Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಹೆದರಿಕೊಂಡು ಹೋಗಲು ನಾನು ಕುಮಾರ ಬಂಗಾರಪ್ಪ ಅಲ್ಲ : ಮಧು ಬಂಗಾರಪ್ಪ ವಿರುದ್ಧ ಬೇಳೂರು ವಾಗ್ದಾಳಿ

Facebook
Twitter
Telegram
WhatsApp

ಶಿವಮೊಗ್ಗ: ಜಿಲ್ಲೆಯಲ್ಲಿ ತಮ್ಮದೇ ಪಕ್ಷದ ಸಚಿವರ ವಿರುದ್ಧ ಬೇಳೂರು ಗೋಪಾಲಕೃಷ್ಣ ವಾಗ್ದಾಳಿ ನಡೆಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾಗಿ ಮೊದಲು ಮಧು ಬಂಗಾರಪ್ಪ ಅಂತ ಒಬ್ಬರಿದ್ದರು. ಆದರೆ ಈಗ ಯಾರಿದ್ದಾರೋ ಗೊತ್ತಿಲ್ಲ ಎಂದಿದ್ದಾರೆ.

 

ಕೆಡಿಪಿ ಸಭೆಗೆ ನನಗೆ ಆಹ್ಚಾನ ನೀಡಿಲ್ಲ. ಜಿಲ್ಲ ಉಸ್ತುವಾರಿ ಸಚಿವ ಯಾರು ಎಂಬುದು ಗೊತ್ತಿಲ್ಲ. ಈ ಹಿಂದೆ ಮಧು ಬಂಗಾರಪ್ಪ ಅಂತ ಇದ್ರು. ಈಗ ಯಾರಿದ್ದಾರೋ ಗೊತ್ತಿಲ್ಲ. ಬಹುಶಃ ಅವರು ನನ್ನನ್ನು ವಿರೋಧ ಪಕ್ಷದ ನಾಯಕ ಎಂದುಕೊಂಡಿರಬೇಕು. ಹೆದರಿಕೊಂಡು ಹೋಗಲು ನಾನು ಕುಮಾರ ಬಂಗಾರಪ್ಪ ಅಲ್ಲ. ನಾನು ಬೇಳೂರು ಗೋಪಾಲಕೃಷ್ಣ. ನನ್ನ ಕ್ಷೇತ್ರದ ಅಭಿವೃದ್ಧಿ ಮೇಲೆ ಯಾವುದೇ ಪರಿಣಾಮ ಆಗಲ್ಲ. ನನಗೆ ಸಿಎಂ, ಡಿಸಿಎಂ ಬೆಂಬಲವಿದೆ ಎಂದಿದ್ದಾರೆ. ಇನ್ನು ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಸಚಿವ ಮಧು ಬಂಗಾರಪ್ಪ, ಈ ಬಗ್ಗೆ ನಾನು ಮಾತನಾಡುವುದಕ್ಕೆ ಆಗಲ್ಲ. ಅವರಿಗೂ ಕೆಡಿಪಿ ಸಭೆಗೆ ಆಹ್ವಾನ ನೀಡಿದ್ದೆವು ಎಂದಿದ್ದಾರೆ.

 

ಈ ಸಂಬಂಧ ಸಂಸದ ಬಿವೈ ರಾಘವೇಂದ್ರ ಅವರು, ಗೋಪಾಲಕೃಷ್ಣ ಅವರು ಒಬ್ಬ ಹಿರಿಯ ಶಾಸಕರು. ಅವರಲ್ಲಿ‌ ಅಧಿಕಾರಕ್ಕಾಗಿ ಪೈಪೋಟಿ ಇದೆ. ವಿಪಕ್ಷದವರನ್ನು ಯಾರು ಹೆಚ್ಚಾಗಿ ಬೈಯುತ್ತಾರೆ ಅವರಿಗೆ ಸ್ಥಾನ ಸಿಗುತ್ತದೆ ಅನ್ಸುತ್ತೆ, ನಾನು ಮತದಾರರಿಗೆ ಉತ್ತರ‌ ಕೊಡೋದು. ನನಗೆ ಮತ ಕೊಟ್ಟಿರುವವರು ಮತದಾರರು, ನಾನು ಅವರಿಗೆ ನಿಷ್ಠೆ ಇರುವರು ಎಂದು ತಿಳಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಇಂದು ಜಾಮೀನು ಸಿಕ್ಕರೂ ರೇವಣ್ಣ ನಾಳೆ ಜೈಲಿಂದ ರಿಲೀಸ್..!

    ಬೆಂಗಳೂರು: ಮಹಿಳೆಯ ಕಿಡ್ನ್ಯಾಪ್ ಕೇಸಿನಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರು ಪರಪ್ಪನ ಅಗ್ರಹಾರ ಸೇರಿದ್ದರು. ಇಂದು ಕಡೆಗೂ ಷರತ್ತು ಬದ್ಧ ಜಾಮೀನು ಸಿಕ್ಕಿದೆ. ಆದರೆ ಜಾಮೀನು ಸಿಕ್ಕಿದರು ಮನೆಗೆ

ಸಿ.ಬಿ.ಎಸ್.ಇ 10ನೇ ತರಗತಿ ಫಲಿತಾಂಶ : ದಿ ಸ್ಟೆಪ್ಪಿಂಗ್ ಸ್ಟೋನ್ಸ್ ಸ್ಕೂಲ್ ಸತತ 7ನೇ ವರ್ಷವೂ ಶೇಕಡ 100 ರಷ್ಟು ಫಲಿತಾಂಶ…!

ಸುದ್ದಿಒನ್, ಚಿತ್ರದುರ್ಗ, ಮೇ. 13 :  ನಗರದ ಪ್ರತಿಷ್ಠಿತ ಶಾಲೆ ದಿ ಸ್ಟೆಪ್ಪಿಂಗ್ ಸ್ಟೋನ್ಸ್ ಸ್ಕೂಲ್ ಸತತ 7ನೇ ವರ್ಷವೂ 2023-24ನೇ ಸಾಲಿನ ಸಿ.ಬಿ.ಎಸ್.ಇ 10ನೇ ತರಗತಿಯ ಫಲಿತಾಂಶದಲ್ಲಿ ಶೇಕಡ 100% ಫಲಿತಾಂಶ ಸಾಧಿಸಿದೆ.

ರೇವಣ್ಣಗೆ ಸಿಕ್ತು ಷರತ್ತು ಬದ್ಧ ಜಾಮೀನು..!

    ಬೆಂಗಳೂರು: ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋಗೆ ಸಂಬಂಧಿಸಿದಂತೆ ಮಹಿಳೆಯಿಬ್ಬರನ್ನು ಕಿಡ್ನ್ಯಾಪ್ ಮಾಡಿದ್ದ ಪ್ರಕರಣದಲ್ಲಿ ರೇವಣ್ಣ ಅರೆಸ್ಟ್ ಆಗಿದ್ದು, ಇಂದು ಅವರ ಜಾಮೀನು ಅರ್ಜಿ ವಿಚಾರಣೆ ನಡೆದಿದ್ದು ಕೋರ್ಟ್ ನಲ್ಲಿ ರೇವಣ್ಣ

error: Content is protected !!