Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮಾನವ ಕಲ್ಯಾಣ ಬಯಸಿದವರು ಸಂತಶ್ರೇಷ್ಟ ಕನಕದಾಸರು : ಡಾ.ಜೆ.ಕರಿಯಪ್ಪ ಮಾಳಿಗೆ

Facebook
Twitter
Telegram
WhatsApp

ಚಿತ್ರದುರ್ಗ, (ನವೆಂಬರ್. 22) : ಹೋರಾಟದ ಬದುಕಿನ ಮೂಲಕ ಸಾಮಾಜಿಕ ಬದಲಾವಣೆ, ಸುಧಾರಣೆಗಾಗಿ ಹಾಗೂ ತಮ್ಮ ಸ್ವಾರ್ಥವನ್ನೂ ಬದಿಗೊತ್ತಿ ಮಾನವ ಕಲ್ಯಾಣ ಬಯಸಿದವರು ಸಂತಶ್ರೇಷ್ಟ ಕನಕದಾಸರು ಎಂದು ಸರ್ಕಾರಿ ಕಲಾ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕನಕದಾಸ ಜಯಂತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಮಹಾತ್ಮರ, ದಾರ್ಶನಿಕರು ಮಾತುಗಳು ತುಂಬಾ ಅಗತ್ಯವಾಗಿದೆ. ದಾರ್ಶನಿಕರ ಮಾತುಗಳನ್ನು ಅರಿತು ನಡೆದರೆ ಮಾನವ ಸಮಾಜ ಆರೋಗ್ಯವಂತ ಸಮಾಜವಾಗಲಿದೆ ಎಂದರು.
ಪ್ರಸ್ತುತ ದಿನಗಳಲ್ಲಿ ನಮ್ಮ ಮುಂದೆ ಅನೇಕ ಸವಾಲು, ಸಂಘರ್ಷ ಹಾಗೂ ಸಮಸ್ಯೆಗಳಿವೆ. ಮನುಷ್ಯ ತನ್ನ ಬದುಕನ್ನು ತುಂಬಾ ಇಕ್ಕಟ್ಟಿನಲ್ಲಿ ಸಾಗಿಸುತ್ತಿದ್ದಾರೆ.

ಇಂತಹ ಸಂದರ್ಭದಲ್ಲಿ ಮಾನವ ಸಂಬಂಧಗಳು ಇಂದಿನ ದಿನಗಳಲ್ಲಿ ಶಿಥಿಲವಾಗುತ್ತಿವೆ. ಮಾನವೀಯ ಮೌಲ್ಯಗಳು ಕೇವಲ ಮಾತಿಗೆ ಸೀಮಿತವಾಗಿವೆ. ಇತಿಹಾಸ, ಪರಂಪರೆಯನ್ನು ಪಠ್ಯಕ್ಕೆ ಮಾತ್ರ ಸೀಮಿತಗೊಳಿಸಿ ಇವುಗಳನ್ನು ಬದುಕಿನಿಂದ ದೂರ ಇಟ್ಟಿರುವುದೇ ಇದಕ್ಕೆ ಪ್ರಮುಖ ಕಾರಣ.  ದಾರ್ಶನಿಕರ, ಚಿಂತಕರ, ಸಮಾಜ ಸುಧಾರಕರ ಮಾತುಗಳು ನಮ್ಮ ಬದುಕು, ಮನಸ್ಸಿನಲ್ಲಿ ಬಂದರೆ ಇಂತಹ ಸಂಘರ್ಷ, ಸಂಕಟಗಳು ದೂರವಾಗುತ್ತವೆ ಎಂದು ಹೇಳಿದರು.

