Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕೊರೋನರಿ ಕ್ಯಾಲ್ಸಿಯಂ ಸ್ಕ್ಯಾನ್ ಎಂದರೇನು ?

Facebook
Twitter
Telegram
WhatsApp

ಇದೊಂದು ರೀತಿಯ ಹೃದಯದ ಸ್ಕ್ಯಾನಿಂಗ್ ಪರೀಕ್ಷೆಯಾಗಿದ್ದು, ಹೃದಯಕ್ಕೆ ರಕ್ತ ಪೂರೈಸುವ ರಕ್ತನಾಳಗಳ ಒಳಭಾಗದಲ್ಲಿ ಶೇಖರಣೆಗೊಂಡ ಕ್ಯಾಲ್ಸಿಯಂನ ಪ್ರಮಾಣವನ್ನು ಪತ್ತೆ ಹಚ್ಚುವ ಪರೀಕ್ಷೆಯಾಗಿರುತ್ತದೆ. ಹೃದಯಾಘಾತವಾಗುವ ಸಾಧ್ಯತೆಗಳನ್ನು ಈ ಕ್ಯಾಲ್ಸಿಯಂ ಅಂಕದಿಂದ ನಿರ್ಧರಿಸಲಾಗುತ್ತದೆ. ಆರೋಗ್ಯವಂತ ವ್ಯಕ್ತಿಗಳಲ್ಲಿ ಕ್ಯಾಲ್ಸಿಯಂ ಸ್ಕೋರ್ ಶೂನ್ಯವಾಗಿರುತ್ತದೆ. ಈ ಕ್ಯಾಲ್ಸಿಯಂ ಸ್ಕೋರ್ ಜಾಸ್ತಿಯಾದಂತೆ ಹೃದಯಾಘಾತದ ಸಾಧ್ಯತೆ ಹೆಚ್ಚಾಗುತ್ತದೆ. ಈ ಹೃದಯದ ಪರೀಕ್ಷೆಯನ್ನು ಕೊರೋನರಿ ಆರ್ಟರಿ ಕ್ಯಾಲ್ಸಿಯಂ ಸ್ಕ್ಯಾನ್, ಕ್ಯಾಲ್ಸಿಯಂ ಸ್ಕ್ಯಾನ್ ಪ್ರೊಸೀಜರ್, ಕಾರ್ಡಿಯಾಕ್ ಸಿಟಿ, ಹಾರ್ಟ್ ಸ್ಕ್ಯಾನ್ ಎಂಬ ಬೇರೆ ಬೇರೆ ಹೆಸರುಗಳಲ್ಲಿ ಕರೆಯುತ್ತಾರೆ.

ಏನಿದು ಕಾರ್ಡಿಯಾಕ್ ಕ್ಯಾಲ್ಸಿಯಂ ಸ್ಕ್ಯಾನ್?

ಕ್ಯಾಲ್ಸಿಯಂ ಲವಣ ನಮ್ಮ ದೇಹದಲ್ಲಿ ಅತೀ ಅವಶ್ಯಕವಾದ ವಸ್ತುವಾಗಿರುತ್ತದೆ. ಜೀವಕೋಶಗಳು ಮತ್ತು ಸ್ನಾಯುಖಂಡಗಳ ಕಾರ್ಯಕ್ಷಮತೆಗೆ ಇದು ಅತೀ ಅವಶ್ಯಕ. ಆದರೆ ಕೆಲವೊಮ್ಮೆ ಈ ಕ್ಯಾಲ್ಸಿಯಂ ಅಗತ್ಯವಿರದ ಜೀವಕೋಶದೊಳಗೆ ಸೇರಿಕೊಂಡು ತೊಂದರೆ ನೀಡಬಹುದು. ಉದಾಹರಣೆಗೆ ರಕ್ತನಾಳದ ಒಳಗೆ ಇರುವ ಪಾಚಿಗಟ್ಟಿದ ಪ್ಲಾಖ್ ಎಂಬ ವಸ್ತುವಿನೊಂದಿಗೆ ಕ್ಯಾಲ್ಸಿಯಂ ಸೇರಿಕೊಂಡು ರಕ್ತನಾಳದ ಒಳಭಾಗವನ್ನು ಆವರಿಸಿಕೊಂಡು ರಕ್ತದ ಪರಿಚಲನೆಗೆ ತೊಂದರೆ ಉಂಟುಮಾಡುತ್ತದೆ. ಮೆದುಳು ಮತ್ತು ಹೃದಯದ ರಕ್ತನಾಳದೊಳಗೆ ಈ ರೀತಿ ಕ್ಯಾಲ್ಸಿಯಂ ಲವಣ ಅಧಿಕವಾಗಿ ಸೇರಿಕೊಂಡಲ್ಲಿ ಸ್ಟ್ರೋಕ್ ಮತ್ತು ಹೃದಯಾಘಾತದ ಸಾಧ್ಯತೆ ಹೆಚ್ಚಾಗುತ್ತದೆ ಎಂದು ವೈದ್ಯಕೀಯ ಸಂಶೋಧನೆಗಳಿಂದ ತಿಳಿದುಬಂದಿದೆ.

