Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಐಟಿ-ಬಿಟಿ, ವಿಜ್ಞಾನ-ತಂತ್ರಜ್ಞಾನದಲ್ಲಿ ಇತಿಹಾಸ ಮರೆಯಾಗುತ್ತಿದೆ : ಅಪರ ಜಿಲ್ಲಾಧಿಕಾರಿ ಕುಮಾರಸ್ವಾಮಿ

Facebook
Twitter
Telegram
WhatsApp

 

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 9886295817

ಸುದ್ದಿಒನ್, ಚಿತ್ರದುರ್ಗ, ನ. 19 :  ಇಂದಿನ ದಿನಮಾನದಲ್ಲಿ ಐಟಿ, ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಇತಿಹಾಸ ಮರೆಯಾಗುತ್ತಿದೆ. ಯಾವೂತ್ತು ಸಹಾ ನಮ್ಮ ಇತಿಹಾಸವನ್ನು ಮರೆಯಬಾರದು. ಇದರ ನೆನಪಿಗಾಗಿ ಈ ರೀತಿಯ ಕಾರ್ಯಕ್ರಮಗಳು ಅಗತ್ಯವಾಗಿದೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ಚಿತ್ರದುರ್ಗ ನಗರದ ಚಂದ್ರವಳ್ಳಿಯಲ್ಲಿಯ ಹುಲೇಗೊಂದಿ ಸಿದ್ದೇಶ್ವರ ದೇವಾಲಯದ ಆವರಣದಲ್ಲಿ ಭಾನುವಾರ ಕನ್ನಡ ರಾಜ್ಯೋತ್ಸವದ ಆಚರಣೆ ಮತ್ತು ಮಯೂರ ವರ್ಮನ ಶಾಸನದ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮಕ್ಕೆ ಮೂಯೂರ ವರ್ಮನ ಶಾಸನಕ್ಕೆ ಪುಪ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಇಂದಿನ ದಿನಮಾನದಲ್ಲಿ ಬಹತೇಕ ಜನತೆ ತಮ್ಮ ಮಕ್ಕಳನ್ನು ಆಂಗ್ಲ ಭಾಷಾ ಶಾಲೆಗೆ ಕಳುಹಿಸುವುದರ ಮೂಲಕ ಕನ್ನಡ ಭಾಷೆಯನ್ನು ಮರೆಯುತ್ತಿದ್ದಾರೆ. ಇಂದಿನ ಮಕ್ಕಳು ಮತ್ತು ಪೋಷಕರು ಸಹಾ ಕೆಲಸಕ್ಕಾಗಿ ಅಂಕಗಳಿಗಾಗಿ ಅಭ್ಯಾಸವನ್ನು ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಷಾಧಿಸಿದರು.

ಕನ್ನಡ ರಾಜ್ಯೋತ್ಸವವನ್ನು ಬರೀ ನವಂಬರ್ ನಲ್ಲಿ ಮಾತ್ರವೇ ಮಾಡದೇ ವರ್ಷದ 365 ದಿನವೂ ಸಹಾ ಮಾಡಬೇಕಿದೆ ಆಗ ಮಾತ್ರ ನಮ್ಮ ಭಾಷೆ ಬೆಳೆಯಲು ಸಾಧ್ಯವಾಗಿದೆ. ಇತಿಹಾಸವನ್ನು ಅರಿತಾಗ ಮಾತ್ರ ಇತಿಹಾಸವನ್ನು ನಿರ್ಮಾಣ ಮಾಡಲು ಸಾಧ್ಯವಿದೆ. ಕನ್ನಡದ ಬಗ್ಗೆ ಚಿಂತನೆ ನಡೆಯಬೇಕಿದೆ. ಪಾಶ್ಚಿಮಾತ್ಯರ ದಾಳಿಯಿಂದಾಗಿ ನಮ್ಮಲ್ಲಿ ಆಂಗ್ಲ ಭಾಷೆ ನೆಲೆಯೂರಿದೆ. ಕನ್ನಡದ ಭಾಷೆಯನ್ನು ಹಿಂದಕ್ಕೆ ಇಕ್ಕಿದೆ. ಈ ರೀತಿ ಆಗಬಾರದು ಎಲ್ಲರೂ ಕನ್ನಡ ಭಾಷೆಯನ್ನು ಪ್ರೀತಿಸಿ, ಮಾತನಾಡಬೇಕಿದೆ. ಆಗ ಮಾತ್ರ ನಮ್ಮ ಭಾಷೆ ಬೆಳೆಯಲು ಸಾಧ್ಯವಿದೆ. ಇದು ಒಬ್ಬರ ಕೆಲಸವಲ್ಲಿ ಎಲ್ಲರು ಸೇರಿ ಮಾಡಬೇಕಾದ ಕೆಲಸವಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದರು.