ಸುಮಾರು 500 ವರ್ಷಗಳ ಹಿಂದಿನ ಕನಕದಾಸರನ್ನು ಭಕ್ತಶ್ರೇಷ್ಟ, ದಾಸಶ್ರೇಷ್ಟ ಎನ್ನವುದಕ್ಕಿಂತ ಸಂತಶ್ರೇಷ್ಟ ಎಂದು ಕರೆಯುವುದು ಸೂಕ್ತ. ಕನಕದಾಸರ ಆಲೋಚನೆಗಳು ದೇಶಾತೀತ, ಜಾತ್ಯತೀತವಾಗಿ ವಿಸ್ತಾರಗೊಳ್ಳುವವು. ವಿಶ್ವಮಾನ್ಯ ಅಲೋಚನೆಗಳು ಕನಕದಾಸರ ಸಾಂಸ್ಕೃತಿಕ ಕೊಡುಗೆಯಲ್ಲಿವೆ ಎಂದರು.

ಸಮಾಜದಲ್ಲಿ ಮೌಢ್ಯ, ಅಸಮಾನತೆ, ತಾರತಮ್ಯ, ಭೇದಭಾವಗಳು ಅರ್ಥವಾಗಬೇಕಾದರೆ ಮೊದಲು ದಾರ್ಶನಿಕ ಹಾಗೂ ಸಂತರ ಚಿಂತನೆಗಳು ಅಗತ್ಯವಾಗಿ ಬೇಕಾಗಿದೆ. ಮಧ್ಯಕಾಲಿನ ಸಂದರ್ಭದಲ್ಲಿ ಜೀವನದಲ್ಲಿ ಅನೇಕ ಸವಾಲುಗಳನ್ನು ಎದುರಿಸಿ, ಹೋರಾಟ ಮಾಡಿ ಕನಕದಾಸರು ಭಕ್ತರು, ದಾಸರು, ಸಾಧಕರು ಮಾತ್ರವಲ್ಲದೇ ದಾರ್ಶನಿಕರಾಗಿದ್ದಾರೆ ಎಂದರು.

ಸಮಾಜ ಸುಧಾರಣೆ, ಜಾತಿವ್ಯವಸ್ಥೆ ಹೋಗಲಾಡಿಸಲು, ಮಾನವ ಸಮಾಜ ನಿರ್ಮಾಣಕ್ಕಾಗಿ ಕನಕದಾಸರು ಅಧಿಕಾರ, ಆಸ್ತಿ, ಸಂಪತ್ತ, ಸಂಸಾರ ತೊರೆದು ಜನಸಾಮಾನ್ಯರ ಬಳಿ ಹೋದರು. ಹಳ್ಳಿ ಹಳ್ಳಿಗಳಿಗೂ ಬರಿಗಾಲದಲ್ಲಿ ತಿರುಗಿ ಅಲೆಮಾರಿ ಸಂತರಾಗಿದ್ದ ಕನಕದಾಸರು ಬುದ್ಧನ ಅನುಯಾಯಿಗಳಾಗಿದ್ದರು ಎಂದು ಹೇಳಿದರು.

ಕನಕದಾಸರ ಕೀರ್ತನೆಗಳು ಮನುಷ್ಯನ ಮನಸ್ಸಿನಲ್ಲಿರುವ ಕಲ್ಮಷವನ್ನು ಶುದ್ಧಗೊಳಿಸಿ ಮಾನವ ಜನ್ಮವನ್ನು ಸಾರ್ಥಕಗೊಳಿಸುತ್ತದೆ. ನಡೆ-ನುಡಿ ಶುದ್ಧವಾದರೆ ನಮ್ಮ ನಾಲಿಗೆ, ಮನಸ್ಸು ಶುದ್ಧವಾಗುತ್ತದೆ. ಮಾನವನನ್ನು ಶುದ್ಧಗೊಳಿಸುವ ಅಲೋಚನೆ ಇಟ್ಟುಕೊಂಡು ಸಾಧನೆಯಲ್ಲಿ ಯಶಸ್ವಿಯಾದವರು ಕನಕದಾಸರು. ಮನುಷ್ಯನ ಬಯಕೆಯ ದಾಹಗಳಿಗೆ ತಂಪೆರೆಯುವ ನೀರು ಇದ್ದಂತೆ  “ಕನಕದಾಸರ ಕೀರ್ತನೆಗಳು” ಎಂದರು.

