Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ನಾವೂ ಬೆಂಗಳೂರು ಬಿಟ್ಟರೆ ಖಾಲಿ.. ಖಾಲಿ.. ನಮ್ಮ ಬಗ್ಗೆ ಯೋಚನೆ ಮಾಡಿ ಮಾತಾಡಿ : ಕನ್ನಡಿಗರನ್ನು ಕೆರಳಿಸಿದ ಹೊರ ರಾಜ್ಯದ ಯುವತಿ..!

Facebook
Twitter
Telegram
WhatsApp

ಬೆಂಗಳೂರು: ಕರ್ನಾಟಕಕ್ಕೆ ಬಂದು ತಮ್ಮದೇ ಪಾರುಪತ್ಯ ಸಾಧಿಸುವ ಹೊರರಾಜ್ಯದವರು ಆಗಾಗ ನಾಲಿಗೆ ಹರಿ ಬಿಡುತ್ತಲೇ ಇರುತ್ತಾರೆ. ಮೊನ್ನೆಯಷ್ಟೇ ಆಟೋ ಡ್ರೈವರ್ ವಿಚಾರದಲ್ಲಿ ಒಂದು ಘಟನೆ ನಡೆದಿದೆ. ಓಲಾ ಬುಕ್ಕಿಂಗ್ ಮಾಡಿ, ಕ್ಯಾನ್ಸಲ್ ಮಾಡಿದ ಕಾರಣಕ್ಕೆ ಹುಡುಗಿ ಜೊತೆಗೆ ಆಟೋ ಡ್ರೈವರ್ ಜಗಳ ಮಾಡಿದ್ದ ಎಂಬ ವಿಚಾರ. ಇದಕ್ಕೆ ಸಂಬಂಧಿಸಿದಂತೆ ಶಿಸ್ತು ಕ್ರಮಕ್ಕೂ ಒತ್ತಾಯಿಸಿದರು. ಬೆಂಗಳೂರು ಪೊಲೀಸರು ಆಕ್ಷನ್ ತೆಗೆದುಕೊಂಡಿದ್ದಾರೆ. ಬಳಿಕ ಡ್ರೈವರ್ ಕೂಡ ನಾನು ಏನು ಮಾಡಿಲ್ಲ ಎಂಬ ಕ್ಲಾರಿಟಿಯನ್ನು ಕೊಟ್ಟಿದ್ದಾರೆ. ಆದರೆ ಈಗ ಇದೇ ವಿಚಾರವನ್ನು ಹೊರರಾಜ್ಯದ ಯುವತಿಯರು ನಾಲಿಗೆ ಹರಿಬಿಡುತ್ತಿದ್ದಾರೆ.

ಉತ್ತರ ಭಾರತದ ಯುವತಿಯೊಬ್ಬಳು ಈ ವಿಚಾರ ಸಂಬಂಧ ಈಗಾಗಲೇ ನಾಲಿಗೆ ಹರಿಬಿಟ್ಟು, ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಮತ್ತೊಬ್ಬ ಹೊರ ರಾಜ್ಯದ ಯುವತಿ ಬೆಂಗಳೂರಿನ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಆ ಯುವತಿಯ ವಿರುದ್ಧ ಕನ್ನಡಿಗರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಉತ್ತರ ಭಾರತೀಯ ಮೂಲದ ಯುವತಿ ಸುಗಂಧ ಶರ್ಮಾ ಎಂಬಾಕೆ ರಾಜ್ಯದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ.

