ಸುದ್ದಿಒನ್, ಪರಶುರಾಮಪುರ, ಅಕ್ಟೋಬರ್. 18 : ಪ್ರಾಥಮಿಕ ಹಾಗೂ ಪ್ರೌಢಶಾಲಾ ಕನ್ನಡ ಭಾಷಾ ಪಠ್ಯಪುಸ್ತಕಗಳಲ್ಲಿ ನಾಡೋಜೆ ದಿವಂಗತ ಜಾನಪದ ಸಿರಿ ಸಿರಿಯಜ್ಜಿ ಜನಪದ ಗೀತೆಗಳನ್ನು ಸೇರಿಸಿ ಇಂದಿನ ಅಧುನಿಕ ಕಾಲಘಟ್ಟದ ವಿದ್ಯಾರ್ಥಿಗಳಿಗೆ ಜನಪದ ಸಾಹಿತ್ಯದ ವಿವಿಧ ಪ್ರಕಾರಗಳಾದ ಲಾವಣಿ, ಸೋಬಾನೆ, ದೇವರ ಪದಗಳು, ಸಾಂಸ್ಕೃತಿಕ ವೀರರ ಕಥನ ಗೀತೆಗಳ ಪರಿಚಯಿಸಬೇಕಿದೆ ಎಂದು ಪರಶುರಾಮಪುರ ಅಭಿರುಚಿ ಸಾಹಿತ್ಯಿಕೆ ಸಾಂಸ್ಕøತಿಕ ವೇದಿಕೆಯ ಸಂಚಾಲಕ ಒ. ಚಿತ್ತಯ್ಯ ಮನವಿ ಮಾಡಿದ್ದಾರೆ.
ಇಂದಿನ ಸಮೂಹ ಮಧ್ಯಮಗಳ ಸೆಳೆತ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳ ಪ್ರಭಾವದಿಂದ ನಮ್ಮ ಮಕ್ಕಳು ನಮ್ಮ ದೇಶಿ ಸಂಸ್ಕøತಿ ಸಂಪ್ರದಾಯ ಪರಂಪರೆಯ ಕುರಿತು ತಾತ್ಸಾರ ಮನೋಭಾವ ತಾಳುತ್ತಿರುವ ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಜನಪದ ಕಲಾವಿದರು ಮೌಖಿಕ ಪರಂಪರೆಯಿಂದ ಹಾಡುತ್ತಾ ಬಂದು ಇತ್ತೀಚೆಗೆ ತಾನೆ ಸಾಹಿತಿಗಳು ಜನಪದ ಕಲಾವಿದರು ಬರವಣಿಗೆಯ ರೂಪದಲ್ಲಿ ದಾಖಲಿಸಿರುವ ಜನಪದ ಹಾಡುಗಳನ್ನು ಆಯಾ ಶಾಲೆಗಳಲ್ಲೂ ಹಾಡಿಸುವ ಮತ್ತು ದಾಖಲಿಸುವ ಕೆಲಸ ಮಾಡಬೇಕು ಎಂದು ಪತ್ರಿಕೆಯ ಮೂಲಕ ಮನವಿ ಮಾಡಿದ್ದಾರೆ.
ಚಳ್ಳಕೆರೆ ತಾಲೂಕು ಯಲಗಟ್ಟೆಗೊಲ್ಲರಹಟ್ಟಿಯ ದಿವಂಗತ ನಾಡೋಜೆ ಜನಪದ ಸಿರಿ ಸಿರಿಯಜ್ಜಿ ಅವರ ಜನಪದ ಹಾಡುಗಳ ಕುರಿತು ರಾಷ್ಟ್ರಪ್ರಶಸ್ತಿ ಪುರಸ್ಕøತ ಬೆಳಗೆರೆ ಕೃಷ್ಣಶಾಸ್ತ್ರಿಗಳು ಸಾಹಿತಿ ಹನೂರು ಕೃಷ್ಣಮೂರ್ತಿ, ಅಂದಿನ ಮುಖ್ಯಮಂತ್ರಿ ಗುಂಡೂರಾಯರ ರಾಮಕೃಷ್ಣಹೆಗ್ಗಡೆಯವರ ಸಮ್ಮುಖದಲ್ಲಿ ಹಾಡಿಸಿದ್ದರು ಈಚೆಗೆ ಪ್ರಾಧ್ಯಾಪಕರಾದ ಮೀರಾಸಾಬಿಹಳ್ಳಿ ಶಿವಣ್ಣ, ಮೈಸೂರಿನ ಹನೂರು ಕೃಷ್ಣಮೂರ್ತಿ, ಕಲಮರಹಳ್ಳಿ ಮಲ್ಲಿಕಾರ್ಜುನ ಅವರೂ ಕೂಡ ಜಾನಪದ ಸಿರಿ ಸಿರಿಯಜ್ಜಿ ಹಾಡುವ ಜನಪದ ಗೀತೆಗಳನ್ನು ಸಾವಿರದ ಸಿರಿ ಬೆಳಗು, ಜುಂಜಪ್ಪನ ಪದಗಳು, ಕಾಡುಗೊಲ್ಲರ ಸಾಂಸ್ಕøತಿಕ ವೀರರ ಪದಗಳನ್ನು ದಾಖಲಿಸಿಕೊಂಡು ಪುಸ್ತಕಗಳ ರೂಪದಲ್ಲಿ ಹೊರತಂದಿದ್ದಾರೆ ಕೂಡಲೇ ಸರ್ಕಾರ ಆಯಾ ಪ್ರದೇಶದ ಜನಪದ ಕಲಾವಿದರು ಹಾಡುವ ಜನಪದ ಗೀತೆಗಳು ಜನಪದ ಕಲೆಗಳನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸಿಕೊಂಡು ಮಕ್ಕಳಿಗೆ ಮಾರ್ಗದರ್ಶನಮ ಮಾಡಿ ಶಾಲೆಗಳಲ್ಲೂ ಜನಪದ ಕಲಾವಿದರನ್ನು ಕರೆಸಿ ಶಾಲೆಯ ಮಕ್ಕಳಿಗೆ ಜನಪದ ಕಲೆ ಸಾಹಿತ್ಯ ತಿಳಿಸಿ ಉಳಿಸಿ ಬೆಳೆಸಬೇಕು ಎಂದು ಪರಶುರಾಮಪುರ ಗ್ರಾಮದ ಒ ಚಿತ್ತಯ್ಯ, ತಿಮ್ಮಯ್ಯ, ಪಿಲ್ಲಹಳ್ಳಿ ಸಿ ಚಿತ್ರಲಿಂಗಪ್ಪ, ಹೇಮದಳ ರಾಮಣ್ಣ, ಕೊರ್ಲಕುಂಟೆ ತಿಪ್ಪೇಸ್ವಾಮಿ, ದಯಾನಂದಮೂರ್ತಿ ವಿವಿಧ ಜನಪದ ಕಲಾ ತಂಡಗಳ ಕಲಾವಿದರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.