ಬೆಂಗಳೂರು: RCB ಅಭಿಮಾನಿಗಳಿಗೆ ಇತ್ತಿಚೆಗೆ ಕೊಂಚ ನೆಮ್ಮದಿ ಸಿಕ್ಕಿತ್ತು. ಆರಂಭದಲ್ಲಿ ಹೇಗೆ ಎಲ್ಲಾ ಮ್ಯಾಚ್ ಗಳನ್ನು ಸೋತಿತ್ತೋ, ಈಗ ಎಲ್ಲಾ ಮ್ಯಾಚ್ ಗಳನ್ನು ಗೆಲ್ಲುತ್ತಾ ಬರುತ್ತಿದೆ ಆರ್ಸಿಬಿ. ಹೀಗಾಗಿ ಸಂತಸದಿ ತೇಲಾಡಿದ ಅಭಿಮಾನಿಗಳು, ಪ್ಲೇ ಆಫ್ ಕನಸ್ಸನ್ನು ಕಂಡಿದ್ದರು. ಆದರೆ ಅದ್ಯಾಕೋ ಆ ಕನಸಿಗೆ ಮಳೆರಾಯ ಅಡ್ಡಿಯಾಗ್ತಾನೆ ಎನಿಸುತ್ತಿದೆ.
ಒಂದು ಮೂರು ಮ್ಯಾಚ್ ಗಳನ್ನು ಗೆದ್ದು ಅಂಕಗಳನ್ನು ಹೆಚ್ಚಿಸಿಕೊಳ್ಳಬೇಕಾದ ಸವಾಲು ಆರ್ಸಿಬಿ ಮೇಲಿದೆ. ಇಂದು ನಡೆಯುತ್ತಿರುವ ಮ್ಯಾಚ್ ಅನ್ನು ಕೂಡ ಗೆಲ್ಲಬೇಕಿದೆ. ಆದರೆ ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿದ್ದು, ಅದು ಸಾಧ್ಯವಾ ಎಂಬ ಅನುಮಾನ ಕಾಡುತ್ತಿದೆ. ಈಗಾಗಲೇ ವೈಟ್ ಫೀಲ್ಡ್ ಭಾಗದಲ್ಲಿ ಮಳೆಯೂ ಶುರುವಾಗಿದೆ. ಹಲವೆಡೆ ಮಳೆಯ ಸಿಂಚನ ಕಾಣಿಸುತ್ತಿದೆ. ನಿನ್ನೆಯೇ ಬೆಂಗಳೂರಿನಲ್ಲಿ ಜೋರು ಮಳೆಯಾಗಲಿದೆ ಎಂಬ ವರದಿ ಬಿಡುಗಡೆಯಾಗಿತ್ತು. ಆದರೆ ನಿನ್ನೆ ಮಳೆ ಬಂದಿಲ್ಲ. ಇಂದು ಮಳೆ ಬರುವ ಎಲ್ಲಾ ಸೂಚನೆಯೂ ಕಾಣಿಸುತ್ತಿದೆ. ಒಂದು ವೇಳೆ ಪಂದ್ಯದ ವೇಳೆ ಮಳೆ ಬಂದರೆ ಪಂದ್ಯ ರದ್ದಾಗುವ ಸಾಧ್ಯತೆ ಇದೆ.
ಆರ್ಸಿಬಿ ಅಭಿಮಾನಿಗಳಿಗೆ ಇಂದಿನ ವಾತಾವರಣ ನೋಡಿನೆ ಬೇಸರವಾಗಿದೆ. ಇಷ್ಟು ದಿನ ರಣರಣ ಬಿಸಿಲಿತ್ತು. ಆದರೆ ಆರ್ಸಿಬಿ ಮ್ಯಾಚ್ ದಿನವೇ ಮಳೆ ಬರಬೇಕಾ..? ವರುಣಾ ದೇವ ಸ್ವಲ್ಪ ಕರುಣೆ ತೋರಿಸಪ್ಪ ಅಂತಿದ್ದಾರೆ. ಆದರೆ ಹವಮಾನ ಇಲಾಖೆ ಈ ಮೊದಲೇ ಮುನ್ಸೂಚನೆ ನೀಡಿದೆ. ಇನ್ನು ಮೂರ್ನಾಲ್ಕು ದಿನಗಳ ಕಾಲ ರಾಜ್ಯದಲ್ಲಿ ಜೋರು ಮಳೆಯಾಗಲಿದೆ ಎಂಬ ಸೂಚನೆಯನ್ನು ನೀಡಿದೆ. ಅದಕ್ಕೆ ತಕ್ಕ ಹಾಗೇ ಮಧ್ಯಾಹ್ನದಿಂದಲೇ ಮೋಡ ಕವಿದ ವಾತಾವರಣವಿದೆ.