ಚಿಕ್ಕೋಡಿ: ಜಿಲ್ಲೆಯಲ್ಲಿ ಕಳೆದ ರಾತ್ರಿ ಸುರಿದ ಮಳೆ ಸಾಕಷ್ಟು ಅವಾಂತರಗಳನ್ನ ಸೃಷ್ಟಿಸಿದೆ. ಕಬ್ಬು ತುಂಬಿದ ಲಾರಿಯೊಂದು ರಸ್ತೆಯಲ್ಲಿ ಮಗುಚಿ ಬಿದ್ದಿದೆ. ಆದ್ರೆ ಅದೃಷ್ಟವಶಾತ್ ಯಾರಿಗೂ ಯಾವುದೇ ಅಪಾಯ ಸಂಭವಿಸಿಲ್ಲ.
ಈ ಘಟನೆ ನಡೆದಿರೋದು ಜಿಲ್ಲೆಯ ಕೊಕಟನೂರು ಗ್ರಾಮದ ಬಳಿ. ಮಳೆಯಿಂದಾಗಿ ರಸ್ತೆಯೆಲ್ಲಾ ಕೆಸರಿನಂತಾಗಿದ್ದು, ರಸ್ತೆಯಲ್ಲಿ ಹೋಗುವಾಗ ಕಬ್ಬು ತುಂಬಿದ ಲಾರಿ ಮುಗುಚಿ ನೆಲಕ್ಕೆ ಬಿದ್ದಿದೆ. ಈ ದೃಶ್ಯವನ್ನ ಅಲ್ಲೆ ಇದ್ದವರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.
ಇನ್ನು ಜಿಲ್ಲೆಯಲ್ಲಿ ಮಳೆ ಸುರಿಯುತ್ತಿರುವುದು ಕಬ್ಬು ಬೆಳೆಗಾರರಲ್ಲೂ ಆತಂಕ ಮೂಡಿಸಿದೆ. ಯಾಕಂದ್ರೆ ಈಗಾಗಲೇ ಕಟಾವಿಗೆ ಬಂದ ಬೆಳೆ ಇನ್ನೆಲ್ಲಿ ಮಳೆಗೆ ಹಾನಿಯಾಗುತ್ತೋ ಅನ್ನೋ ಭಯ. ಹೀಗಾಗಿ ಕಟಾವು ಮಾಡೋದಕ್ಕೆ ಶುರು ಮಾಡಿದ್ದಾರೆ.
ಕಟಾವು ಮಾಡಿದ ಕಬ್ಬನ್ಮ ಸಾಗಿಸೋಕು ಮಳೆರಾಯ ಅಡ್ಡಿಯಾಗಿದ್ದಾನೆ. ಹೀಗೆ ಹಾಳಾದ ರಸ್ತೆಯಲ್ಲಿ ಕಬ್ಬು ತುಂಬಿದ ಗಾಡಿಗಳು ಹೋಗುವುದು ಬಹಳ ಕಷ್ಟಕರವಾಗಿದೆ. ಇದು ರೈತರ ಆತಂಕಕ್ಕೆ ಕಾರಣವಾಗಿದೆ.