https://www.instagram.com/reel/DAGSldPS4pj/?igsh=MWhrcTZkcW9nYXh3Ng==

ಉತ್ತರ ಭಾರತದವರಾದ ನಾವೂ ಬೆಂಗಳೂರನ್ನು ಬಿಟ್ಟು ಹೋದ್ರೆ ನಿಮ್ಮ ಸಿಟಿ ಫುಲ್ ಖಾಲಿ ಆಗುತ್ತದೆ. ಇದಕ್ಕೂ ಮೊದಲು ಬೆಂಗಳೂರಿನ ಪಿಜಿಗಳು ಫುಲ್ ಖಾಲಿ ಆಗುತ್ತವೆ. ಕೋರಮಂಗಲ ಕ್ಲಬ್ ಗಳು ಖಾಲಿಯಾಗುತ್ತವೆ ಕಣ್ರೋ. ಕ್ಲಬ್ ಗಳಲ್ಲಿ ಡ್ಯಾನ್ಸ್ ಮಾಡಲು ಹುಡುಗಿಯರೇ ಇರುವುದಿಲ್ಲ. ಯೋಚನೆ ಮಾಡಿ ನಮ್ಮ ಬಗ್ಗೆ ಮಾತನಾಡಿ ಎಂದು ಹೇಳಿರುವ ವಿಡಿಯೋಗೆ ಕನ್ನಡಿಗರು ಆಕ್ರೋಶಗೊಂಡಿದ್ದಾರೆ. ಈ ಯುವತಿಯ ವಿರುದ್ಧ ಕನ್ನಡದ ನಟ-ನಟಿಯರು ಕೆಂಡಕಾರಿದ್ದು, ಮೊದಲು ಆ ಯುವತಿಗೆ ರಾಜ್ಯದಿಂದ ಹೊರಗೆ ಹೋಗಲು ಹೇಳಿ ಎನ್ನುವ ಮಾತು ಶುರುವಾಗಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಟಿಎಸ್‍ಆರ್ ಹಾಗೂ ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿ ಪ್ರಕಟ

ಬೆಂಗಳೂರು, ಸೆಪ್ಟೆಂಬರ್ 21 : ಕನ್ನಡ ಪತ್ರಿಕೋದ್ಯಮದಲ್ಲಿ ಅನುಪಮ ಸೇವೆ ಸಲ್ಲಿಸಿದ ಪತ್ರಕರ್ತರಿಗೆ ನೀಡುವ ಟಿ.ಎಸ್.ರಾಮಚಂದ್ರರಾವ್ (ಟಿಎಸ್‍ಆರ್)ಪತ್ರಿಕೋದ್ಯಮ ಪ್ರಶಸ್ತಿ ಹಾಗೂ ಕನ್ನಡ ಪತ್ರಿಕೆ ಅಥವಾ ಪತ್ರಿಕಾ ಸಮೂಹವನ್ನು ಕಟ್ಟಿ ಬೆಳೆಸಿದ ಪತ್ರಕರ್ತರ ಸಾಧನೆ ಗುರುತಿಸಿ

ಪ್ರತಿಯೊಬ್ಬರು ಒಂದೊಂದು ಗಿಡ ನೆಟ್ಟು ಪರಿಸರವನ್ನು ಜೋಪಾನ ಮಾಡಿ : ದಿನೇಶ್ ಪೂಜಾರಿ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 20 : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ತುರುವನೂರು ವಲಯದ ಚಿಪ್ಪಿನಕೆರೆ ಕಾರ್ಯಕ್ಷೇತ್ರದಲ್ಲಿ

ಒಳ ಮೀಸಲಾತಿ | ಮಾದಿಗ ಸಮುದಾಯದ ರಾಜಕಾರಣಿಗಳು ರಾಜಿನಾಮೆ ನೀಡಲಿ : ಪ್ರೊ.ಸಿ.ಕೆ.ಮಹೇಶ್

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 20 : ಒಳ ಮೀಸಲಾತಿ ಜಾರಿಗೊಳಿಸುವ ಅಧಿಕಾರವನ್ನು ಆಯಾ ರಾಜ್ಯ ಸರ್ಕಾರಗಳಿಗಿದೆ ಎಂದು ಸುಪ್ರೀಂಕೋರ್ಟ್

error: Content is protected !!