಗಗಳಲ್ಲಿ ಕಂಡು ಬರುವ ದೇಹ ಸ್ಥಿತಿಯಾಗಿರುತ್ತದೆ. ಹಲವಾರು ಕಾರಣಗಳಿಂದ ಕಾಮಾಲೆ ರೋಗ ಬರುವ ಸಾಧ್ಯತೆ ಇರುತ್ತದೆ. ಕಾಮಾಲೆ ಎಂಬ ಪದವು ಕಾಮ ಮತ್ತು ಲಾ ಎಂಬ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ: ಈ ರಾಶಿಯ ಕುಟುಂಬದಲ್ಲಿ ಕಲಹಗಳು ಆಗಲು ದಾಯಾದಿಗಳೇ ಕಾರಣ : ಈ ರಾಶಿಯ ಗಂಡ ಹೆಂಡತಿ ದೂರವಾಗಲು ಹಿತೈಷಿಗಳೇ ಕಾರಣ : ಶನಿವಾರ-ರಾಶಿ ಭವಿಷ್ಯ

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

error: Content is protected !!