ಹಾಸನ: ವರ್ಷಕ್ಕೊಮ್ಮೆ ತೆರೆಯುವ ಹಾಸನಾಂಬೆ ದೇವಸ್ಥಾನಕ್ಕೆ ಭಕ್ತಾಧಿಗಳ ದಂಡೇ ಹರಿದು ಬರುತ್ತಿದೆ. ಇದರ ನಡುವೆ ಹಾಸನಾಂಬೆಯ ಉತ್ಸವ ಕಳಸ ಪೂಜೆಯೂ ನೆರವೇರಿದೆ. ಈ ಉತ್ಸವದಲ್ಲಿ ತಮ್ಮನ್ನು ಕಡೆಗಣಿಸಿದ್ದಾರೆಂದು ಶಾಸಕ ಸ್ವರೂಪ್ ಪ್ರಕಾಶ್ ಗರಂ ಆಗಿದ್ದಾರೆ. ಅದರ ಜೊತೆಗೆ ಜಿಲ್ಲಾಧಿಕಾರಿ ತಮ್ಮ ಪತಿಯ ಜೊತೆಗೆ ಪೂಜೆ ಮಾಡಿರುವ ವಿಡಿಯೋ ವೈರಲ್ ಆಗಿದೆ.
ಜಿಲ್ಲಾಧಿಕಾರಿ ಸಿ ಸತ್ಯಭಾಮ ಅವರನ್ನು ಪ್ರಶ್ನಿಸಿದ್ದಾರೆ. ದೇಗುಲದ ಕಳಸ ಪ್ರತಿಷ್ಠಾಪನೆ ವೇಳೆ ನನ್ನನ್ನು ಕರೆದಿಲ್ಲ. ನಾನೇನು ದನ ಕಾಯೋಕೆ ಇದ್ದೀನಾ. ಇಡೀ ಕುಟುಂಬದ ಜೊತೆಗೆ ಅವರು ಪೂಜೆ ಯಾಕೆ ಮಾಡಿದ್ದು ಎಂದು ಪ್ರಶ್ನಿಸಿದ್ದಾರೆ. ದೇಗುಲಕ್ಕೆ ಕಳಸ ಪ್ರತಿಷ್ಠಾಪನೆ ಮಾಡಲಾಗಿದೆ. ಆದರೆ ಸ್ಥಳೀಯ ಶಾಸಕನಾದ ನನ್ನನ್ನು ಕರೆದಿಲ್ಲ. ನಾನೇನು ದನ ಕಾಯೋಕೆ ಇದ್ದೀನಾ ಅಂತ ಹಾಸನಾಂಬೆ ದೇವಸ್ಥಾನದ ಆವರಣದಲ್ಲಿಯೇ ಆಕ್ರೋಶ ಹೊರ ಹಾಕಿದ್ದಾರೆ.
ನೀವೂ ನಿಮ್ಮ ಪತಿ ಕುಳಿತುಕೊಂಡು ಹೇಗೆ ಹೋಮ ಮಾಡಿದ್ದೀರಿ..? ತಮ್ಮ ಕುಟುಂಬದ ಪೂಜೆ ಎಂಬಂತೆ ಕುಳಿತು ಪೂಜೆ ಮಾಡಿದ್ದೀರಿ. ಹೆಲಿ ಟೂರಿಸಂಗೆ ಚಾಲನೆ ನೀಡಿದ್ದೀರಿ, ಅದಕ್ಕೂ ನನ್ನನ್ನು ಆಹ್ವಾನ ಮಾಡಿಲ್ಲ. ಶಾಸಕರನ್ನೂ ಸೌಜನ್ಯಕ್ಕಾದರೂ ಕರೆದಿಲ್ಲ ಎಂದು ಜಿಲ್ಲಾಧಿಕಾರಿ ವಿರುದ್ಧ ಗರಂ ಆಗಿದ್ದಾರೆ. ಇನ್ನು ಹಾಸನಾಂಬೆಯ ದೇಗುಲ ನವೆಂಬರ್ 15ರ ತನಕ ತೆಗೆಯಲಾಗಿರುತ್ತದೆ. ಆದರೆ ನವೆಂಬರ್ 14ಕ್ಕೆ ಸಾರ್ವಜನಿಕರಿಗೆ ದರ್ಶನ ಭಾಗ್ಯಾ ಮುಗಿಯುತ್ತದೆ. ಕಡೆಯ ದಿನ ಪೂಜಾ ವಿಧಿ ವಿಧಾನಗಳನ್ನು ಮುಗಿಸಿ ದೇವಸ್ಥಾನದ ಬಾಗಿಲು ಹಾಕಲಾಗುತ್ತದೆ. ಹೀಗಾಗಿ ಕಡೆಯ ದಿನ ದರ್ಶನ ಭಾಗ್ಯ ಇರುವುದಿಲ.