ಪ್ಲಾಕ್ ಜೊತೆ ಸೇರಿದ ಕ್ಯಾಲ್ಸಿಯಂ ಕ್ರಮೇಣ ಗಟ್ಟಿಯಾಗುತ್ತದೆ ಮತ್ತು ನಿಧಾನವಾಗಿ ತನ್ನ ಗಾತ್ರವನ್ನು ವೃದ್ದಿಸಿಕೊಳ್ಳುತ್ತಲೇ ಹೋಗುತ್ತದೆ. ಆದ್ದರಿಂದ ರಕ್ತನಾಳದೊಳಗೆ ರಕ್ತಚಲನೆಗೆ ಅಡ್ಡಿಯಾಗುತ್ತದೆ. ಕ್ರಮೇಣ ರಕ್ತನಾಳಗಳ ಉರಿಯೂತಕ್ಕೆ ಕಾರಣವಾಗುತ್ತದೆ. ಕೆಲವೊಮ್ಮೆ ಈ ಗಟ್ಟಿಯಾದ ಕ್ಯಾಲ್ಸಿಯಂ ಸೇರಿದ ಪ್ಲಾಕ್ ಅಲ್ಲಿಂದ ಜಾರಿಕೊಂಡು ದೇಹದ ಬೇರೆ ಭಾಗಕ್ಕೆ ಚಲಿಸಿ ಅಲ್ಲಿಯೂ ತೊಂದರೆ ನೀಡುತ್ತದೆ. ಈ ರೀತಿ ರಕ್ತನಾಳದೊಳಗೆ ಶೇಖರಣೆಗೊಂಡು ಕ್ಯಾಲ್ಸಿಯಂ ಪ್ರಮಾಣವನ್ನು ಕ್ಯಾಲ್ಸಿಯಂ ಸ್ಕ್ಯಾನ್ ಪರೀಕ್ಷೆ ಮುಖಾಂತರ ಕಂಡುಹಿಡಿಯುತ್ತಾರೆ.

ಕೊರೊನರಿ ಕ್ಯಾಲ್ಸಿಯಂ ಸ್ಕ್ಯಾನ್ ಕಡಿಮೆ ವಿಕಿರಣ ಹೊಂದಿದ್ದು, ಹೃದಯದ ರಕ್ತನಾಳಗಳ ಒಳಗೆ ಸೇರಿದ ಕ್ಯಾಲ್ಸಿಯಂ ಪ್ರಮಾಣವನ್ನು ಪತ್ತೆ ಹಚ್ಚುತ್ತದೆ. ಈ ಪರೀಕ್ಷೆ ಮುಖಾಂತರ ಹೃದಯದ ಕೊರೊನರಿ ರಕ್ತನಾಳದೊಳಗಿನ ಕ್ಯಾಲ್ಸಿಯಂ ಪ್ರಮಾಣವನ್ನು ಗುರುತಿಸಿ ಅದಕ್ಕೆ ಒಂದು ಸಂಖ್ಯೆಯನ್ನು ನೀಡುತ್ತಾರೆ. ಅದನ್ನು ಕ್ಯಾಲ್ಸಿಯಂ ಸ್ಕೋರ್ ಎನ್ನುತ್ತಾರೆ.

ಯಾರಿಗೆ ಈ ಪರೀಕ್ಷೆ ಅಗತ್ಯವಿದೆ?