ವಿಶ್ರಾಂತ ಕನ್ನಡ ಪ್ರಾಧ್ಯಾಪಕರು, ಶಾಸನ ಇತಿಹಾಸ ಸಂಶೋಧಕರಾದ ಡಾ.ಬಿ.ರಾಜಶೇಖರಪ್ಪ ಮಯೂರ ವರ್ಮನ ಶಾಸನದ ಬಗ್ಗೆ ಮಾತನಾಡಿ, ನಮ್ಮ ಚಂದ್ರವಳ್ಳಿಯಲ್ಲಿ ಸಿಕ್ಕಿರುವ ಈ ಶಾಸನದಿಂದ ಕನ್ನಡ ರಾಜರು, ತಮ್ಮ ಆಡಳಿತವನ್ನು ಪ್ರಾರಂಭ ಮಾಡಿರುವ ಬಗ್ಗೆ ಮಾಹಿತಿಯನ್ನು ನೀಡುತ್ತದೆ. ಇಲ್ಲಿ ಕದಂಬ ರಾಜರು ತಮ್ಮ ಆಳ್ವಿಕೆಯನ್ನು ಪ್ರಾರಂಭ ಮಾಡಿರುವ ಮಾಹಿತಿಯನ್ನು ಸಹಾ ನೀಡಿದ್ದು ಇದು ಪ್ರಥಮವಾದ ಶಾಸನವಾಗಿದೆ. ಈ ಶಾಸನದ ಬಗ್ಗೆ ಹಲವಾರು ವಿದ್ವಾಂಸರು ವಿವಿಧ ರೀತಿಯಲ್ಲಿ ವಾಖ್ಯಾನ ಮಾಡಿದ್ದಾರೆ ಮೂಲದಲ್ಲಿ ಇದು ಸಂಸ್ಕøತದಲ್ಲಿದೆ.
ಮಯೂರಶರ್ಮನಾದವನು ಮಯೂರ ವರ್ಮ ಯಾವ ರೀತಿ ಆದ ಅದರ ಬಗ್ಗೆ ಇತಿಹಾಸದಲ್ಲಿ ತಿಳಿಸಲಾಗಿದೆ ಎಂದರು

ಮೂಲದಲ್ಲಿ ಬ್ರಾಹ್ಮಣನಾದ ಮಯೂರ ಶರ್ಮ ತನಗೆ ಆದ ಅವಮಾನದಿಂದಾಗಿ ಸೈನ್ಯವನ್ನು ಕಟ್ಟುವುದರ ಮೂಲಕ ಪಲ್ಲವರ ಮೇಲೆ ದಾಳಿಯನ್ನು ಮಾಡುವುದರ ಮೂಲಕ ಅವರ ರಾಜ್ಯದ ಕೆಲ ಪ್ರದೇಶಗಳನ್ನು ವಶಪಡಿಸಿಕೊಂಡನು ಇದರಿಂದ ವಿಚಲಿತರಾದ ಪಲ್ಲವರು ಮಯೂರ ವರ್ಮನನ್ನು ಗೆಳೆಯನನ್ನಾಗಿ ಮಾಡಿಕೊಂಡು ಅವನಿಗೆ ರಾಜನಾಗಿ ಪಟ್ಟಾಭೀಷೇಕ ಮಾಡುವುದರ ಮೂಲಕ ಕಂದಬ ರಾಜ ಆಡಳಿತವನ್ನು ಪ್ರಾರಂಭ ಮಾಡಿದರು.

