Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

Digital Ration Card : ಡಿಜಿಟಲ್ ರೇಷನ್ ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ ? ಇಲ್ಲಿದೆ ಉಪಯುಕ್ತ ಮಾಹಿತಿ…!

Facebook
Twitter
Telegram
WhatsApp

ಸುದ್ದಿಒನ್ | ಡಿಜಿಟಲ್ ಇಂಡಿಯಾ ಅಡಿಯಲ್ಲಿ ಕೇಂದ್ರವು ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದೆ. ಸಾರ್ವಜನಿಕರಿಗೆ ನೇರವಾಗಿ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಎಲ್ಲಾ ರೀತಿಯ ಡೇಟಾ ಆನ್‌ಲೈನ್‌ನಲ್ಲಿ ಲಭ್ಯವಾಗುವಂತೆ ಮಾಡಲು ಸರ್ಕಾರ ಪ್ರಯತ್ನಗಳನ್ನು ಮಾಡುತ್ತಿದೆ. ಈ ವಿಭಾಗದಲ್ಲಿ ಪಡಿತರ ಚೀಟಿ ಡಿಜಿಟಲ್ ರೂಪದಲ್ಲಿ ದೊರೆಯುವಂತೆ ಮಾಡುವಲ್ಲಿ ಸರಕಾರ ಯಶಸ್ವಿಯಾಗಿದೆ. ದೇಶದಲ್ಲಿ “ಒಂದು ರಾಷ್ಟ್ರ, ಒಂದು ಪಡಿತರ ಚೀಟಿ” ಯೋಜನೆಯನ್ನು ಜಾರಿಗೆ ತರಲು ಪ್ರಯತ್ನಿಸಲಾಗುತ್ತಿದೆ.

ಡಿಜಿಟಲ್ ಪಡಿತರ ಚೀಟಿ ಇದೊಂದು ಎಲೆಕ್ಟ್ರಾನಿಕ್ ಕಾರ್ಡ್ ಆಗಿದೆ. ಇದು ಪಡಿತರ ಚೀಟಿಯ ಡಿಜಿಟಲ್ ಆವೃತ್ತಿಯಾಗಿದೆ. ಇದನ್ನು ಡೌನ್‌ಲೋಡ್ ಮಾಡುವುದರಿಂದ ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಅಡಿಯಲ್ಲಿ ಆಹಾರ ಧಾನ್ಯಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ಪಡೆಯುವುದು ಸುಲಭವಾಗುತ್ತದೆ. ಇದನ್ನು ಆನ್‌ಲೈನ್ ಅಥವಾ ಮೇರಾ ರೇಷನ್ 2.0 ಅಪ್ಲಿಕೇಶನ್ ಮೂಲಕ ಸುಲಭವಾಗಿ ಡೌನ್‌ಲೋಡ್ ಮಾಡಬಹುದು.

ಏನಿದು ಮೇರಾ ರೇಷನ್ 2.0 ಆಪ್?

ಡಿಜಿಟಲ್ ಪಡಿತರ ಚೀಟಿಯು ಸಾರ್ವಜನಿಕ ವಿತರಣಾ ವ್ಯವಸ್ಥೆ (ಪಿಡಿಎಸ್) ಅಡಿಯಲ್ಲಿ ಸಬ್ಸಿಡಿ ಆಹಾರ ಧಾನ್ಯಗಳನ್ನು ಪಡೆಯಲು ಫಲಾನುಭವಿಗಳಿಗೆ ಅನುಕೂಲವಾಗುವ ಎಲೆಕ್ಟ್ರಾನಿಕ್ ದಾಖಲೆಯಾಗಿದೆ. ಇದನ್ನು ಆನ್‌ಲೈನ್ ಅಥವಾ ಮೇರಾ ರೇಷನ್ 2.0 ಅಪ್ಲಿಕೇಶನ್ ಮೂಲಕ ಸುಲಭವಾಗಿ ಡೌನ್‌ಲೋಡ್ ಮಾಡಬಹುದು. ಇದು ಭಾರತ ಸರ್ಕಾರದಿಂದ ಬಿಡುಗಡೆಯಾದ ಮೊಬೈಲ್ ಅಪ್ಲಿಕೇಶನ್ ಆಗಿದೆ. ಇದು ಪಡಿತರ ಚೀಟಿದಾರರಿಗೆ PES ಸೇವೆಗಳಿಗೆ ಸುಲಭ ಪ್ರವೇಶವನ್ನು ಒದಗಿಸುತ್ತದೆ. ಕೇಂದ್ರವು ಅದನ್ನು ಮತ್ತಷ್ಟು ಅಭಿವೃದ್ಧಿಪಡಿಸುತ್ತಿದೆ.

