ಸುದ್ದಿಒನ್, ಚಳ್ಳಕೆರೆ : ಚಳ್ಳಕೆರೆ ಸರ್ಕಾರಿ ನೌಕರರ ಮೇಲೆ ಹೆಚ್ಚಿನದಾಗಿ ಲೋಕಾಯುಕ್ತ ದೂರುಗಳಿವೆ ಎಂದು ಚಿತ್ರದುರ್ಗ ಲೋಕಾಯುಕ್ತ ವಿಭಾಗದ ಡಿವೈಎಸ್ ಪಿ ಮಂಜುನಾಥ ಹೇಳಿದರು.
ನಗರದ ತಾಲ್ಲೂಕು ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಸಪ್ತಾಹ ಕಾರ್ಯಾಗಾರ – 2021 ರಲ್ಲಿ ಮಾತನಾಡಿದರು.
ಸರ್ಕಾರಿ ನೌಕರರಿಗೆ ವೇತನ ಬರುತ್ತದೆ. ಲಂಚಕ್ಕೆ ಆಸೆ ಪಡಬೇಡಿ ನಿಷ್ಠೆಯಿಂದ ಕಾರ್ಯನಿರ್ವಹಿಸಿ, ಹಣಕ್ಕೆ ಆಸೆ ಪಟ್ಟು ನಿಮ್ಮ ಜೀವನವನ್ನು ಯಾಕೆ ಹಾಳು ಮಾಡಿಕೊಳ್ಳಿತ್ತೀರಾ, ಹಣದ ಆಸೆ ಬಿಟ್ಟು ಸಾರ್ವಜನಿರಿಗೆ ಸ್ಪಂದಿಸುವ ರೀತಿಯಲ್ಲಿ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಹೇಳಿದರು.
ಪೊಲೀಸ್ ಇನ್ಸ್ ಪೆಕ್ಟರ್ ಜೆ.ಎಸ್. ತಿಪ್ಪೇಸ್ವಾಮಿ ಮಾತನಾಡಿ ಲಂಚ ತೆಗೆದುಕೊಂಡು ಸಿಕ್ಕಿಬಿದ್ದರೆ ನಿಮ್ಮ ಘನತೆ ಹಾಳಾಗುತ್ತದೆ. ಲಂಚ ಬಿಟ್ಟು ನಿಷ್ಠೆ ಯಿಂದ ಕಾರ್ಯನಿರ್ವಹಿಸಿ, ಸಾರ್ವಜನಿಕರ ಸಮಸ್ಯೆಯನ್ನು ಬಗೆಹರಿಸಿದರೆ ನಿಮ್ಮ ಅವರು ದೇವರಂತೆ ಕಾಣುತ್ತಾರೆ ಎಂದರು.
ಹಣದ ಆಸೆಗೆ ತಮ್ಮ ಜೀವನವನ್ನೇ ಹಾಳು ಮಾಡಿಕೊಂಡಿರುವ ನಿರ್ದೇಶನಗಳು ಇವೆ. ಲಂಚಬಿಟ್ಟು ಸಾರ್ವಜನಿಕರಿಗೆ ಸ್ಪಂದಿಸುವ ರೀತಿ ಕೆಲಸ ಮಾಡಬೇಕು..ಶೇ 10 ರಷ್ಟು ಭ್ರಷ್ಟಾಚಾರ ಕಡಿಮೆಯಾದರೆ ಸಾರ್ವಜನಿಕರಿಗೆ ಒಳ್ಳೆಯದಾಗುತ್ತದೆ ಎಂದರು.
ಈ ವೇಳೆ ಲೋಕಾಯುಕ್ತ ಅಧಿಕಾರಿ ಮಂಜುನಾಥ ಅಧಿಕಾರಿಗಳಿಗೆ ಲಂಚ ಪಡೆಯಬಾರದು ಎಂದು ಪ್ರತಿಜ್ಞೆ ವಿಧಿ ಭೋಧಿಸಿದರು.
ಇಒ ಮಡುಗಿನ ಬಸಪ್ಪ, ತೋಟಗಾರಿ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ವಿರೂಪಾಕ್ಷಪ್ಪ, ತಾಲ್ಲೂಕು ಆರೋಗ್ಯಾಧಿಕಾರಿ ಪ್ರೇಮಸುಧಾ, ಲೋಕಾಯುಕ್ತ ಅಧಿಕಾರಿ ಲತಾ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.