ಬೆಂಗಳೂರು: ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಆರೋಗ್ಯದಲ್ಲಿ ಏರುಪೇರಾದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿಕ್ರಂ ಆಸ್ಪತ್ರೆಯಲ್ಲಿ ಪುನೀತ್ ರಾಜ್ ಕುಮಾರ್ ಗೆ ಚಿಕಿತ್ಸೆ ನೀಡಲಾಗುತ್ತುದೆ.
ಸದ್ಯ ವಿಕ್ರಂ ಆಸ್ಪತ್ರೆ ಸುತ್ತಮುತ್ತ ಬಿಗಿಭದ್ರತೆ ನೀಡಲಾಗಿದೆ. ಇನ್ನು ಆಯುಕ್ತ ಮುರುಗನ್ ಅವರು ಅಲ್ಲಿನ ಭದ್ರತೆಯನ್ನ ಪರಿಶೀಲನೆ ನಡೆಸುತ್ತಿದ್ದಾರೆ.
ಇಸಿಜಿ ಸೇರಿದಂತೆ ಹಲವು ಪರಿಶೀಲನೆ ನಡೆಸಿದ್ದಾರೆ. ಐಸಿಯೂ ನಲ್ಲಿ ಪುನೀತ್ ರಾಜ್ ಕುಮಾರ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.
ನಿನ್ನೆ ರಾತ್ರಿಯೇ ಸ್ವಲ್ಪಮಟ್ಟಿಗೆ ಆರೋಗ್ಯದಲ್ಲಿ ಏರುಪೇರಾಗಿತ್ತಂತೆ. ಅದನ್ನ ಹಾಗೇ ನಿರ್ಲಕ್ಷ್ಯ ಮಾಡಿದ್ದರಂತೆ. ಬೆಳಗ್ಗೆ ಮತ್ತೆ ಅನಾರೊಇಗ್ಯ ಹೆಚ್ಚಾದ ಕಾರಣ ಬೆಳಗ್ಗೆಯೇ ರಮಣಶ್ರೀ ಆಸ್ಪತ್ರೆಗೆ ದಾಖಲಿಸಲಾಗಿದೆ. ಆ ಬಳಿಕ ವಿಕ್ರಂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.