ಬೆಂಗಳೂರು: ಈಗಾಗ್ಲೇ ಪೆಟ್ರೋಲ್-ಡಿಸೇಲ್ ಬೆಲೆ ಗಗನಕ್ಕೇರ್ತಾ ಇದೆ. ಸಾಮಾನ್ಯ ಜನ ದುಡಿದೆದ್ದೆಲ್ಲಾ ಗಾಡಿ ಓಡಿಸೋದಕ್ಕೆ ಹಾಕಬೇಕಲ್ಲ ಅಂತಿದ್ದಾರೆ. ಗೋಳಾಡ್ತಾ ಇದ್ದಾರೆ. ಈ ಬಗ್ಗೆ ಮಾತನಾಡಿರುವ ಸಚಿವ ಮುರುಗೇಶ್ ನಿರಾಣಿ ಕೆಂದ್ರ ಸರ್ಕಾರ, ಪ್ರಧಾನಿ ಮೋದಿಯನ್ನ ಸಮರ್ಥಿಸಿಕೊಂಡಿದ್ದಾರೆ.
ಮೋದಿ ಇರೋದಕ್ಕೆ ಪೆಟ್ರೋಲ್ ಋರಟ್ ಇಷ್ಟಾಗಿದೆ. ಬೇರೆ ಯಾರಾದ್ರೂ ಇದ್ದಿದ್ರೆ ಇಷ್ಟೊತ್ತಿಗೆ 200 ರೂಪಾಯಿ ಆಗ್ತಾ ಇತ್ತು. ಇದಕ್ಕೆಲ್ಲಾ ಬೇಸರ ಮಾಡಿಕೊಂಡಿದ್ದಿದ್ದರೆ ನಮಗೆ ವೋಟ್ ಹಾಕ್ತಾ ಇರ್ಲಿಲ್ಲ ಎಂದಿದ್ದಾರೆ.
ಇನ್ನು ಸಿಎಂ ಬೊಮ್ಮಾಯಿ ಅವರ ಬಗ್ಗೆ ಮಾತನಾಡಿದ್ದು, ಬೊಮ್ಮಾಯಿ ಅವರು ಕೂಡ ಉತ್ತಮ ನಾಯಕರು. ಯಡಿಯೂರಪ್ಪ ಮಾರ್ಗದರ್ಶನ ಹಾಗೂ ಬಸವರಾಜ್ ಬೊಮ್ಮಾಯಿ ಅವರ ನಾಯಕತ್ವ ಬೇಕಾಗಿದೆ. ಮುಂದಿನ ಚುನಾವಣೆ ಬೊಮ್ಮಾಯಿ ಅವರ ನೇತೃತ್ವದಲ್ಲೇ ನಡೆಯಲಿದೆ ಅಂತ ಅಮಿತ್ ಶಾ ಹೇಳಿದ್ದಾರೆ. ವರಿಷ್ಠರು ಏನ್ ಹೇಳ್ತಾರೊ ಅದನ್ನ ನಾವೂ ಒಪ್ಪುಕೊಳ್ಳಲೇ ಬೇಕು. ಆದ್ರೆ ಪಾಲಿಕೆಯ ಚುನಾವಣೆಯಲ್ಲಿ ಯಡಿಯೂರಪ್ಪ ಆಗ್ಲಿ, ಸಿಎಂ ಬಸವರಾಜ್ ಬೊಮ್ಮಾಯಿ ಅವರಾಗಲಿ ಪ್ರಚಾರ ಮಾಡಿಲ್ಲ ಎಂದಿದ್ದಾರೆ.
ಇನ್ನು ಪಾಲಿಕೆ ಚುನಾವಣೆ ಬಗ್ಗೆಯೂ ಮಾತನಾಡಿರುವ ನಿರಾಣಿ, ಜನ ಸರ್ಕಾರದ ಸಾಧನೆ ಮೆಚ್ಚಿ ಬಿಜೆಪಿಗೆ ಮತ ನೀಡಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಸ್ಥಾನ ನಮ್ಮದಾಗಿದೆ. ಬೆಳಗಾವಿ ಮತ್ತು ಹುಬ್ಬಳ್ಳಿಯಲ್ಲಿ ಫಲಿತಾಂಶ ಕ್ಲಿಯರ್ ಆಗಿದೆ ಎಂದಿದ್ದಾರೆ.