ಸುದ್ದಿಒನ್, ಚಳ್ಳಕೆರೆ, (ನ.15): ಬಸವಣ್ಣನವರ ಕಾಯಕ ಮತ್ತು ದಾಸೋಹದ ತತ್ವಗಳನ್ನು ಈಗಿನ ಯುವ ಪೀಳಿಗೆಯು ರೂಡಿಸಿಕೊಳ್ಳಬೇಕು ಎಂದು ವಿಜಯಪುರ ವನಶ್ರೀ ಸಂಸ್ಥಾನ ಮಠದ ಬಸವಕುಮಾರ್ ಸ್ವಾಮಿಗಳು ಹೇಳಿದರು.
ನಗರದ ವೀರಶೈವ ಕಲ್ಯಾಣ ಮಂಟಪ ಹಿಂಬದಿಯಲ್ಲಿ ನಿರ್ಮಾಣವಾಗಿರುವ ಶ್ರೀಬಸವೇಶ್ವರ ಕಲ್ಯಾಣ ಮಂಟಪವನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಜಗತ್ತಿನಲ್ಲಿ ಹುಟ್ಟಿರುವ ಪ್ರತಿಯೊಬ್ಬ ಮನುಷ್ಯನಿಗೂ ಒಂದು ಚರಿತ್ರೆಯಿದೆ. ಆ ಉತ್ತಮ ಚರಿತ್ರೆ ಚಳ್ಳಕೆರೆ ವೀರ ಶೈವ ಸಮಾಜಕ್ಕೆ ಇದೆ ಎಂದು ಹೇಳಿದರು.
ಎಲ್ಲಾ ಸಮಾಜದವರಿಗೂ ಸಾರ್ವಜನಿಕರಿಗೆ ಸೇವೆ ನೀಡುವಂತ ವೀರಶೈವ ಕಲ್ಯಾಣ ಮಂಟಪವನ್ನು ಸಮಾಜದವರು ನಿರ್ಮಾಣ ಮಾಡಿ ಈಗ ಬಸವೇಶ್ಚರ ಕಲ್ಯಾಣ ಮಂಟಪವನ್ನು ನಿರ್ಮಾಣ ಮಾಡಿದ್ದಾರೆ ಎಂದು ಹೇಳಿದರು.
ವೀರ ಶೈವ ಸಮಾಜದ ಪೂರ್ವಜರು ದೂರದೃಷ್ಟಿಯನ್ನು ಇಟ್ಟುಕೊಂಡು ಚಳ್ಳಕೆರೆಯಲ್ಲಿ ವೀರಶೈವ ಕಲ್ಯಾಣ ಮಂಟಪವನ್ನು ಸ್ಥಾಪನೆ ಮಾಡಿದರು. ಅಂತಹ ಮಹಾನೀಯರನ್ನು ನೆನಯಬೇಕು ಎಂದರು.
ಶಾಸಕ ಟಿ.ರಘುಮೂರ್ತಿ ಮಾತನಾಡಿ 12 ನೇ ಶತಮಾನದಲ್ಲಿ ಮನುಕುಲಕ್ಕೆ ಸೇವೆ ಸಲ್ಲಿಸಿದ ಬಸವಣ್ಣನವರ ಹೆಸರು ಸೂರ್ಯ-ಚಂದ್ರ ಇರೋವರಿಗೆ ಅಜರಾಮರವಾಗಿರುತ್ತದೆ ಎಂದು ಹೇಳಿದ ಅವರು ಇಂದು ಶ್ರೀಬಸವೇಶ್ವರ ಕಲ್ಯಾಣ ಮಂಟಪ ಲೋಕಾರ್ಪಣೆಯಾಗಿರುವುದು ಎಲ್ಲ ಸಮುದಾಯದವರಿಗೂ ಸಹಕಾರಿಯಾಗಲಿದೆ ಎಂದು ಹೇಳಿದರು.
ಈ ವೇಳೆ ನಗರಸಭೆ ಅಧ್ಯಕ್ಷೆ ಜಯಲಕ್ಷ್ಮೀ, ಉಪಾಧ್ಯಕ್ಷೆ ಜೈತುನ್ಬಿ, ಅಧ್ಯಕ್ಷ ರಮೇಶ್, ಸದಸ್ಯ ಕೆ.ಸಿ.ನಾಗರಾಜ, ಕೆ.ಎಂ. ಜಗದೀಶ್, ಗಂಗಣ್ಣ, ಪ್ರಮೋದ್, ಸೈಟ್ ಬಾಬಣ್ಣ, ರವಿಕುಮಾರ್, ಮಾತೃಶ್ರೀ ಮಂಜುನಾಥ ಸೇರಿದಂತೆ ಸಮುದಾಯದವರು ಇದ್ದರು.