ಆಡಳಿತವನ್ನು ನಡೆಸುವ ರಾಜನ ಭಾಷೆ ಅಲ್ಲಿ ಹೆಚ್ಚಾಗಿ ಪ್ರಾತಿನೀಧ್ಯ ಪಡೆಯುತ್ತದೆ ಈ ಹಿನ್ನಲೆಯಲ್ಲಿ ಮಯೂರ ವರ್ಮ ಕನ್ನಡದ ರಾಜನಾಗಿದ್ದರಿಂದ ಇಲ್ಲಿ ಕನ್ನಡ ಭಾಷೆ, ಕಲೆ, ಸಂಸ್ಕøತಿ, ಬೆಳೆಯಲು ಸಾಧ್ಯವಾಯಿತು. ಈ ಶಾಸನವು 1929ರಲ್ಲಿ ಕೃಷ್ಣಾರವರು ಓದಿದರು. ಇದನ್ನು ಅಧ್ಯಯನ ಮಾಡಿ ಇದರಲ್ಲಿ ಇರುವುದನ್ನು ತಿಳಿಸಿದರು, 1931ರ ವಾರ್ಷಿಕ ವರದಿಯಲ್ಲಿ ಇದು ಮಂಡನೆಯಾಗಿದೆ. ಇದ ನಂತರ 1983-84ರಲ್ಲಿ ನಾನು ಇದರ ಬಗ್ಗೆ ಅಧ್ಯಯನ ಮಾಡಿ ಇದು ಸಂಸ್ಕøತ ಭಾಷೆಯಲ್ಲಿದೆ ಎಂದು ತಿಳಿಸಿ ಅದರ ಅರ್ಥವನ್ನು ತಿಳಿಸಿದ್ದೇನೆ ಎಂದು ರಾಜಶೇಖರಪ್ಪ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ನಗರಸಭೆಯ ಮಾಜಿ ಅಧ್ಯಕ್ಷರಾದ ಬಿ.ಕಾಂತರಾಜ್ ಮಾತನಾಡಿ, ಈ ಕಾರ್ಯಕ್ರಮವೂ ಸಣ್ಣಧಾದರೂ ಸಹಾ ಉತ್ತಮವಾದ ಕಾರ್ಯಕ್ರಮವಾಗಿದೆ, ಈ ಕಾರ್ಯಕ್ರಮವನ್ನು ಈ ವರ್ಷದಿಂದ ಪ್ರಾರಂಭ ಮಾಡಿದ್ದು ಮುಂದಿನ ದಿನದಲ್ಲಿ ಪ್ರತಿ ವರ್ಷವೂ ಸಹಾ ನಡೆಸಲಾಗುವುದು. ಚಿತ್ರದುರ್ಗಕ್ಕೆ ಮಯೂರ ವರ್ಮನ ಕೂಡುಗೆ ಆಪಾರವಾಗಿದೆ. ಚಿತ್ರದುರ್ಗದ ಇತಿಹಾಸದ ಬಗ್ಗೆ ತಿಳಿಯುವುದು ಇನ್ನೂ ಬಹಳ ಇದೆ ಈ ರೀತಿಯ ಕಾರ್ಯಕ್ರಮಗಳನ್ನು ಮಾಡುವುದರ ಮೂಲಕ ತಿಳಿಯಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಕಿರಣ್, ನಾಗರಾಜ್ ಸಗಂ, ನಗರಸಭಾ ಸದಸ್ಯರಾದ ಫ್ರಕೃದ್ದಿನ್ ಚಂದ್ರಶೇಖರ್, ಸುರೇಶ್ ತಕ್ಕಡಿ ಸೇರಿದಂತೆ ಇತರರು ಭಾಗವಹಿಸಿದ್ದರು. ಕಾರ್ಯಕ್ರಮದ ಸಂಯೋಜಕರಾದ ಗೋಪಾಲಸ್ವಾಮಿ ನಾಯಕ್ ಸ್ವಾಗತಿಸಿ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಕಾಮಾಲೆ (ಜಾಂಡೀಸ್) ರೋಗ ಎಂದರೇನು ? ಇಲ್ಲಿದೆ ಉಪಯುಕ್ತ ಮಾಹಿತಿ….!

ಕಾಮಾಲೆ ಅಥವಾ ಜಾಂಡೀಸ್ ಎನ್ನುವುದು ಹತ್ತು ಹಲವು ರೋಗಗಳಲ್ಲಿ ಕಂಡು ಬರುವ ದೇಹ ಸ್ಥಿತಿಯಾಗಿರುತ್ತದೆ. ಹಲವಾರು ಕಾರಣಗಳಿಂದ ಕಾಮಾಲೆ ರೋಗ ಬರುವ ಸಾಧ್ಯತೆ ಇರುತ್ತದೆ. ಕಾಮಾಲೆ ಎಂಬ ಪದವು ಕಾಮ ಮತ್ತು ಲಾ ಎಂಬ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ: ಈ ರಾಶಿಯ ಕುಟುಂಬದಲ್ಲಿ ಕಲಹಗಳು ಆಗಲು ದಾಯಾದಿಗಳೇ ಕಾರಣ : ಈ ರಾಶಿಯ ಗಂಡ ಹೆಂಡತಿ ದೂರವಾಗಲು ಹಿತೈಷಿಗಳೇ ಕಾರಣ : ಶನಿವಾರ-ರಾಶಿ ಭವಿಷ್ಯ

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

error: Content is protected !!