Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಡ್ರಗ್ಸ್ ಹಾಗು ಬಿಟ್ ಕಾಯಿನ್ ಪ್ರಕರಣದಲ್ಲಿ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ: ಆರಗ ಜ್ಞಾನೇಂದ್ರ

Facebook
Twitter
Telegram
WhatsApp

ಬೆಂಗಳೂರು: ಡ್ರಗ್ಸ್ ಹಾಗು ಬಿಟ್ ಕಾಯಿನ್ ಪ್ರಕರಣ ಗಂಭೀರವಾಗಿದ್ದು, ಈ ಪ್ರಕರಣದ ಬಗ್ಗೆ ಸಿಐಡಿ ತನಿಖಾ ತಂಡ ತನಿಖೆ ನಡೆಸುತ್ತಿದೆ. ಈ ಪ್ರಕರಣದಲ್ಲಿ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ವಿಕಾಸಸೌಧದಲ್ಲಿ ಇಂದು ಅಧಿಕಾರಿಗಳ ಜತೆ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕುರಿತು ತನಿಖೆ ನಡೆಯುತ್ತಿರುವುದರಿಂದ ನಾನು ಏನನ್ನೂ ಹೇಳುವುದಿಲ್ಲ. ಆದರೆ ಸಿಐಡಿ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ‌ ಎಂದು ತಿಳಿಸಿದರು.

ಯಾರನ್ನೂ ರಕ್ಷಿಸುವ ಕೆಲಸ ಮಾಡುತ್ತಿಲ್ಲ. ಪ್ರಕರಣದ ಬಗ್ಗೆ ಊಹಾಪೋಹ ಹೇಳಿಕೆಗಳನ್ನು ನೀಡಬಾರದು. ಡ್ರಗ್ಸ್ ಖರೀದಿ ಮತ್ತು ಬಿಟ್ ಕಾಯಿನ್ ಬಳಕೆ ಆಗಿದ್ದರೂ, ಪೊಲೀಸರು ಆರೋಪಿಗಳನ್ನು ಬಂಧಿಸಲಿದ್ದಾರೆ. ಪೊಲೀಸರು ಭಾಗಿದ್ದರೆ ಅವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದರು.

ಬಿಟ್ ಕಾಯಿನ್ ಪ್ರಕರಣದಲ್ಲಿ ಪ್ರಭಾವಿ ರಾಜಕಾರಣಿಗಳ ಭಾಗಿ ವಿಚಾರವಾಗಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಚುನಾವಣೆ ಸಂದರ್ಭದಲ್ಲಿ ಇಂತಹ ಹೇಳಿಕೆ ಕೊಡಬಾರದು. ಅವರು ಮುಖ್ಯಮಂತ್ರಿಯಾಗಿದ್ದವರು. ಈ ರೀತಿ ಹೇಳಿಕೆ ನೀಡುವ ಬದಲಾಗಿ ಪೊಲೀಸರಿಗೆ ನೇರವಾಗಿ ಫೋನ್ ಮಾಡಿ ತಿಳಿಸಬಹುದಿತ್ತು. ಇದು ದೇಶದ ಆರ್ಥಿಕತೆಯ ವಿಚಾರ. ಪಕ್ಷ ಮೀರಿ ಯೋಚಿಸಬೇಕು ಎಂದು ಸಲಹೆ ನೀಡಿದರು

Facebook
Twitter
Telegram
WhatsApp
suddionenews

suddionenews

Leave a Comment

Top Stories

Vastu Tips : ಮನೆಯಲ್ಲಿ ಗಡಿಯಾರವನ್ನು ಯಾವ ದಿಕ್ಕಿಗೆ ಇಟ್ಟರೆ ಒಳ್ಳೆಯದು ಗೊತ್ತಾ ?

ಸುದ್ದಿಒನ್ : ವಾಸ್ತು ಎಂದರೆ ಮನೆಗೆ ಮಾತ್ರವಲ್ಲದೇ ಮನೆಯಲ್ಲಿ ಇರುವ  ವಸ್ತುಗಳಿಗೂ ಕೂಡ ಅನ್ವಯಿಸುತ್ತದೆ.  ವಸ್ತುಗಳನ್ನು ಇರಿಸುವ ದಿಕ್ಕನ್ನು ಅವಲಂಬಿಸಿ, ಮನೆಗೆ ನಷ್ಟ ಮತ್ತು ಲಾಭವನ್ನು ಅಂದಾಜಿಸುತ್ತಾರೆ. ವಾಸ್ತು ಪ್ರಕಾರ, ಅನೇಕ ರೀತಿಯ ವಸ್ತುಗಳನ್ನು

ದಿನಕ್ಕೆ 2 ಬಾರಿ ಈ ಪಾನೀಯವನ್ನು ಕುಡಿದರೆ ಕೊಬ್ಬು ಬೆಣ್ಣೆಯಂತೆ ಕರಗುತ್ತದೆ…!

ಸುದ್ದಿಒನ್ : ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಅಧಿಕ ದೇಹದ ತೂಕದ ಬಗ್ಗೆ ಚಿಂತಿಸುತ್ತಿದ್ದಾರೆ. ತೂಕವು ನಿಯಂತ್ರಣದಲ್ಲಿದ್ದರೂ, ಜನರು ಸಾಮಾನ್ಯವಾಗಿ ಬೊಜ್ಜಿನ ಬಗ್ಗೆ ಚಿಂತಿಸುತ್ತಾರೆ. ಅಧಿಕ ತೂಕ ಅಥವಾ ಸ್ಥೂಲಕಾಯತೆಯು ಅಸಹ್ಯವಾಗಿ ಕಾಣುವುದಲ್ಲದೆ, ನಡೆಯಲು ಕಷ್ಟವಾಗುತ್ತದೆ.

ಈ ರಾಶಿಯವರಿಗೆ ಗುಡ್ ಲಕ್ ಗಳ ಸುರಿಮಳೆ….

ಈ ರಾಶಿಯವರಿಗೆ ಗುಡ್ ಲಕ್ ಗಳ ಸುರಿಮಳೆ….   ಬುಧವಾರ ರಾಶಿ ಭವಿಷ್ಯ -ಮೇ-8,2024 ಸೂರ್ಯೋದಯ: 05:50, ಸೂರ್ಯಾಸ್ತ : 06:34 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ ಸಂವತ್ಸರ , ಸಂವತ್2079, ಚೈತ್ರಮಾಸ,

error: Content is protected !!