Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಶಿವಮೊಗ್ಗ, ತುಮಕೂರು ಜೋರು ಮಳೆ.. ಚಿತ್ರದುರ್ಗ, ದಾವಣಗೆರೆ ಸಾಧಾರಣ ಮಳೆ : ಎಲ್ಲೆಲ್ಲಿ ಹೇಗಿದೆ ಮಳೆಯ ಅಬ್ಬರ..?

Facebook
Twitter
Telegram
WhatsApp

 

ಬೆಂಗಳೂರು: ರಾಜ್ಯದಲ್ಲಿ ಚುಮು ಚುಮು ಚಳಿ ಶುರುವಾಗುತ್ತಿರುವಾಗಲೆ ಮಳೆರಾಯ ಬೇರೆ ಮತ್ತೆ ಎಂಟ್ರಿ ಕೊಟ್ಟಿದ್ದಾನೆ. ಈಗಾಗಲೇ ರಾಜ್ಯದ ಹಲವೆಡೆ ಅಲ್ಲಲ್ಲಿ ಮಳೆಯಾಗುತ್ತಿದೆ. ಹವಮಾನ ಇಲಾಖೆ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಶಿವಮೊಗ್ಗ, ತುಮಕೂರು, ರಾಮನಗರ, ಮೈಸೂರು, ಚಿಕ್ಕಮಗಳೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಲಿದ್ದು, ಎಲ್ಲೋ ಅಲರ್ಟ್ ಘೋಷಣೆ ಮಾಡಿದೆ.

ದಾವಣಗೆರೆ, ಚಿತ್ರದುರ್ಗ, ವಿಜಯನಗರ, ಮಂಡ್ಯ, ಕೋಲಾರ, ಕೊಡಗು, ಹಾಸನ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಯಚೂರು, ಕೊಪ್ಪಳ, ಕಲಬುರಗಿ, ಹಾವೇರಿ, ಗದಗ, ಧಾರವಾಡ, ಬೆಳಗಾವಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಇಂದು ಬೆಳಗ್ಗೆಯಿಂದಾನೇ ಹಲವೆಡೆ ಸಾಧಾರಣ ಮಳೆಯಾಗಿದೆ.

ಈಗ ರಾಜ್ಯದಲ್ಲಿ ಹಲವು ಬೆಳೆಗಳೆಲ್ಲಾ ಕೊಯ್ಲು ಮಾಡುವ ಸಮಯ ಬಂದಿದೆ. ತುಮಕೂರು ಜಿಲ್ಲೆ ಭಾಗದಲ್ಲಿ ರಾಗಿ ಬೆಳೆ ಹೆಚ್ಚಾಗಿ ಬೆಳೆಯಲಾಗುತ್ತದೆ. ಈಗ ರಾಗಿ ಎಲ್ಲಾ ಒಣಗಿದ್ದು, ಕೊಯ್ಲಿಗೆ ಬಂದಿದೆ. ಸಂಕ್ರಾಂತಿ ಒಳಗೆ ಎಲ್ಲಾ ರಾಗಿಯನ್ನು ಕೊಯ್ದು ಚೀಲ ಕಟ್ಟಿರುತ್ತಾರೆ. ಈಗ ನೋಡಿದರೆ ಮಳೆ ತುಮಕೂರು ಭಾಗದಲ್ಲೂ ಜೋರಾಗಿದ್ದು, ರಾಗಿ ಬೆಳೆದ ರೈತರಿಗೆ ಆತಂಕವಾಗಿದೆ. ಒಣಗಿದ ತೆನೆ ಮೇಲೆ ಮಳೆ ನೀರು ಬಿದ್ದರೆ ರಾಗಿಯೆಲ್ಲಾ ಕಪ್ಪಾಗಿ ಬಿಡುವ ಭಯ ಕಾಡುತ್ತಿದೆ. ಈಗಾಗಲೇ ಕೆಲವೊಂದು ಹೊಲಗಳಲ್ಲಿ ಬಿದ್ದ ಸಾಧಾರಣ ಮಳೆಗೆ ಪೈರುಗಳೆಲ್ಲ ನೆಲಕ್ಕೆ ಹಾಸಿ ಮಲಗಿವೆ. ಈಗ ಒಂದೇ ಸಮನೆ ಮಳೆ ಸುರಿದರೆ ಕೈಗೆ ಸೇರಬೇಕಾದ ಉತ್ತಮ ಗುಣಮಟ್ಟದ ರಾಗಿ ತನ್ನ ಸಾಂಧ್ರತೆಯನ್ನು ಕಳೆದುಕೊಳ್ಳುವ ಭಯವಿದೆ‌.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ನವೆಂಬರ್ 18 ರಿಂದ 24 ರವರೆಗೆ ಕಬೀರಾನಂದ ಹಾಗೂ ಕಬೀರೇಶ್ವರರ ಪುಣ್ಯಾರಾಧನೆ

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ನ. 15 : ನಗರದ ಕಬೀರಾನಂದ ನಗರದ ಶ್ರೀ ಗುರು ಕಬೀರಾನಂದ ಆಶ್ರಮದವತಿಯಿಂದ ಶ್ರೀ ಸದ್ಗುರು ಕಬೀರಾನಂದ

ಬಿರ್ಸಾ ಮುಂಡಾ ಹೆಸರಲ್ಲಿ ಶಾಲಾ-ಕಾಲೇಜುಗಳು ಪ್ರಾರಂಭವಾಗಲಿ : ಸಂಸದ ಗೋವಿಂದ ಎಂ ಕಾರಜೋಳ

ಚಿತ್ರದುರ್ಗ. ನ.15: ದೇಶದ ಸಲುವಾಗಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಭಗವಾನ್ ಬಿರ್ಸಾ ಮುಂಡಾ ಅವರ ಹೆಸರಿನಲ್ಲಿ ಶಾಲಾ-ಕಾಲೇಜುಗಳು ಪ್ರಾರಂಭ ಮಾಡಬೇಕು. ಆಗ ಮಾತ್ರ ಯುವ ಜನತೆಗೆ ಅವರ ಹೋರಾಟದ ಮಹತ್ವ ಹಾಗೂ ಅವರ

ನಬಾರ್ಡ್ ನೆರವು ನೀಡದಿದ್ದರೆ ಸಹಕಾರಿ ಕ್ಷೇತ್ರಕ್ಕೆ ದೊಡ್ಡ ಪೆಟ್ಟು : ಸಚಿವ ಡಿ.ಸುಧಾಕರ್

ಚಿತ್ರದುರ್ಗ. ನ.15: ನಬಾರ್ಡ್ (ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್) ವತಿಯಿಂದ ರಾಜ್ಯಕ್ಕೆ ಬರುತ್ತಿದ್ದ ಆರ್ಥಿಕ ನೆರವಿನಲ್ಲಿ ಶೇ.58ರಷ್ಟು ಕಡಿತ ಮಾಡಿರುವುದು ವಿಷಾದನೀಯ ಸಂಗತಿಯಾಗಿದೆ. ಈ ವರ್ಷ ರಾಜ್ಯಕ್ಕೆ ನಬಾರ್ಡ್ ನೀಡಬೇಕಿದ್ದ ರೂ.5800

error: Content is protected !!