1) ಕುಟುಂಬದಲ್ಲಿ ಯಾರಿಗಾದರೂ ಹೃದಯಾಘಾತದ ಚರಿತ್ರೆ ಇದ್ದಲ್ಲಿ
2) ದೇಹದ ತೂಕ ಅತಿಯಾಗಿ ಇದ್ದಲ್ಲಿ ಕ್ಯಾಲ್ಸಿಯಂ ಸ್ಕ್ಯಾನ್ ಅತ್ಯಗತ್ಯ.
3) ದೇಹದಲ್ಲಿನ ಕೊಲೆಸ್ಟ್ರಾಲ್ ಪ್ರಮಾಣ ಅತಿಯಾಗಿ ಇದ್ದಲ್ಲಿ
4) ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ರೋಗದಿಂದ ಬಳಲುತ್ತಿದ್ದಲ್ಲಿ
5) ವ್ಯಕ್ತಿಯ ಃಒI ಅಂದರೆ ದೇಹದ ತೂಕದ ಅನುಪಾತ 30ಕ್ಕಿಂತಲೂ ಜಾಸ್ತಿ ಇದ್ದಲ್ಲಿ
6) ಅಧಿಕ ಒತ್ತಡದ ಜೀವನಶೈಲಿ ಇದ್ದಲ್ಲಿ
7) ಅತೀ ಹೆಚ್ಚು ಕೆಲಸದ ಒತ್ತಡ ಮತ್ತು ಮದ್ಯವ್ಯಸನಿಗಳಲ್ಲಿ ಈ ಕೊರೊನರಿ ಸ್ಕ್ಯಾನ್ ಅತ್ಯಗತ್ಯ

ಯಾರಿಗೆ ಅಗತ್ಯವಿಲ್ಲ

1) ಅತೀ ಕಡಿಮೆ ಹೃದಯಾಘಾತವಾಗುವ ಸಾಧ್ಯತೆ ಇರುವವರಿಗೆ ಈ ಸ್ಕ್ಯಾನ್ ಅಗತ್ಯವಿಲ್ಲ. ಧೂಮಪಾನ, ಮದ್ಯಪಾನ, ಸ್ಥೂಲಕಾಯ, ಹೆಚ್ಚಿದ ಕೊಲೆಸ್ಟ್ರಾಲ್ ಈ ಎಲ್ಲಾ ಸಮಸ್ಯೆ ಇಲ್ಲದವರಿಗೆ ಕೊರೊನರಿ ಕ್ಯಾಲ್ಸಿಯಂ ಪ್ಲಾನ್ ಅಗತ್ಯವಿಲ್ಲ. ಒಂದು ವೇಳೆ ಮಾಡಿಸಿದರೂ ನಾರ್ಮಲ್ ಕ್ಯಾಲ್ಸಿಯಂ ಸ್ಟೋರ್ ಬರುತ್ತದೆ.
2) ಅದೇ ರೀತಿ ಅತೀ ಹೆಚ್ಚು ಬೊಜ್ಜು, ಧೂಮಪಾನ ವ್ಯಸನಿಗಳು, ಹೆಚ್ಚಿದ ಕೊಲೆಸ್ಟ್ರಾಲ್, ಅಧಿಕ ರಕ್ತದೊತ್ತಡ, ಅತಿಯಾದ ಕೆಲಸದೊತ್ತಡ ಇರುವವರಿಗೆ ಹೃದಯವಂತನಾಗುವ ಸಾಧ್ಯತೆ ಅತೀ ಹೆಚ್ಚು