ಸ್ಯಾಂಡಲ್ ವುಡ್ ನಿರ್ದೇಶಕ ಗುರುಪ್ರಸಾದ್ ಮಾದನಾಯಕನಹಳ್ಳಿ ಅಪಾರ್ಟ್ಮೆಂಟ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಗುರುಪ್ರಸಾದ್ ನಿಧನದ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು, ಸಂಬಂಧ ಪಟ್ಟವರಿಂದ ಮಾಹಿತಿಯನ್ನು ಪಡೆಯುತ್ತಿದ್ದಾರೆ. ಅವರ ಸಾವಿಗೆ ಕಾರಣವೇನು, ಸಾವಿಗೀಡಾಗುವುದಕ್ಕೂ ಮುನ್ನ ಯಾರೆಲ್ಲರ ಸಂಪರ್ಕದಲ್ಲಿದ್ದರು, ಏನೇನು ಸಮಸ್ಯೆಗಳನದನು ಅವರನ್ನು ಕಾಡುತ್ತಿತ್ತು ಎಂಬೆಲ್ಲದರ ಬಗ್ಗೆ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.
ಗುರುಪ್ರಸಾದ್ ಸಹೋದರ ಹಾಗೂ ಸಹ ನಿರ್ದೇಶಕ ಉದಯ್ ಅವರಿಂದ ಒಂದಷ್ಟು ಮಾಹಿತಿಯನ್ನು ಪಡೆದಿದ್ದಾರೆ. ಗುರುಪ್ರಸಾದ್ ಲೈಫ್ ನಲ್ಲಿ ಹೇಗಿದ್ದರು ಎಂಬ ವಿಚಾರವನ್ನು ಸಹೋದರ ತಿಳಿಸಿದ್ದಾರೆ. ‘ಗುರುಪ್ರಸಾದ್ ದಿನಕ್ಕೆ ಎರಡು ಪೆಗ್ ಮಾತ್ರ ಮದ್ಯಪಾನ ಮಾಡುತ್ತಿದ್ದರು. ಅವರನ್ನು ಸೋರಿಯಾಸಿಸ್ ಸಮಸ್ಯೆ ಕಾಡುತ್ತಿತ್ತು. ಈ ಕಾಯಿಲೆ ಬಗ್ಗೆ ಇತ್ತೀಚೆಗಷ್ಟೇ ಹೇಳಿದ್ದರು. ಗುರುಪ್ರಸಾದ್ ನಮ್ಮೊಡನೆ ಅಷ್ಟಾಗಿ ಸಂಪರ್ಕವಿರಲಿಲ್ಲ. ಹೀಗಾಗಿ ಅವರ ವೈಯಕ್ತಿಕ ವಿಚಾರದ ಬಗ್ಗೆ ಅಷ್ಟಾಗಿ ಗೊತ್ತಿಲ್ಲ ಎಂದೇ ಹೇಳಿದ್ದಾರೆ.
ಇನ್ನು ಸಹಾಯಕ ನಿರ್ದೇಶಕ ಉದಯ್ ಕೂಡ ಮಾಹಿತಿಯನ್ನು ನೀಡಿದ್ದು, ಗುರುಪ್ರಸಾದ್ ಹೈಪರ್ ಆಸಿಡಿಟಿ ಹಾಗೂ ಸೋರಿಯಾಸಿಸ್ ಕಾಯಿಲೆಯಿಂದ ಬಳಲುತ್ತಿದ್ದರು. ಈ ಎರಡು ಸಮಸ್ಯೆಗಳ ಜೊತೆಗೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರು. ಕೊನೆಯ ಸಿನಿಮಾ ರಂಗನಾಯಕ ಸೋತ ಮೇಲೆ ಅವರು ತುಂಬಾನೇ ನೊಂದಿದ್ದರು ಎಂದು ಉದಯ್ ಮಾಹಿತಿ ನೀಡಿದ್ದಾರೆ. ಎಲ್ಲಾ ಆಯಾಮದಿಂದಾನೂ ತನಿಖೆ ನಡೆಸಿರುವ ಪೊಲೀಸರು, ಇದೀಗ ಕೇಸ್ ಗೆ ಅಂತ್ಯ ಆಡುವುದಕ್ಕೆ ಸಿದ್ಧ ಮಾಡಿಕೊಂಡಿದ್ದಾರೆ. ಕನ್ನಡ ಸಿನಿಮಾ ಇಂಡಸ್ಟ್ರಿಗೆ ಬೆರಳೆಣಿಕೆಯಷ್ಟು ಸಿನಿಮಾಗಳನ್ನು ಕೊಟ್ಟರು, ಒಳ್ಳೊಳ್ಳೆ ಸಿನಿಮಾಗಳನ್ನೇ ನೀಡಿದ್ದ ಗುರುಪ್ರಸಾದ್ ಹೀಗೆ ಹೇಳದೆ ಕೇಳದೆ ಹೋಗಿ ಬಿಟ್ಟದ್ದು, ಇಂಡಸ್ಟ್ರಿಗೆ ದುಃಖದ ಸಂಗತಿಯಾಗಿದೆ.