• ಡಿಜಿಟಲ್ ಪಡಿತರ ಚೀಟಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

• ವೈಯಕ್ತಿಕ ಮಾಹಿತಿಯನ್ನು ನವೀಕರಿಸಬಹುದು.

• ಪಡಿತರ ಹಕ್ಕುಗಳ ಬಗ್ಗೆ ಮಾಹಿತಿಯನ್ನು ಪಡೆಯಬಹುದು.

• ಕುಟುಂಬ ಸದಸ್ಯರನ್ನು ಸೇರಿಸುವ ಅಥವಾ ತೆಗೆದುಹಾಕುವಂತಹ ಸೇವೆಗಳನ್ನು ಪಡೆಯಬಹುದು.

ಅಪ್ಲಿಕೇಶನ್ ಡೌನ್‌ಲೋಡ್ ಮಾಡಲು ಹೀಗೆ ಮಾಡಿ…!

• Android ಬಳಕೆದಾರರು: Google Play Store ನಿಂದ ಡೌನ್‌ಲೋಡ್ ಮಾಡಬಹುದು.

• iOS ಬಳಕೆದಾರರು: Apple App Store ನಿಂದ ಡೌನ್‌ಲೋಡ್ ಮಾಡಬಹುದು.

• ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ: ಸ್ಮಾರ್ಟ್‌ಫೋನ್‌ನಲ್ಲಿ ಮೇರಾ ರೇಷನ್ 2.0 ಅಪ್ಲಿಕೇಶನ್ ಅನ್ನು install ಮಾಡಿಕೊಳ್ಳಿ.

• ಅಪ್ಲಿಕೇಶನ್ ತೆರೆಯಿರಿ.

• ಪರದೆಯ ಮೇಲೆ ತೋರಿಸಿರುವ ನಿಮ್ಮ ಆಧಾರ್ ಸಂಖ್ಯೆ, ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ.

• “ಪರಿಶೀಲಿಸು” ಬಟನ್ ಕ್ಲಿಕ್ ಮಾಡಿ. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ.

• OTP ಅನ್ನು ನಮೂದಿಸಿ ಮತ್ತು “ಪರಿಶೀಲಿಸು” ಕ್ಲಿಕ್ ಮಾಡಿ.

• ಪರಿಶೀಲನೆಯ ನಂತರ, ಡಿಜಿಟಲ್ ಪಡಿತರ ಚೀಟಿ ಪರದೆಯ ಮೇಲೆ ಕಾಣಿಸುತ್ತದೆ. ಅದನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ ಅಥವಾ ಮೊಬೈಲ್ ನಲ್ಲಿ save ಮಾಡಿಕೊಳ್ಳಿ.

ಡಿಜಿಟಲ್ ಪಡಿತರ ಚೀಟಿಯ ಪ್ರಯೋಜನಗಳು

• ಅದನ್ನು ಎಲ್ಲಿಯಾದರೂ, ಯಾವುದೇ ಸಮಯದಲ್ಲಿ ಬಳಸಬಹುದು.

