ಬೆಂಗಳೂರು: ಕಳೆದ 18 ತಿಂಗಳಿನಿಂದ ಶಾಲೆಯ ಮುಖವನ್ನೇ ಕಾಣದ ಮಕ್ಕಳು ಇಂದು ಶಾಲೆ ಆರಂಭ ಆಗಿದ್ದೆ ತಡ ಖುಷ್ ಖುಷಿಯಾಗಿ ಶಾಲೆಗೆ ತೆರಳಿದ್ದಾರೆ. ಈಗಾಗ್ಲೇ 8-12 ನೇ ತರಗತಿ ಶುರುವಾಗಿವೆ. ಇಂದಿನಿಂದ 6-8ನೇ ತರಗತಿಗಳು ಆರಂಭವಾಗ್ತಿವೆ.
ಈ ಹಿನ್ನೆಲೆ ಇಂದು ಶಾಲೆಗಳ ಸುರಕ್ಷತೆ ಬಗ್ಗೆ ಪರಿಶೀಲನೆ ನಡೆಸಲು ಶಿಜ್ಷಣ ಸಚಿವ ನಾಗೇಶ್ ಶಾಲೆಗಳಿಗೆ ಭೇಟಿ ಕೊಟ್ಟಿದ್ದಾರೆ. ಇದರ ನಡುವೆ ಭೇಟಿಗೂ ಮುನ್ನ ಮಕ್ಕಳು ಖುಷಿ ಖುಷಿಯಗಿ ಶಾಲೆಗೆ ಹೊಇಗ್ತಾ ಇದ್ದ ದೃಶ್ಯ ಸಚಿವ ನಾಗೇಶ್ ಅವರಿಗೆ ಕಂಡಿದ್ದು, ಅದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ.
ವಿವೇಕಾನಂದ ಮೆಟ್ರೋ ಸ್ಟೇಷನ್ ಬಳಿ ಹೋಗುತ್ತಿದ್ದಾಗ ಕಾರು ನಿಲ್ಲಿಸಿ, ಅಲ್ಲಿ ಹೋಗ್ತಾ ಇದ್ದ ಮಕ್ಕಳನ್ನ ಮಾತನಾಡಿಸಿದ್ದಾರೆ. ಒಂದಷ್ಟು ಕುಶಲೋಪರಿಯನ್ನು ವಿಚಾರಿಸಿದ್ದಾರೆ. ಆ ಬಳಿಕ ಮಕ್ಕಳಿಗೆ ಮಾಸ್ಕ್ ಹಾಕೋದಕ್ಕೆ ತಿಳಿಸಿದ್ದಾರೆ. ಮಾಸ್ಕ್ ಹಾಕದೆ ಇದ್ರೆ ಶಾಲೆ ಬಂದ್ ಮಾಡಬೇಕಾಗುತ್ತೆ ಎಂದು ನಗುನಗುತ್ತಾನೆ ಎಚ್ಚರಿಸಿದ್ದಾರೆ.