ಬೆಂಗಳೂರು: ಯಾವುದೋ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಾದಬ್ರಹ್ಮ ಹಂಸಲೇಖ ಅವರು ಪೇಜಾವರ ಶ್ರೀಗಳ ಬಗ್ಗೆ ಹೇಳಿಕೆಯೊಂದನ್ನ ನೀಡಿದ್ದರು. ಬಲಿತರು ದಲಿತರ ಮನೆಗೆ ಹೋಗಿ ಮಾಂಸದೂಟ ಮಾಡ್ತಾರಾ ಅಂತ ಪ್ರಶ್ನಿಸಿದ್ದರು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಪರ ವಿರೋಧ ಪೋಸ್ಟ್ ಗಳು ಶುರುವಾಗಿದ್ದವು. ಆ ಬಳಿಕ ಹಂಸಲೇಖ ವಿರುದ್ಧ ದೂರು ಕೂಡ ದಾಖಲಾಗಿತ್ತು. ಆದರೀಗ ಆ ದೂರುನ್ನ ದೂರುದಾರರೇ ವಾಪಾಸ್ ಪಡೆದಿದ್ದಾರೆ.
ಯಾವಾಗ ಈ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಯ್ತೊ, ಆಗ ಕೃಷ್ಣರಾಜ್ ಎಂಬುವವರು ಬಸವನಗುಡಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆ ಬಸವನಗುಡಿ ಪೊಲೀಸರು ಹಂಸಲೇಖ ಅವರಿಗೆ ನೋಟೀಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.
ಎರಡು ಬಾರಿ ನೋಟೀಸ್ ನೀಡಿದ್ರು ಸಹ ಹಂಸಲೇಖ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಅನಾರೋಗ್ಯದ ಕಾರಣ ನೀಡಿ ವಿಚಾರಣೆಯಿಂದ ದೂರವಿದ್ದರು. ಆದರೀಗ ದೂರುದಾರ ಕೃಷ್ಣರಾಜ್ ದೂರನ್ನ ವಾಪಾಸ್ ಪಡೆದಿದ್ದು, ಬ್ರಾಹ್ಮಣರ ಸಂಘದ ದೂರಿಗೆ ನಾನು ಬೆಂಬಲಿಸುವುದರಿಂದ ನನ್ನ ದೂರನ್ನ ವಾಪಾಸ್ ಪಡೆಯುತ್ತಿದ್ದೇನೆ ಎಂದಿದ್ದಾರೆ.