Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣೆ : ಮತ್ತೊಮ್ಮೆ ಗೆಲ್ಲಿಸುವಂತೆ ಶಿಕ್ಷಕರಿಗೆ ವೈ.ಎ.ನಾರಾಯಣಸ್ವಾಮಿ ಮನವಿ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್.07 : ಶಿಕ್ಷಕರ ಕ್ಷೇತ್ರದಲ್ಲಿ ಕಳೆದ ಹದಿನೆಂಟು ವರ್ಷಗಳಿಂದಲೂ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ. ನಾನು ಯಾವುದೇ ಜಾತಿಗೆ ಸೀಮಿತವಾಗಿಲ್ಲ. ಎಲ್ಲರೂ ಶಿಕ್ಷಕರ ಜಾತಿ ಎಂದು ತಿಳಿದುಕೊಂಡಿದ್ದೇನೆ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬಿಟ್ಟು ಎಲ್ಲಾ ಗುಂಪು ಒಂದಾಗಿ ಈ ಬಾರಿಯೂ ನನ್ನನ್ನು ಗೆಲ್ಲಿಸಿ ಆರು ವರ್ಷಗಳ ಕಾಲ ನಿಮ್ಮನ್ನು ತಲೆ ಮೇಲೆ ಹೊತ್ತು ತಿರುಗುತ್ತೇನೆಂದು ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಶಿಕ್ಷಕರುಗಳಲ್ಲಿ ಮನವಿ ಮಾಡಿದರು.

ಪ್ರವಾಸಿ ಮಂದಿರಕ್ಕೆ ಶುಕ್ರವಾರ ಆಗಮಿಸಿದ್ದ ವೈ.ಎ.ನಾರಾಯಣಸ್ವಾಮಿ ನೂರಾರು ಶಿಕ್ಷಕರುಗಳನ್ನುದ್ದೇಶಿಸಿ ಮಾತನಾಡುತ್ತ ಒಂದು ಬಾರಿ ಗೆದ್ದವರು ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಗೆಲ್ಲುವುದಿಲ್ಲ ಎನ್ನುವ ತಪ್ಪು ಅಭಿಪ್ರಾಯವಿದೆ. ಆದರೆ ನಾನು ಮೂರು ಸಾರಿ ಗೆದ್ದಿದ್ದೇನೆ. ಇದಕ್ಕೆ ಚಿತ್ರದುರ್ಗ, ದಾವಣಗೆರೆ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಶಿಕ್ಷಕರುಗಳು ನನ್ನ ಮೇಲಿಟ್ಟಿರುವ ಪ್ರೀತಿ, ವಿಶ್ವಾಸ, ನಂಬಿಕೆಯೆ ಕಾರಣ ಎಂದು ಸಂತಸ ವ್ಯಕ್ತಪಡಿಸಿದರು.
ಐದು ಜಿಲ್ಲೆ, 34 ತಾಲ್ಲೂಕುಗಳಲ್ಲಿ ಸುತ್ತಾಡಿ ಶಿಕ್ಷಕರು, ಉಪನ್ಯಾಸಕರುಗಳ ಸಮಸ್ಯೆಗಳನ್ನು ಆಲಿಸಿದ್ದೇನೆ.