• ಕಾರ್ಡ್ ಕಳೆದುಕೊಳ್ಳುವ ಭಯವಿಲ್ಲ.

• ಎಲ್ಲ ದಾಖಲೆಗಳೂ ಡಿಜಿಟಲ್ ಆಗಿರುವುದರಿಂದ ವಂಚನೆಯಾಗುವ ಸಾಧ್ಯತೆ ಕಡಿಮೆ.

• ಇ-ರೇಷನ್ ಕಾರ್ಡ್ ಅನ್ನು ಹೇಗೆ ಪರಿಶೀಲಿಸುವುದು

• ಇ-ಪಡಿತರ ಕಾರ್ಡ್ ಮಾಹಿತಿಯನ್ನು ಪರಿಶೀಲಿಸಲು ಬಯಸಿದರೆ, ರಾಜ್ಯ ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಗೆ ಭೇಟಿ ನೀಡಿ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲ್ವೆ ಯೋಜನೆ : ಬಾಕಿ ಪ್ರಕರಣಗಳನ್ನು ಲೋಕ್ ಅದಾಲತ್‍ನಲ್ಲಿ ಇತ್ಯರ್ಥ ಪಡಿಸಲು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ

ಚಿತ್ರದುರ್ಗ. ಡಿ.12: ರೈಲ್ವೆ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಲೋಕ್ ಅದಾಲತ್‍ನಲ್ಲಿ ಇತ್ಯರ್ಥ ಪಡಿಸುವ ಪ್ರಕರಣಗಳನ್ನು ನಿಯಾಮಾನುಸಾರ ಇತ್ಯರ್ಥಪಡಿಸಲು ಅಗತ್ಯ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧಿಕಾರಿಗಳಿಗೆ ಸೂಚಿಸಿದರು.   ನಗರದ

ಸುಳ್ಳು ಜಾತಿ ಪ್ರಮಾಣ ಪತ್ರ ಕೇಸ್ : ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ಗೆ ಮತ್ತಷ್ಟು ಸಂಕಷ್ಟ..!

ಬೆಂಗಳೂರು: ಸುಳ್ಳು ಜಾತಿ ಪ್ರಮಾಣ ಪತ್ರ ಕೇಸಿಗೆ ಸಂಬಂಧಿಸಿದ ಪ್ರಕರಣದ ತನಿಖೆ ನಡೆಸಲು ಹೈಕೋರ್ಟ್ ಅಸ್ತು ಎಂದಿದೆ. ಇದರಿಂದಾಗಿ ಕೋಲಾರ ಕ್ಷೇತ್ರದ ಶಾಸಕ ಕೊತ್ತೂರು ಮಂಜುನಾಥ್ ಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಮಂಜುನಾಥ್ ವಿರುದ್ಧ

ರಾಜ್ಯ ಸರ್ಕಾರಿ ನೌಕರರಿಗೂ ಕೇಂದ್ರ ಮಾದರಿ ವೇತನ ನೀಡಿ : ಮಾಲತೇಶ್ ಮುದ್ದಜ್ಜಿ

ಸುದ್ದಿಒನ್, ಚಿತ್ರದುರ್ಗ ಡಿ. 12 : ಹಾಲಿ ಸರ್ಕಾರಿ ನೌಕರರಾಗಿ ಮೃತಪಟ್ಟಲ್ಲಿ ಅವರ ಅಂತ್ಯಕ್ರಿಯೆಗೆ ಸಂಘದಿಂದ 5000, ಚಿತ್ರದುರ್ಗದಲ್ಲಿ ಸರ್ಕಾರಿ ನೌಕರರ ಭವನ ನಿರ್ಮಾಣ, ಸರ್ಕಾರಿ ನೌಕರರಿಗೆ ಜ್ಯೋತಿ ಸಂಜೀವಿನಿ ಯೋಜನೆ ಜಾರಿ, ಎನ್.ಪಿ.ಎಸ್

error: Content is protected !!