ಬೆಂಗಳೂರು: ಎಲ್ಲೆಡೆ ದೀಪಾವಳಿ ಸಂಭ್ರಮ ಮನೆ ಮಾಡಿದೆ. ಹಬ್ಬದ ಸಂಭ್ರಮವನ್ನ ದುಪ್ಪಟ್ಟು ಮಾಡಲು ಜನ ಮಾರುಕಟ್ಟೆ ಕಡೆಗೆ ಹೋಗಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಜನಜಂಗುಳಿ ಮನೆ ಮಾಡಿದೆ. ಆದ್ರೆ ಹಬ್ಬದ ಹಿನ್ನೆಲೆ ತರಕಾರಿ, ಹೂ, ಹಣ್ಣಿನ ಬೆಲೆ ಗಗನಕ್ಕೇರಿದೆ.
ದೀಪಾವಳಿ ಹಬ್ಬಕ್ಕೂ ಕೆಲವರು ವಾಹನ ಪೂಜೆ ಮಾಡ್ತಾರೆ. ಜೊತೆಗೆ ಹಬ್ಬ ಅಂದ್ರೆ ಹಣ್ಣುಗಳು ಅತ್ಯವಶ್ಯಕ. ಆದ್ರೆ ಹಣ್ಣುಗಳ ದರ ಹೇಗಿದೆ ಗೊತ್ತಾ..? ಸೇಬುಹಣ್ಣು-80-120 ರೂಪಾಯಿ, ಬಾಳೆಹಣ್ಣು-50-80 ರೂಪಾಯಿ, ಕಿತ್ತಳೆ-60-80 ರೂಪಾಯಿ, ಮೂಸಂಬಿ-70-100 ರೂಪಾಯಿ, ದ್ರಾಕ್ಷಿ-90-120 ರೂಪಾಯಿ, ದಾಳಿಂಬೆ-80-100 ರೂಪಾಯಿ ಇದೆ.
ಇನ್ನು ಹೂವಿನ ದರವೂ ಹೆಚ್ಚಾಗಿಯೇ ಇದೆ. ಕನಕಾಂಬರ 600-1500 ರೂಪಾಯಿ, ದುಂಡುಮಲ್ಲಿಗೆ 400-800 ರೂಪಾಯಿ, ಕಾಕಡ 200-500 ರೂಪಾಯಿ, ಜಾಜಿ ಮಲ್ಲಿಗೆ 150-200 ರೂಪಾಯಿ, ಸೇವಂತಿಗೆ 60-250 ರೂಪಾಯಿ ಇದೆ. ಬೂದುಕುಂಬಳಕಾಯಿ , ಬಾಳೆ ಕಂಬ , ನಿಂಬೆ ಹಣ್ಣಿನ ದರವೂ ಸಿಕ್ಕಾಪಟ್ಟೆ ಜಾಸ್ತಿಯಾಗಿದ.