ಇರುತ್ತದೆÀ. ಇಂತಹಾ ವ್ಯಕ್ತಿಗಳಿಗೆ ಈ ಕೊರೊನರಿ ಕ್ಯಾಲ್ಸಿಯಂ ಸ್ಕ್ಯಾನ್ ಮಾಡಿಸುವುದು ಅಗತ್ಯವಿಲ್ಲ. ಅವರಿಗೆ ನೇರವಾಗಿ ಆಂಜಿಯೋಗ್ರಾಂ ಪರೀಕ್ಷೆ ಮಾಡಿಸಬಹುದಾಗಿದೆ. ಕ್ಯಾಲ್ಸಿಯಂ ಸ್ಕ್ಯಾನ್ ಮಾಡಿಸುವುದರಿಂದ ಹೆಚ್ಚಿನ ಪ್ರಯೋಜನವಾಗುವುದಿಲ್ಲ.
3) ಇನ್ನೂ ನಿಮಗೆ ಈಗಾಗಲೇ ಹೃದಯದ ಸಮಸ್ಯೆ ಇದ್ದು ಹೃದಯಾಘಾತ ಆಗಿದ್ದಲ್ಲಿ ಈ ಕೊರೊನರಿ ಕ್ಯಾಲ್ಸಿಯಂ ಸ್ಕ್ಯಾನ್ ಪರೀಕ್ಷೆ ಅಗತ್ಯವಿಲ್ಲ. ಒಟ್ಟಿನಲ್ಲಿ ಕ್ಯಾಲ್ಸಿಯಂ ಸ್ಕ್ಯಾನ್ ಅಥವಾ ಹಾರ್ಟ್ ಸ್ಕ್ಯಾನ್ ಪರೀಕ್ಷೆ, ಬಾರ್ಡರ್ ಲೈನ್ ಇರುವ ವ್ಯಕ್ತಿಗಳಿಗೆ ಸೂಕ್ತ. ನಿಮ್ಮ ದೇಹದ ತೂಕ, ಗಾತ್ರ, ವಯಸ್ಸು, ವೃತ್ತಿ, ಕೆಲಸದ ವಾತಾವರಣ, ಕುಟುಂಬ ಚರಿತ್ರೆ ಎಲ್ಲವನ್ನೂ ಪರಿಶೀಲಿಸಿ, ಜೀವನಶೈಲಿ, ಆಹಾರ ಪದ್ದತಿಯನ್ನು ಅಭ್ಯಸಿಸಿ ನಿಮಗೆ ಈ ಪರೀಕ್ಷೆ ಅಗತ್ಯವಿದೆಯೇ ಎಂಬುದನ್ನು ನಿಮ್ಮ ವೈದ್ಯರು ನಿರ್ಧರಿಸುತ್ತಾರೆ.
4) ನೀವು ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸ್ಟಾಟಿನ್ ಎಂಬ ಕೊಲೆಸ್ಟ್ರಾಲ್ ನಿಯಂತ್ರಕ ಔಷಧಿ ಸೇವಿಸುತ್ತಿದ್ದರೆ ಈ ಪರೀಕ್ಷೆಯಲ್ಲಿ ನಿಖರವಾಗಿ ಕ್ಯಾಲ್ಸಿಯಂ ಸ್ಕೋರ್ ಬರದೇ ಇರಬಹುದು.
5) ಗರ್ಭಿಣಿ ಹೆಂಗಸರಲ್ಲಿ ಈ ಪರೀಕ್ಷೆ ಮಾಡಿಸಬಾರದು.