ಮುಖ್ಯ ಶಿಕ್ಷಕರುಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಹುದ್ದೆಗೆ ಬಡ್ತಿ ಕೊಡಿಸಿದ್ದೇನೆ. ತಾಲ್ಲೂಕು ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳಲ್ಲಿ ಗೊಂದಲ ಸೃಷ್ಟಿಯಾಗುತ್ತಿದೆ. ಮತ ಚಲಾವಣೆಗೆ ಎಪಿಕ್ ಕಾರ್ಡ್, ಆಧಾರ್ ಕಾರ್ಡ್, ಫೋಟೋ ಮುಖ್ಯ. ಎಲ್ಲಾ ತಹಶೀಲ್ದಾರ್‍ಗಳಿಗೆ ಮಾರ್ಗಸೂಚಿ ನೀಡುವಂತೆ ಜಿಲ್ಲಾಧಿಕಾರಿ ಜೊತೆ ಮಾತನಾಡಿದ್ದೇನೆ. ಎಲ್ಲೆಲ್ಲಿ ಸಮಸ್ಯೆಯಿದೆಯೋ ನನಗೆ ವಾಟ್ಸ್‍ಪ್ ಕಳಿಸಿ ಮುಂದಿನ ಫೆಬ್ರವರಿ ಒಳಗೆ ಮುಖ್ಯ ಶಿಕ್ಷಕರು, ಪ್ರಿನ್ಸಿಪಾಲ್ ಹುದ್ದೆಗೆ ಬಡ್ತಿ ಕೊಡಿಸುತ್ತೇನೆ. ಇಪ್ಪತ್ತು ವರ್ಷಗಳಿಂದ ಕುಟುಂಬದ ಜೊತೆ ಕಾಲ ಕಳೆಯುವುದನ್ನು ಬಿಟ್ಟು ನಿಮ್ಮಗಳ ಸೇವೆಗೆ ಮುಡುಪಾಗಿ ನಾಲ್ಕನೆ ಬಾರಿ ಚುನಾವಣೆಗೆ ಸಜ್ಜಾಗಿದ್ದೇನೆ. ಮತ್ತೊಮ್ಮೆ ಗೆಲ್ಲಿಸಿ ನಿಮ್ಮಗಳ ಸೇವೆ ಮಾಡಲು ಅವಕಾಶ ಕೊಡಿ ಎಂದು ಶಿಕ್ಷಕರುಗಳಲ್ಲಿ ವಿನಂತಿಸಿದರು.

ಕ್ಷೇತ್ರದಲ್ಲಿ ನಲವತ್ತು ಪರ್ಸೆಂಟ್ ಹೆಣ್ಣುಮಕ್ಕಳಿದ್ದಾರೆ. ಎಲ್ಲರನ್ನೂ ಗೌರವಿಸಿ ನನ್ನ ಬಳಿ ಬಂದ ಎಲ್ಲರಿಗೂ ಕೆಲಸ ಮಾಡಿಕೊಟ್ಟಿದ್ದೇನೆ. ಕಾಂಗ್ರೆಸ್‍ನಿಂದ ಎಷ್ಟೆ ಬಲಿಷ್ಟ ಅಭ್ಯರ್ಥಿ ಚುನಾವಣೆಗೆ ನಿಂತರೂ ಗೆಲ್ಲಲ್ಲ. ಎಲ್ಲಾ ಸಮಸ್ಯೆಗಳು ಗೊತ್ತಿದೆ. ಅನುದಾನಿತ ಶಾಲೆ ಶಿಕ್ಷಕರುಗಳ ವೇತನ ನಿಲ್ಲಿಸಲು ಬಿಡಲ್ಲ. ಪ್ರತಿ ವರ್ಷ ಬಡ್ತಿ ಕೊಡಿಸುತ್ತೇನೆ. ಯಾರಿಗೂ ವಂಚಿಸಿ, ಮೋಸ ಮಾಡಿ ಹಣ ಲಪಟಾಯಿಸಿಲ್ಲ. ಇನ್ನೆಂದು ಎಂ.ಎಲ್.ಎ. ಚುನಾವಣೆ ತಂಟೆಗೆ ಹೋಗಲ್ಲ ಎಂದು ಶಿಕ್ಷಕರುಗಳಿಗೆ ವೈ.ಎ.ನಾರಾಯಣಸ್ವಾಮಿ ವಾಗ್ದಾನ ಮಾಡಿದರು.

ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ನಾಗೇಂದ್ರಪ್ಪ, ಜಿಲ್ಲಾ ಉಪನ್ಯಾಸಕರ ಸಂಘದ ಕಾರ್ಯದರ್ಶಿ ಕೆಂಚವೀರಪ್ಪ, ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಿವಣ್ಣ, ಸರ್ಕಾರಿ ನೌಕರರ ಸಂಘದ ಸದಸ್ಯ ಶ್ರೀನಿವಾಸ್, ಮಾಧ್ಯಮಿಕ ಶಿಕ್ಷಕರ ಸಂಘದ ಅಧ್ಯಕ್ಷ ವೃಷಬೇಂದ್ರಯ್ಯ, ದೈಹಿಕ ಶಿಕ್ಷಕರ ಸಂಘದ ಪದಾಧಿಕಾರಿಗಳು, ಪ್ರಾಚಾರ್ಯರ ಸಂಘ, ಐ.ಟಿ.ಐ. ಡಿಪ್ಲಮೋ ಕಾಲೇಜಿನ ಸಂಘದ ಪದಾಧಿಕಾರಿಗಳು, ಬಿಜೆಪಿ.ವಕ್ತಾರ ನಾಗರಾಜ್‍ಬೇದ್ರೆ ಈ ಸಂದರ್ಭದಲ್ಲಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹೂವಿನ ಹಡಗಲಿ | ಬೂದನೂರಿನಲ್ಲಿ ವಿಜೃಂಭಣೆಯಿಂದ ಜರುಗಿದ ಶ್ರೀ ವೀ­ರಭದ್ರೇಶ್ವರ ಜಾತ್ರೆ

ಸುದ್ದಿಒನ್, ವಿಜಯನಗರ, ಹೂವಿನ ಹಡಗಲಿ, ಮೇ. 09  : ತಾಲ್ಲೂಕಿನ ಬೂದನೂರು ಗ್ರಾಮದಲ್ಲಿ ಗುರುವಾರ ಸಂಜೆ 5 ಗಂಟೆಗೆ ವೀ­ರಭದ್ರೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಮಹಾರಥೋತ್ಸವ ಅನೇಕ ಭಕ್ತ ಸಮೂಹದ ನಡುವೆ ವಿಜೃಂಭಣೆಯಿಂದ ಜರುಗಿತು.

ನಾಳೆಯಿಂದ ಮೇ.17ರವರೆಗೂ ಎಲ್ಲಾ ಜಿಲ್ಲೆಗಳಲ್ಲೂ ಮಳೆಯ ಅಬ್ಬರ..!

ಕಳೆದ ಮೂರ್ನಾಲ್ಕು ದಿನದಿಂದ ವರುಣರಾಯನ ದರ್ಶನವಾಗುತ್ತಿದೆ. ಆದರೂ ಕೆಲವೊಂದು ಕಡೆ ಬಿಸಿ ಗಾಳಿಯ ಅನುಭವ ಮಾತ್ರ ಕಡಿಮೆಯಾಗಿಲ್ಲ. ಇಂದು ಸಂಜೆ ವೇಳೆಗೆ ಬೆಂಗಳೂರು ಸೇರಿದಂತೆ ಹಲವೆಡೆ ಜೋರು ಮಳೆಯಾಗಿದೆ. ಇದರಿಂದ ವಾಹನ ಸವಾರರು, ಕೆಲಸಕ್ಕೆ

ಚಿತ್ರದುರ್ಗ | ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಎಸ್‌ಎಸ್‌ಎಲ್‌ಸಿ ಫಲಿತಾಂಶ : 100 ಕ್ಕೆ 100 ಫಲಿತಾಂಶ ಪಡೆದ 13 ಶಾಲೆಗಳು

ಸುದ್ದಿಒನ್, ಚಿತ್ರದುರ್ಗ, ಮೇ. 09 :   ಜಿಲ್ಲೆಯಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ 35 ಮೊರಾರ್ಜಿ ದೇಸಾಯಿ/ಕಿತ್ತೂರು ರಾಣಿ ಚೆನ್ನಮ್ಮ/ಏಕಲವ್ಯ ಮಾದರಿ ವಸತಿ ಶಾಲೆಗಳ 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ

error: Content is protected !!