ಜಯಂತಿ ಕಾರ್ಯಕ್ರಮದ ಅಂಗವಾಗಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರು ಚಿತ್ರದುರ್ಗ ನಗರದ ಹೊಳಲ್ಕೆರೆ ರಸ್ತೆಯ ಕನಕವೃತ್ತದಲ್ಲಿರುವ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಸಂತ ಶ್ರೇಷ್ಟ ಕನಕದಾಸರು ತಮ್ಮ ಕೀರ್ತನೆಗಳಲ್ಲಿ ಆತ್ಮಕಲ್ಯಾಣದ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಆತ್ಮವನ್ನು ಸ್ವಚ್ಛಗೊಳಿಸುವ ಮೂಲಕ ಜೀವನವನ್ನು ರೂಪಿಸಿಕೊಳ್ಳಬೇಕಿದೆ ಎಂದರು.

ಪ್ರಸ್ತುತ ದಿನಗಳಲ್ಲಿ ಉತ್ತಮವಾದ ಸಮಾಜ ರೂಪುಗೊಳ್ಳಬೇಕಾದರೆ ಪ್ರತಿಯೊಬ್ಬರು ಸಹ ತಮ್ಮ ಆತ್ಮವನ್ನು ಕಲ್ಯಾಣ ಮಾಡಿಕೊಳ್ಳುವ ಅಗತ್ಯವಿದೆ. ಕಲುಷಿತಗೊಂಡಿರುವ ನಮ್ಮ ಮನಸ್ಸನ್ನು ಸ್ವಚ್ಛಗೊಳಿಸೋಣ. ಕನಕದಾಸರ ತತ್ವಾದರ್ಶನಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪಾಲಿಸುವುದರ ಜೊತೆಗೆ ಅವರ ಮಾರ್ಗದರ್ಶನದಲ್ಲಿ ನಡೆಯೋಣ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಂದಗಾವಿ, ಡಿವೈಎಸ್‍ಪಿ ಪಾಂಡುರಂಗಪ್ಪ, ಸಮಾಜದ ಜಿಲ್ಲಾ ಅಧ್ಯಕ್ಷರಾದ ಶ್ರೀರಾಮ್, ಕಾರ್ಯದರ್ಶಿ ಕರಿಯಪ್ಪ, ಮುಖಂಡರಾದ ಬಿ.ಟಿ.ಜಗದೀಶ್, ತಿಪ್ಪೇಸ್ವಾಮಿ, ಮಂಜಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಧನಂಜಯ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕರ್ನಾಟಕ ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆ ಹಿನ್ನಲೆಯಲ್ಲಿ ಕನಕದಾಸ ಜಯಂತಿ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಕಾಮಾಲೆ (ಜಾಂಡೀಸ್) ರೋಗ ಎಂದರೇನು ? ಇಲ್ಲಿದೆ ಉಪಯುಕ್ತ ಮಾಹಿತಿ….!

ಕಾಮಾಲೆ ಅಥವಾ ಜಾಂಡೀಸ್ ಎನ್ನುವುದು ಹತ್ತು ಹಲವು ರೋಗಗಳಲ್ಲಿ ಕಂಡು ಬರುವ ದೇಹ ಸ್ಥಿತಿಯಾಗಿರುತ್ತದೆ. ಹಲವಾರು ಕಾರಣಗಳಿಂದ ಕಾಮಾಲೆ ರೋಗ ಬರುವ ಸಾಧ್ಯತೆ ಇರುತ್ತದೆ. ಕಾಮಾಲೆ ಎಂಬ ಪದವು ಕಾಮ ಮತ್ತು ಲಾ ಎಂಬ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ: ಈ ರಾಶಿಯ ಕುಟುಂಬದಲ್ಲಿ ಕಲಹಗಳು ಆಗಲು ದಾಯಾದಿಗಳೇ ಕಾರಣ : ಈ ರಾಶಿಯ ಗಂಡ ಹೆಂಡತಿ ದೂರವಾಗಲು ಹಿತೈಷಿಗಳೇ ಕಾರಣ : ಶನಿವಾರ-ರಾಶಿ ಭವಿಷ್ಯ

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

error: Content is protected !!