ಹೇಗೆ ಮಾಡಲಾಗುತ್ತದೆ

1) ಈ ಪರೀಕ್ಷೆ ಮಾಡುವಾಗ ನಾಲ್ಕು ಘಂಟೆಗಳ ಕಾಲ ಉಪವಾಸ ಇರಬೇಕಾಗುತ್ತದೆ.
2) ಪರೀಕ್ಷೆ ಮಾಡುವ ದಿನ ಕೆಫೇನ್ ದ್ರಾವಣ ಸೇವಿಸುವಂತಿಲ್ಲ. ನಿಮಗೆ ಮಾನಸಿಕ ಆಪ್ತ ಸಮಾಲೋಚನೆ ಮಾಡಲಾಗುತ್ತದೆ.
3) ಮದ್ಯಪಾನ, ಧೂಮಪಾನ ಮಾಡಿರಬಾರದು. ನಿಮ್ಮ ಹೃದಯ ಬಡಿತ, ರಕ್ತದೊತ್ತಡವನ್ನು ಪರೀಕ್ಷೆ ಮಾಡಲಾಗುತ್ತದೆ.
4) ನೀವು ನಿಮ್ಮ ಬೆನ್ನಿನ ಮೇಲೆ ಮಲಗಿರುತ್ತೀರಿ. ನಿಮ್ಮ ಕೈಗಳನ್ನು ತಲೆಯ ಮೇಲ್ಭಾಗದಲ್ಲಿ ಇರಿಸಿ ನಿಮ್ಮ ದೇಹವನ್ನು ಸ್ಕ್ಯಾನಿಂಗ್ ಯಂತ್ರದೊಳಗೆ ಹೋಗುವಂತೆ ಮಾಡಲಾಗುತ್ತದೆ.
5) ನಿಮ್ಮ ದೇಹಕ್ಕೆ ಯಂತ್ರದ ಸಲಕರಣೆಗಳನ್ನು ಜೋಡಿಸಲಾಗುತ್ತದೆ.
6) ನಿಮ್ಮ ಕೈಗಳ ರಕ್ತನಾಳಗಳ ಮುಖಾಂತರ ವಿಕಿರಣ ಸೂಸುವ ದ್ರಾವಣವನ್ನು ನೀಡಲಾಗುತ್ತದೆ.
7) ನಿಮಗೆ ದೀರ್ಘವಾಗಿ ಉಸಿರು ತೆಗೆದುಕೊಂಡು ಉಸಿರು ಬಿಗಿ ಹಿಡಿಯಲು ಹೇಳುತ್ತದೆ. ಈ ವಿಕಿರಣ ಸೂಸುವ ವಸ್ತು ನಿಮ್ಮ ದೇಹದ ಹೃದಯದ ರಕ್ತನಾಳಗಳಲ್ಲಿ ಹಾದುಹೋಗುವಾಗ ಕ್ಷಕಿರಣದ ಸ್ಕ್ಯಾನ್ ಮಾಡಲಾಗುತ್ತದೆ.
8) ನೀವು ಈ ಪರೀಕ್ಷೆ ಮಾಡುವಾಗ ಅಲುಗಾಡಬಾರದು. ಈ ಪರೀಕ್ಷೆಗೆ ಕೇವಲ 10 ರಿಂದ 15 ನಿಮಿಷ ತೆಗೆಯುತ್ತದೆ.
9) ನಿಮ್ಮ ದೇಹದ ಹೃದಯದ ಚಿತ್ರಣವನ್ನು ಬೇರೆಬೇರೆ ಆಯಾಮಗಳಲ್ಲಿ ಕ್ಷಕಿರಣ್ ಮೂಲಕ ದಾಖಲಿಸಲಾಗುತ್ತದೆ. ಬೇರೆ ಬೇರೆ ಆಯಾದಲ್ಲಿ ತೆಗೆದ ಚಿತ್ರಗಳನ್ನು ಆಧರಿಸಿ ನಿಮ್ಮ ಹೃದಯದ ಜಾತಕವನ್ನು ಪತ್ತೆಹಚ್ಚುತ್ತಾರೆ.
10) ನಿಮ್ಮ ಹೃದಯದ ಚಲನೆ, ಬಡಿತ, ರಕ್ತದ ಪೂರೈಕೆ, ರಕ್ತಪರಿಚಲನೆ, ಹೃದಯದ ರಕ್ತನಾಳಗಳ ರಚನೆ ಎಲ್ಲವನ್ನೂ ವಿವಿಧ ಕೋನಗಳಲ್ಲಿ ನೋಡಿ ಹೃದಯ ತಜ್ಞರು ಹೃದಯಾಘಾತದ ಬಗ್ಗೆ ವಿವರ ಪಡೆಯುತ್ತಾರೆ.

ಹೇಗೆ ಫಲಿತಾಂಶವನ್ನು ನಿರ್ಧರಿಸುತ್ತಾರೆ?

