ಚಿತ್ರದುರ್ಗ, (ಸೆಪ್ಟೆಂಬರ್.06) : ತಾಲ್ಲೂಕಿನ ಕ್ಯಾದಿಗೆರೆ ಗ್ರಾಮದ ಮಟ್ಟಿ ಬಸವೇಶ್ವರ ದೇವಾಲಯದಲ್ಲಿ ಸೋಮವಾರ ಬಸವೇಶ್ವರ ಟ್ರಸ್ಟ್ ವತಿಯಿಂದ 40 ಮಂದಿ ಕೋವಿಡ್ ವಾರಿಯರ್ಸ್‍ಗೆ ಸನ್ಮಾನ ಮಾಡಲಾಯಿತು.
ಈ ವೇಳೆ ಮಾತನಾಡಿದ ಚಿತ್ರದುರ್ಗ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಬಿ. ವಿ. ಗಿರೀಶ್, ಕ್ಯಾದಿಗರೆ ಗ್ರಾಮದಲ್ಲಿ ಶೇ.100 ರಷ್ಟು ಕೋವಿಡ್ ಲಸಿಕಾ ಪ್ರಗತಿ ಸಾಧಿಸಲಾಗಿದೆ. ದೊಡ್ಡಸಿದ್ದವ್ವನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ತಮ್ಮ ಕರ್ತವ್ಯ ಪ್ರಜ್ಞೆಯನ್ನು ಹೊಂದಿದ್ದು ಉತ್ತಮ ಕೆಲಸ ನಿರ್ವಹಿಸಿದ್ದಾರೆ. ಆರೋಗ್ಯ ಇಲಾಖೆ ಸಿಬ್ಬಂದಿಗಳ ಸೇವೆಗುರುತಿಸಿ ಸನ್ಮಾನ ಗೌರವಗಳನ್ನು ನೀಡುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಒಟ್ಟು 40 ಮಂದಿ ಕೋವಿಡ್ ವಾರಿಯರ್ಸ್‍ಗೆ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್. ಮಂಜುನಾಥ್, ಡಾ. ಶಮೈಲಾ, ಗಂಗಾಧರ್, ಬಿ. ಶ್ರೀಧರ್, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಮಾರುತಿ, ರೇಣುಕಮ್ಮ, ಮಂಜಳಾ, ಗಾಯತ್ರಿ, ಶಾಹಿನಾ, ಸುಮಾ, ಬಸವೇಶ್ವರ ಟ್ರಸ್ಟ್‍ನ ವಿರೇಶ್, ಟಿ. ಸಿ. ಮಂಜುನಾಥ್ ಮತ್ತು ಪ್ರಕಾಶ್, ಮುಖಂಡರಾದ ಹನುಮಲಿ ಷಣ್ಮುಖಪ್ಪ ಉಪಸ್ಥಿತರಿದ್ದರು.