ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿ ಈಗಾಗಲೇ ನಾನೇ ಸಿಎಂ ಎಂಬ ವಿಚಾರವಾಗಿ ಸಾಕಷ್ಟು ಪರ ವಿರೋಧ ಕೇಳಿ ಬರುತ್ತಿದೆ. ಸಿಎಂ ಸಿದ್ದರಾಮಯ್ಯ ನಾನೇ ಸಿಎಂ ಐದು ವರ್ಷ ಎಂದು ಹೇಳಿದ್ದಾರೆ. ಇದಕ್ಕೆ ಡಿಕೆಶಿ ಮುನಿಸಿಕೊಂಡವರಂತೆ ಕಾಣುತ್ತಿದೆ. ಡಿಕೆಶಿ ಬೆಂಬಲಿಗರು ಕೂಡ ಈಗಾಗಲೇ ಸಿದ್ದರಾಮಯ್ಯ ಮೇಲೆ ಗರಂ ಆಗಿದ್ದಾರೆ. ಇದೀಗ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೊಸ ವಿಚಾರ ಹೇಳಿದ್ದಾರೆ. ಡಿಕೆ ಶಿವಕುಮಾರ್ ಸಿಎಂ ಆದರೆ ಜೆಡಿಎಸ್ ಬೆಂಬಲ ಕೊಡುತ್ತೆ ಎಂದಿದ್ದಾರೆ.
ನಾಳೆ ಬೆಳಗ್ಗೆಯೇ ಡಿಕೆ ಶಿವಕುಮಾರ್ ಸಿಎಂ ಆದರೆ ಜೆಡಿಎಸ್ ನ 19 ಶಾಸಕರು ಬೆಂಬಲ ನೀಡುತ್ತಾರೆ. ಡಿಕೆ ಶಿವಕುಮಾರ್ ಅವರಿಗೆ ನಾವೂ ಬೆಂಬಲ ನೀಡುತ್ತೇವೆ ಎಂದಿದ್ದಾರೆ. ನಾನ್ಯಾಕೆ ಅವರಿಗೆ ಅಡ್ಡಿಯಾಗಲಿ, ನಮ್ಮ ಎಂಎಲ್ಎಗಳಿಗೆ ದಿನ ಬೆಳಗಾದ್ರೆ ಪಕ್ಷಕ್ಕೆ ಬನ್ನಿ ಅಂತ ಅರ್ಜಿ ಹಾಕ್ತಾರೆ. ನನಗೇನು ವೈರತ್ವ ಇಲ್ಲ. ನಾವೇ ಡಿಕೆ ಶಿವಕುಮಾರ್ ಅವರಿಗೆ ಬೆಂಬಲ ಕೊಡುತ್ತೇವೆ ಎಂದಿದ್ದಾರೆ.
ಕಾಂಗ್ರೆಸ್ ಸರ್ಕಾರ ರಚನೆಯಾಗುವಾಗಲೇ ಮೊದಲು ಸಿದ್ದರಾಮಯ್ಯ ಅವರು ಸಿಎಂ ಆಗುತ್ತಾರೆ. ಬಳಿಕ ಡಿಕೆ ಶಿವಕುಮಾರ್ ಸಿಎಂ ಆಗಲಿದ್ದಾರೆ ಎಂಬ ನಿರ್ಧಾರವಾಗಿದೆ ಎಂದೇ ಹೇಳಲಾಗಿತ್ತು. ಅದಕ್ಕೆಂದೆ ಡಿಕೆ ಶಿವಕುಮಾರ್ ಅವರು ಡಿಸಿಎಂ ಹುದ್ದೆ ಒಪ್ಪಿದ್ದಾರೆ ಎನ್ನಲಾಗಿತ್ತು. ಇದೀಗ ಕಾಂಗ್ರೆಸ್ ನಲ್ಲಿ ಹೊಗೆಯಾಡುತ್ತಿರುವ ಸಿಎಂ ಹುದ್ದೆ ವಿಚಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ತುಪ್ಪ ಸುರಿದಂತೆ ಆಗಿದೆ.