ನಿಮ್ಮ ಹೃದಯದ ರಕ್ತನಾಳದೊಳಗಿನ ಅಡಚಣೆಗೆ ಅನುಗುಣವಾಗಿ ಅಗಟ್‍ಸನ್ಸ್ ಸ್ಕೋರ್ ನೀಡಲಾಗುತ್ತದೆ.
1) ನಿಮಗೆ ಸೊನ್ನೆ ಅಥವಾ ಝೀರೋ ಕ್ಯಾಲ್ಸಿಯಂ ಸ್ಕೋರ್ ಬಂದಲ್ಲಿ ನಿಮಗೆ ರಕ್ತನಾಳದೊಳಗೆ ಯಾವುದೇ ಅಡಚಣೆ ಇಲ್ಲ ಮತ್ತು ಹೃದಯಾಘಾತವಾಗುವ ಸಾಧ್ಯತೆ ಅತೀ ಕಡಿಮೆ.
2) ನಿಮ್ಮ ಕ್ಯಾಲ್ಸಿಯಂ ಸಂಖ್ಯೆ 1 ರಿಂದ 10 ರೊಳಗೆ ಇದ್ದಲ್ಲಿ ನಿಮಗೆ ಜೀವನಶೈಲಿ ಪರಿವರ್ತನೆ ಮತ್ತು ಹೃದಯ ತಜ್ಞರ ಆಪ್ತ ಸಮಾಲೋಚನೆ ಅಗತ್ಯವಿರುತ್ತದೆ.
3) ನಿಮ್ಮ ಕ್ಯಾಲ್ಸಿಯಂ ಸಂಖ್ಯೆ 11 ರಿಂದ 100ರ ವರೆಗೆ ಇದ್ದಲ್ಲಿ ನಿಮಗೆ ವೈದ್ಯಕೀಯ ಚಿಕಿತ್ಸೆ ಅಗತ್ಯವಿದೆ ಮತ್ತು ಕೊಲೆಸ್ಟ್ರಾಲ್ ನಿಯಂತ್ರಣ ಅಗತ್ಯವಿರುತ್ತದೆ.
4) ನಿಮ್ಮ ಕ್ಯಾಲ್ಸಿಯಂ ಸ್ಕೋರ್ 101 ರಿಂದ 400 ಇದ್ದಲ್ಲಿ ನಿಮ್ಮ ರಕ್ತನಾಳದೊಳಗೆ ಇರುವ ಪಾಚಿಗಳಿಗೆ ಸೂಕ್ತ ಚಿಕಿತ್ಸೆ ಅತ್ಯಗತ್ಯ ಮತ್ತು ಹೃದಯ ತಜ್ಞರಿಂದ ಚಿಕಿತ್ಸೆ ಅನಿವಾರ್ಯವಾಗಿರುತ್ತದೆ.
5) ನಿಮ್ಮ ಕ್ಯಾಲ್ಸಿಯಂ ಸಂಖ್ಯೆ 400ಕ್ಕಿಂತಲೂ ಜಾಸ್ತಿ ಇದ್ದಲ್ಲಿ ನಿಮಗೆ ಇನ್ನೂ ಹೆಚ್ಚಿನ ಪರೀಕ್ಷೆ ಮತ್ತು ತಕ್ಷಣವೇ ಹೃದಯ ತಜ್ಞರಿಂದ ಚಿಕಿತ್ಸೆ ಅನಿವಾರ್ಯವಾಗಿರುತ್ತದೆ.

ಖರ್ಚು ಎಷ್ಟಾಗುತ್ತದೆ:

ಅಮೆರಿಕಾ ದೇಶದಲ್ಲಿ ಈ ಪರೀಕ್ಷೆಗೆ ಕನಿಷ್ಟ 100 ಡಾಲರ್ ಇದ್ದಲ್ಲಿ ನಮ್ಮ ಭಾರತ ದೇಶದಲ್ಲಿ ಈ ಪರೀಕ್ಷೆಗೆ 15 ರಿಂದ 20 ಸಾವಿರ ರೂಪಾಯಿ ಖರ್ಚಾಗುತ್ತದೆ. ಆದರೆ ಎಲ್ಲಾ ಆಸ್ಪತ್ರೆಗಳಲ್ಲಿ ಈ ಪರೀಕ್ಷೆ ಸೌಲಭ್ಯವಿರುವುದಿಲ್ಲ.

ಕೊನೆಮಾತು:

ಹೃದಯಾಘಾತ ಎನ್ನುವುದು ಸಾವಿಗೆ ಕಾರಣವಾಗುವ ರೋಗಗಳಲ್ಲಿ ಅಗ್ರಗಣ್ಯ ಸ್ಥಾನ ಪಡೆದಿದೆ. ಅದೇ ರೀತಿ 50 ಶೇಕಡಾ ಹೃದಯಾಘಾತಗಳನ್ನು ಜೀವನಶೈಲಿ ಪರಿವರ್ತನೆ, ಆಹಾರ ಪದ್ದತಿ ಬದಲಾವಣೆ ಮತ್ತು ನಿರಂತರ ಔಷಧಿ ಸೇವನೆಯಿಂದ ತಡೆಗಟ್ಟಬಹುದಾಗಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಹೆಚ್ಚು ಹೆಚ್ಚು ಹೃದಯಾಘಾತವಾಗುವ ಕಾರಣದಿಂದಾಗಿ ಕ್ಯಾಲ್ಸಿಯಂ ಸ್ಕ್ಯಾನ್ ಪರೀಕ್ಷೆ ಮತ್ತಷ್ಟು ಮುನ್ನಲೆಗೆ ಬಂದಿದೆ. ನಿಮ್ಮ ವೈದ್ಯರ ಸ¯ಹೆಯಿಂದ ಅಗತ್ಯವದ್ದಲ್ಲಿ ಮಾಡಿಸಿಕೊಂಡಲ್ಲಿ ನೂರು ಕಾಲ ನೆಮ್ಮದಿಯಿಂದ ಬದುಕಬಹುದಾಗಿದೆ.

