Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಅಧಿಕಾರಿ ಪ್ರತಿಮಾ ಕೊಲೆ ಕೇಸಲ್ಲಿ ಮುನಿರತ್ನ ಹೆಸರು : ಆರ್ ಆರ್ ನಗರ ಶಾಸಕ ಏನಂದ್ರು..?

---Advertisement---

ಬೆಂಗಳೂರು: ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಪ್ರತಿಮಾ ಕೊಲೆಗೆ ಸಂಬಂಧಿಸಿದಂತೆ, ಪೊಲೀಸರು ಅಲರ್ಟ್ ಆಗಿದ್ದು, ಕಾರು ಚಾಲಕನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದರ ನಡುವೆ ಮಾಜಿ ಸಚಿವ ಮುನಿರತ್ನ ಅವರ ಹೆಸರು ಕೂಡ ತಳುಕು ಹಾಕುತ್ತಿದೆ. ಕಾಂಗ್ರೆಸ್ ನವರ ಆರೋಪಕ್ಕೆ ಇದೀಗ ಶಾಸಕ ಮುನಿರತ್ನ ಪ್ರತಿಕ್ರಿಯೆ ನೀಡಿದ್ದಾರೆ.

 

‘ಲೋಕಸಭಾ ಚುನಾವಣೆ ಹೊತ್ತಿಗೆ ಮುನಿರತ್ನ ಹೊರಗೆ ಇರಬಾರದು. ತಿಹಾರ್ ಜೈಲಿಗೆ ಕಳುಹಿಸಬೇಕು ಅನ್ನೋದು ಅವರ ಆಲೋಚನೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ನಾನೂ ಈಗ ಎದ್ದು ಬಂದಿದ್ದೇನೆ. ಬೆಳಗ್ಗೆಯಿಂದ ಮಧ್ಯಾಹ್ನದ ವೇಳೆಗೆ ಏನಾಗಿದೆ ಎಂಬುದು ನಿಮಗೆ ಗೊತ್ತು. ನನ್ನ ಮನೆ ಮುಂದೆ ಆಕ್ಸಿಡೆಂಟ್ ಆದರೂ ಅದಕ್ಕೆ‌ ಕಾರಣ ಮುನಿರತ್ನ ಎನ್ನುತ್ತಾರೆ.

 

ಸರ್ಕಾರಿ ಅಧಿಕಾರಿ ಪ್ರತಿಮಾ ಅವರ ಕೊಲೆ ಪ್ರಕರಣ ಸಂಪೂರ್ಣವಾಗಿ ತನಿಖೆ ನಡೆಯುತ್ತಿದೆ. ಅದರ ಎಲ್ಲಾ ವರದಿ ಹಪರಗೆ ಬರಲಿ. ಸ್ವಾರ್ಥಕ್ಕೆ, ದುರುದ್ದೇಶಕ್ಕೆ ಹೇಳಿಕೆಗಳನ್ನು ಕೊಡುವುದು ಅಲ್ಲ. ಪ್ರತಿಮಾ ಅವರ ಕೊಲೆಗೆ ಕಾರಣವಾದ ಡ್ರೈವರ್ ಅನ್ನು ಬಂಧಿಸಿದ್ದಾರೆ. ಮಲೆ ಮಹದೇಶ್ವರ ಬೆಟ್ಟದಲ್ಲಿ ಬಂಧಿಸಿ, ಕರೆ ತಂದಿದ್ದಾರೆ. ಮಹದೇಶ್ವರನೇ ನ್ಯಾಯ ಕೊಟ್ಟ ಎನಿಸುತ್ತದೆ ಎಂದಿದ್ದಾರೆ.

ಪ್ರತಿಮಾ ಕೊಲೆ ಕೇಸಿನಲ್ಲಿ ಕಾಂಗ್ರೆಸ್ ಮುನಿರತ್ನ ಮೇಲೆ ಆರೋಪ ಮಾಡಿದೆ. ಹಣಸೆಮಾರನಹಳ್ಳಿಯ ಪರವಾನಗಿ ಪಡೆಯದೆ ಬಂಡೆಗಳನ್ನು ಬ್ಲಾಸ್ಟ್ ಮಾಡಲಾಗಿತ್ತು. ಪ್ರತಿಮಾ ಅವರು ಈ ಸಂಬಂಧ ವರದಿಯನ್ನು ಜಿಲ್ಲಾಧಿಅಕರಿಗೆ ನೀಡಿದ್ದರು. ಈ ಪ್ರಕರಣದಲ್ಲಿ ಮುನಿರತ್ನ ಅವರನ್ನು A2 ಆರೋಪಿಯಾಗಿ ಮಾಡಿದ್ದರು. ಈ ಸಂಬಂಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಕೇಸ್ ಕೂಡ ದಾಖಲಾಗಿತ್ತು. ಈ ಸಂಬಂಧ ಮುನಿರತ್ನಗೂ ನೋಟೀಸ್ ನೀಡಿ, ವಿಚಾರಣೆ ನಡೆಸಿ ಎಂಬುದು ಕೆಪಿಸಿಸಿ ಕಾನೂನು ಘಟಕದ ಮುಖಂಡ ಸೂರ್ಯ ಮುಖುಂದರಾಜ್ ಒತ್ತಾಯಿಸಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment