Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಡೆಂಗ್ಯೂ ಹೆಚ್ಚಾಗ್ತಾ ಇದೆ : ಅದರಿಂದ ತಪ್ಪಿಸಿಕೊಳ್ಳಲು ಈ ಆಹಾರ ಸೇವಿಸಿ

Facebook
Twitter
Telegram
WhatsApp

ಮಳೆಗಾಲ ಶುರುವಾಯ್ತು ಮದರೆ ಸೊಳ್ಳೆಗಳಿಂದ ಶುರುವಾಗುವ ಕಾಯಿಲೆಗಳು ಹೆಚ್ಚಾಗುತ್ತವೆ. ಅದರಲ್ಲೂ ಇತ್ತಿಚೆಗೆ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದಾವೆ. ಸೊಳ್ಳೆಗಳ ನಾಶಕ್ಕೆ ಆಯಾ ಪಂಚಾಯ್ತಿ ವ್ಯಾಪ್ತಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಜೊತೆಗೆ ಜನ ಕೂಡ ಬಹಳ ಎಚ್ಚರದಿಂದ ಇರಬೇಕಾಗುತ್ತದೆ. ಇನ್ನು ಡೆಂಗ್ಯೂ ಬಾರದಂತೆ ತಡೆಯಲು ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಹಡಚ್ಚಾಗಿರಬೇಕಾಗುತ್ತದೆ. ಅದನ್ನು ಆಹಾರ ಮೂಲಕವೂ ರೂಢಿಸಿಕೊಳ್ಳಬಹುದು.

* ಡೆಂಗ್ಯೂ ಜ್ವರ ಇದ್ದವರು, ಬಾರದಂತೆ ಎಚ್ಚರ ಬಹಿಸುವವರು ಶಕಂಜಿ ನೀರನ್ನು ಕುಡಿಯಿರಿ. ಒಂದು ನಿಂಬೆ ಹಣ್ಣಿನ ರಸ ತೆಗೆದು, ಅದಕ್ಕೆ ನೀರಿ, ಸಕ್ಕರೆ, ಉಪ್ಪು, ಹುರಿದ ಜೀರಿಗೆ ಪುಡಿ ಬಳಸಿ ಕುಡಿಯಿರಿ.

* ಮೊಸರು, ಬೇಳೆಕಾಳು, ಕ್ವಿನೋವಾ, ಅಮರನಾಥ, ಸತ್ತು, ಕಡಿಮೆ ಕೊಬ್ಬು ಇರುವ ಪನೀರ್ ಮತ್ತು ತೌಫು ಸೇವಿಸಿ.

* ಫಾಲಿಕ್ ಆಮ್ಲ ಮತ್ತು ವಿಟಮಿನ್ ಕೆ ಇರುವ ಆಹಾರ ಸೇರಿಸಿ. ಕಿವಿ, ದಾಳಿಂಬೆ, ಬ್ರಾಕೋಲಿ ಮತ್ತು ಪಾಲಕವು ಇದಕ್ಕೆ ಒಳ್ಳೆಯ ಆಯ್ಕೆಯಾಗಿದೆ. ಈ ಆಹಾರಗಳು ಸಂಪೂರ್ಣ ಚೇತರಿಕೆಗೆ ತುಂಬಾ ನೆರವಾಗಲಿದೆ.

* ಪಪ್ಪಾಯಿ ಎಲೆಯ ರಸವು ಉತ್ತಮ ಪರಿಹಾರವಾಗಿದೆ. ಪಪ್ಪಾಯಿ ಎಲೆಯ ರಸವು ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ ಮತ್ತು ಇದು ಡೆಂಗ್ಯೂಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಉತ್ತಮ ಫಲಿತಾಂಶಕ್ಕಾಗಿ ನೀವು ದಿನಕ್ಕೆ ಎರಡು ಬಾರಿ ಪಪ್ಪಾಯಿ ಎಲೆಯ ರಸವನ್ನು ಸಣ್ಣ ಪ್ರಮಾಣದಲ್ಲಿ ಸೇವಿಸಬಹುದು.

* ಮೊದಲು ಡೆಂಗ್ಯೂ ಬಾರದಂತೆ ತಡೆಯಲು ಮನೆಯ ಬಳಿಯೆಲ್ಲಾ ಸ್ವಚ್ಛತೆಯನ್ನು ಕಾಪಾಡಿ. ನೀರು ನಿಲ್ಲದಂತೆ ನೋಡಿಕೊಳ್ಳಿ. ಸೊಳ್ಳೆಗಳ ತಾಣವಾಗಿದ್ದರೆ ಅದನ್ನು ಕ್ಲೀನ್ ಮಾಡಿ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹಲವು ನಟಿಯರ ವಿರುದ್ಧ ರೇಣುಕಾಸ್ವಾಮಿ ತಂದೆ ಆಕ್ರೋಶ : ಯಾಕೆ ಗೊತ್ತಾ..?

ಸುದ್ದಿಒನ್, ಚಿತ್ರದುರ್ಗ, ಜುಲೈ. 03 : ಪವಿತ್ರಾಗೌಡಗೆ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಗಳನ್ನು ಕಳುಹಿಸುತ್ತಿದ್ದ ಎಂದು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತಂದು ಎಚ್ಚರಿಕೆ ಕೊಡಲು ಹೋಗಿ ಆ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಕೊಲೆ ಆರೋಪದಲ್ಲಿ ದರ್ಶನ್

ಕರ್ನಾಟಕದಲ್ಲಿ 25 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶಿಸಿದ ಸರ್ಕಾರ..!

ಬೆಂಗಳೂರು: ರಾಜ್ಯ ಆಡಳಿತ ಸುಧಾರಣೆಗಾಗಿ, ಕಾನೂನು ಸುವ್ಯವಸ್ಥೆಯನ್ನು ಮತ್ತಷ್ಟು ಬಲಗೊಳಿಸುವ ಉದ್ದೇಶದಿಂದ ಪೊಲೀಸ್ ಇಲಾಖೆಯಲ್ಲಿ ರಾಜ್ಯ ಸರ್ಕಾರ ವರ್ಗಾವಣೆಯ ಸರ್ಜರಿ ಮಾಡಿದೆ. ರಾಜ್ಯದಲ್ಲಿ 25 ಐಪಿಎಸ್ ಆಫೀಸರ್ ಗಳ ವರ್ಗಾವಣೆಯನ್ನು ಮಾಡಲಾಗಿದೆ. ಪೊಲೀಸ್ ಇಲಾಖೆಯಲ್ಲಿ

error: Content is protected !!