ಡಾ|| ಮುರಲೀಮೋಹನ್ ಚೂಂತಾರು
BDS MDS DNB MBA MOSRCSEd
Consultant Oral and Maxillofacial Surgeon
[email protected]
[email protected]
9845135787

Facebook
Twitter
Telegram
WhatsApp
suddionenews

suddionenews

Leave a Comment

Top Stories

ಕೊರೋನರಿ ಕ್ಯಾಲ್ಸಿಯಂ ಸ್ಕ್ಯಾನ್ ಎಂದರೇನು ?

ಇದೊಂದು ರೀತಿಯ ಹೃದಯದ ಸ್ಕ್ಯಾನಿಂಗ್ ಪರೀಕ್ಷೆಯಾಗಿದ್ದು, ಹೃದಯಕ್ಕೆ ರಕ್ತ ಪೂರೈಸುವ ರಕ್ತನಾಳಗಳ ಒಳಭಾಗದಲ್ಲಿ ಶೇಖರಣೆಗೊಂಡ ಕ್ಯಾಲ್ಸಿಯಂನ ಪ್ರಮಾಣವನ್ನು ಪತ್ತೆ ಹಚ್ಚುವ ಪರೀಕ್ಷೆಯಾಗಿರುತ್ತದೆ. ಹೃದಯಾಘಾತವಾಗುವ ಸಾಧ್ಯತೆಗಳನ್ನು ಈ ಕ್ಯಾಲ್ಸಿಯಂ ಅಂಕದಿಂದ ನಿರ್ಧರಿಸಲಾಗುತ್ತದೆ. ಆರೋಗ್ಯವಂತ ವ್ಯಕ್ತಿಗಳಲ್ಲಿ ಕ್ಯಾಲ್ಸಿಯಂ

ಈ ರಾಶಿಯ ಹೆಣ್ಣು ಮಕ್ಕಳಿಗೆ ಸರಕಾರಿ ನೌಕರಿ ಅತಿ ಶೀಘ್ರದಲ್ಲಿ ಸಿಗಲಿದೆ

ಈ ರಾಶಿಯ ಹೆಣ್ಣು ಮಕ್ಕಳಿಗೆ ಸರಕಾರಿ ನೌಕರಿ ಅತಿ ಶೀಘ್ರದಲ್ಲಿ ಸಿಗಲಿದೆ, ಈ ರಾಶಿಯ ವ್ಯವಹಾರಗಳಲ್ಲಿ ಬರೀ ಅಡಚಣೆ ಎದುರಿಸಬೇಕಾಗುವುದು, ಬುಧವಾರ-ನವೆಂಬರ್-27,2024 ಸೂರ್ಯೋದಯ: 06:31, ಸೂರ್ಯಾಸ್: 05:35 ಶಾಲಿವಾಹನ ಶಕೆ -1946 ಸಂವತ್-2080 ಕ್ರೋಧಿನಾಮ

ಸಂವಿಧಾನದ ಆಶಯಗಳು ಭಾವನಾತ್ಮಕ ಆಚರಣೆಗೆ ಸೀಮಿತವಾಗದಿರಲಿ: ಡಾ. ಎಂ. ಎಸ್. ಶೇಖರ್

  ಶಂಕರಘಟ್ಟ, ನ. 26: ಅಂಬೇಡ್ಕರ್ ಅವರ ವಿಚಾರಧಾರೆಗಳು ಮತ್ತು ಸಂವಿಧಾನದ ಆಶಯಗಳನ್ನು ಭಾವನಾತ್ಮಕ ಮಾತುಗಳಿಗೆ ಸೀಮಿತಗೊಳಿಸದೆ, ಬದ್ಧತೆಯೊಂದಿಗೆ ಅನುಷ್ಠಾನಗೊಳಿಸಬೇಕಾದ ಹೊಣೆಗಾರಿಕೆಯನ್ನು ನಾವೆಲ್ಲರೂ ನಿರ್ವಹಿಸಬೇಕೆಂದು ಸಾಹಿತಿ ಮತ್ತು ಚಿಂತಕ ಡಾ. ಎಂ. ಎಸ್. ಶೇಖರ್

error: Content is protected !!